ವಿಟ್ಲ: ಬುಡೋಕನ್ ಕರಾಟೆ ಮತ್ತು ಸ್ಪೋರ್ಟ್ಸ್ ಅಸೋಸಿಯನ್ ಕರ್ನಾಟಕ ಇವರ ನೇತೃತ್ವದಲ್ಲಿ ರಾಷ್ಟ್ರ ಮಟ್ಟದ ಕರಾಟೆ ಓಪನ್ ಪಂದ್ಯಾವಳಿ ” ಕೊಪ್ಪ ಟ್ರೋಫಿ ” ಕೊಪ್ಪದ ದಿವ್ಯ ಕ್ಷೇತ್ರ ಹರಿಹರಪುರದಲ್ಲಿ ಜ. 21ರಂದು ನಡೆಯಿತು.ಈ ಪಂದ್ಯಾವಳಿಯಲ್ಲಿ ಕರಾಟೆ ಶಿಕ್ಷಕರಾದ ಸೆನ್ಸಾಯಿ ಮಾಧವ ವಿಟ್ಲ ರವರ ತಂಡ ಭಾಗವಹಿಸಿದ್ದು ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದೆ.
ಕುಮಿಟೆಯಲ್ಲಿ ಓಜಾಲು ಸರಕಾರಿ ಶಾಲೆಯ ಹಂಸಿಕ ಪಿ., ವಿಠಲ ಪದವಿ ಪೂರ್ವ ಕಾಲೇಜಿನ ಭವಿಶ್ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ.ಪುತ್ತೂರು ಬೆಥನಿ ಶಾಲೆಯ ರಿಯೋನ್ ಲಸ್ರಾದೊ,ವಿಟ್ಲ ಜೇಸಿಸ್ ಶಾಲೆಯ ದ್ರುವ, ಸಂತ ವಿಕ್ಟರ್ಸ್ ಪುತ್ತೂರು ಶಾಲೆಯ ಸಾನಿಧ್ಯ, ವಿಟ್ಲ ಮಾದರಿ ಶಾಲೆಯ ಸಾರ್ಥಕ್ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಪುತ್ತೂರು ಬೆಥನಿ ಶಾಲೆಯ ರಿಯೋನ್ ಲಸ್ರಾದೊ ಕುಮಿಟೆಯಲ್ಲಿ ಧ್ವಿತೀಯ ಸ್ಥಾನ, ಕಟಾದಲ್ಲಿ ಮೂರನೇ ಸ್ಥಾನ, ವಿಠಲ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯ ಸಾನ್ವಿ ಕುಮಿಟೆ ಹಾಗೂ ಕಟಾ ವಿಭಾಗದಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ, ಧ್ರುವ ಕುಮಿಟೆ ಹಾಗೂ ಕಟಾ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಪುತ್ತೂರು ಸಂತ ವಿಕ್ಟರ್ಸ್ ಪುತ್ತೂರು ಶಾಲೆಯ ಸಾನಿಧ್ಯ ಕುಮಿಟೆಯಲ್ಲಿ ದ್ವಿತೀಯ ಸ್ಥಾನ, ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಓಜಾಲ ಸರಕಾರಿ ಶಾಲೆಯ ಹಂಸಿಕ ಪಿ ಕುಮಿಟೆಯಲ್ಲಿ ಹಾಗೂ ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಒಡೆದುಕೊಂಡಿದ್ದಾರೆ.ವಿಠಲ ಪದವಿ ಪೂರ್ವ ಕಾಲೇಜಿನ ಭವಿಶ್ ಕುಮಿಟೆ ಹಾಗೂ ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ.ವಿಟ್ಲ ಮಾದರಿ ಶಾಲೆಯ ಸಾರ್ಥಕ್ ಕುಮಿಟೆಯಲ್ಲಿ ದ್ವಿತೀಯ ಹಾಗೂ ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ.