ಪುತ್ತೂರು: 32 ವರ್ಷಗಳ ಹಿಂದೆ ಶ್ರೀರಾಮ ಮಂದಿರ ನಿರ್ಮಾಣ ನಿಧಿಗೆ 10ರೂ. ನೀಡಿ ಪಡೆದಿದ್ದ ರಶೀದಿಯನ್ನು ಚಿತ್ರಕಲಾವಿರಾದ ಗಿರೀಶ್ ಎಂ ಅವರು ಜೋಪಾನವಾಗಿ ಸಂಗ್ರಹಿಸಿಟ್ಟಿದ್ದಾರೆ.
ಪುತ್ತೂರು ಮೂಲದವರಾದ ಗಿರೀಶ್ ಪ್ರಸ್ತುತ ಹಾಸನ ಹಿಮ್ಸ್ ಸರಕಾರಿ ವೈದ್ಯಕೀಯ ಕಾಲೇಜಿನ ಅಟಾನಮಿ ವಿಭಾಗದ ಚಿತ್ರಕಲಾವಿದನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತನ್ನ ತಂದೆ ಶ್ರೀರಾಮ ಮಂದಿರ ನಿರ್ಮಾಣದ ನಿಧಿಗೆ ನೀಡಿದ ನಿಧಿಯ ರಶೀದಿಯನ್ನು ಜೋಪಾನವಾಗಿ ಇಟ್ಟುಕೊಂಡಿದ್ದಾರೆ.