ಪುತ್ತೂರು:ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿ ಷಣ್ಮುಖದೇವ ಪ್ರೌಢಶಾಲೆಗೆ ಕಳ್ಳರು ನುಗ್ಗಿ ಸೊತ್ತುಗಳನ್ನು ಕಳವು ಮಾಡಿರುವ ಕುರಿತು ಪ್ರಭಾರ ಮುಖ್ಯಶಿಕ್ಷಕಿ ಕೃಷ್ಣವೇಣಿ ಎಸ್. ಎಂಬವರ ದೂರಿನಂತೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಜ.20ರಂದು ಸಂಜೆ ಮುಖ್ಯ ಶಿಕ್ಷಕರ ಕೊಠಡಿಗೆ ಬೀಗ ಹಾಕಿ ತೆರಳಿದ್ದು ಜ.23ರಂದು ಬೆಳಿಗ್ಗೆ ಶಾಲಾ ಶಿಕ್ಷಕರಾದ ಅನಿರುದ್ಧ ಮತ್ತು ವೀಣಾಕುಮಾರಿಯವರು ಶಾಲೆಗೆ ಬಂದಾಗ ಪ್ರಕರಣ ಪತ್ತೆಯಾಗಿದೆ.ಶಾಲೆಯ ಮುಖ್ಯ ಶಿಕ್ಷಕರ ಕೊಠಡಿಯ ಬೀಗವನ್ನು ಯಾವುದೋ ಸಾಧನದಿಂದ ಮುರಿದು, ಮುಖ್ಯ ಶಿಕ್ಷಕರ ಕಛೇರಿಯಲ್ಲಿದ್ದ 46,000 ರೂ.ಬೆಲೆ ಬಾಳುವ 1 ಕಂಪ್ಯೂಟರ್ ಮತ್ತು ಮೋನಿಟರ್ ಹಾಗೂ 2 ಕಬ್ಬಿಣದ ಕಪಾಟುಗಳಲ್ಲಿದ್ದ 14,500 ರೂ.ನಗದು ಹಣ, ಅಂದಾಜು 1,500 ರೂ.ಬೆಲೆ ಬಾಳುವ 1 ಚಾರ್ಜರ್ ಲೈಟ್, ಒಟ್ಟು 6000 ರೂ.ಮೌಲ್ಯದ 2 ಕಾರ್ಡ್ಲೆಸ್ ಮೈಕ್, ಅಂದಾಜು 5000 ರೂ.ಬೆಲೆ ಬಾಳುವ 1 ಸ್ಪೀಕರ್ ಸೇರಿದಂತೆ ಅಂದಾಜು 73 ಸಾವಿರ ರೂ.ಮೌಲ್ಯದ ಸೊತ್ತುಗಳನ್ನು ಕಳವು ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಕಲಂ 454,457,380 ಐಪಿಸಿಯಡಿ ಪ್ರಕರಣ ದಾಖಲಾಗಿದೆ.