ಪುತ್ತೂರು: ಪುತ್ತೂರು ಮುಖ್ಯರಸ್ತೆಯಲ್ಲಿರುವ ಧರ್ಮಸ್ಥಳ ಕಟ್ಟಡದಲ್ಲಿ ಕೇಂದ್ರ ಕಛೇರಿಯನ್ನು ಹೊಂದಿರುವ ಪರಿವಾರ ಕ್ರೆಡಿಟ್ ಕೋ- ಓಪರೇಟಿವ್ ಸೊಸೈಟಿಯ ಎಲ್ಲಾ ಶಾಖೆಯ ಸಿಬ್ಬಂದಿಗಳಿಗೆ ಕಾರ್ಯದಕ್ಷತೆ ತರಬೇತಿ ಶಿಬಿರ ಜ.21 ರಂದು ಪುತ್ತೂರು ಬೊಳುವಾರು ಬೈಪಾಸ್‌ನಲ್ಲಿರುವ ಹೋಟೆಲ್ ಉದಯಗಿರಿಯ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿದ್ದ ಮಾಜಿ ನಿರ್ದೇಶಕ ಪಿಡಬ್ಲೂಡಿ ಗುತ್ತಿಗೆದಾರರ ಸಂಘ ಮಂಗಳೂರು ಇದರ ಅಧ್ಯಕ್ಷ ರಾಧಾಕೃಷ್ಣ ನಾೖಕ್ ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ತರಬೇತಿ ಶಿಬಿರ:
ತರಬೇತಿದಾರರಾಗಿ ಆಗಮಿಸಿದ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿವೃತ್ತ ಸಿಇಓ ಗೋಪಾಲಕೃಷ್ಣರವರು ಬ್ಯಾಂಕಿಂಗ್ ವ್ಯವಹಾರದ ಬಗ್ಗೆ, ಸಾಲ ನೀಡುವಾಗ ತೆಗೆದುಕೊಳ್ಳ ಬೇಕಾದ ಮುಂಜಾಗ್ರತೆ ಅದಕ್ಕೆ ಬೇಕಾದ ದಾಖಲೆ ಪತ್ರಗಳು, ಡಿಪೋಸಿಟ್ ತೆಗೆದುಕೊಳ್ಳುವಾಗ ಹಿರಿಯ ನಾಗರೀಕರಿಗೆ ಇರುವ ಸೌಲಭ್ಯಗಳು, ಮೈನಾರಿಟಿ ನಾಮಿನೇಷನ್‌ಗೆ ಬೇಕಾಗುವ ದಾಖಲೆಗಳನ್ನು ಹೇಗೆ ತೆಗೆದುಕೊಳ್ಳಬೇಕು ಗ್ರಾಹಕರ ಜೊತೆ ನಾವು ಹೇಗೆ ವ್ಯವಹರಿಸಬೇಕು, ಪ್ರಸ್ತುತ ಇರುವ ಕಾನೂನುಗಳ ಮಾಹಿತಿ ನೀಡಿದರು. ಗ್ರಾಹಕರಿಗೆ ನಮ್ಮ ಅಗತ್ಯ ಎಷ್ಟಿದೆಯೋ ಅಷ್ಟೇ ಅವರ ಅಗತ್ಯ ನಮಗಿದೆ ಎಂದು ತಿಳುವಳಿಕೆ ನೀಡಿದರು. ಬಳಿಕ ಸಿಬ್ಬಂದಿ ಮತ್ತು ಆಡಳಿತ ಮಂಡಳಿ ಸಭೆ ನಡೆಯಿತು. ಸಿಬ್ಬಂದಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಬೇಡಿಕೆಗಳನ್ನು ತಿಳಿಸಿದರು.
ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಮಾತನಾಡಿ ಸಂಸ್ಥೆಯ ಅಭಿವೃದ್ದಿಯಲ್ಲಿ ಸಿಬ್ಬಂದಿಗಳ ಶ್ರಮ ಬಹಳಷ್ಟಿದೆ. ತರಬೇತಿಯನ್ನು ಸದುಪಯೋಗಿಸಿಕೊಂಡು ಸಂಸ್ಥೆಯ ಏಳಿಗೆಗಾಗಿ ಶ್ರಮಿಸಿ, ಗ್ರಾಹಕರೊಂದಿಗೆ ಉತ್ತಮ ಬಾಂಧವ್ಯದೊಂದಿಗೆ ನಂಬಿಕಸ್ಥರಾಗಿ ವ್ಯವಹರಿಸಿ ಸಂಸ್ಥೆ ಇನ್ನಷ್ಟು ಅಭಿವೃದ್ದಿ ಹೊಂದಲು ಸಹಕರಿಸಿ, ಕಾರ್ಯದಕ್ಷತೆಯನ್ನು ಹೆಚ್ಚಿಸಿಕೊಳ್ಳಿ ಎಂದರು.
ಸೊಸೈಟಿ ಉಪಾಧ್ಯಕ್ಷ ಶಂಕರ್ ನಾೖಕ್, ನಿರ್ದೇಶಕರಾದ ರತ್ನಾಕರ ನಾೖಕ್, ಸುದೇಶ್ ಕುಮಾರ್, ಸದಾಶಿವ ನಾೖಕ್, ಸಂಸ್ಥೆಯ ಪುತ್ತೂರು,ಕಡಬ, ಕೊಕ್ಕಡ,ಮಂಗಳೂರು, ಸುಳ್ಯ ಶಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸುಧಾಕರ್ ಕೆ.ಪಿ. ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಎಕೌಂಟೆಂಟ್ ಜಲಜಾಕ್ಷಿ ವಂದಿಸಿದರು.