ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಯುವ, ಇನ್ನರ್ ವೀಲ್ ಕ್ಲಬ್ ಪುತ್ತೂರು ಮತ್ತು ಲಯನ್ಸ್ ಕ್ಲಬ್ ಪುತ್ತೂರು ಮಾಧ್ವರಾಜ್ ಟ್ರಸ್ಟ್ (ಮಲ್ಪೆ) ಮತ್ತು ಅನಿಮಲ್ ಕೇರ್ ಟ್ರಸ್ಟ್ (ಮಂಗಳೂರು) ವತಿಯಿಂದ ಜ.27 ಮತ್ತು 28ರಂದು, ದೇಸಿ ತಳಿಯ ಮನೆ ನಾಯಿಗಳಿಗೆ ಉಚಿತವಾಗಿ ಸಂತಾನಹರಣ ಚಿಕಿತ್ಸೆಯನ್ನು ನಡೆಸಲಾಗುತ್ತಿದೆ ಎಂದು ಅನಿಮಲ್ ಕೇರ್ ಟ್ರಸ್ಟ್ ನ ಮಮತಾ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ವಿಶೇಷವಾಗಿ ನಾಯಿಗಳ ಸಂತನೊತ್ಪತ್ತಿಯನ್ನು ಕಡಿಮೆ ಮಾಡುವ ದೃಷ್ಟಿಯಿಂದ ಈ ಶಿಬಿರದ ಆಯೋಜನೆ ಮಾಡಲಾಗಿದೆ. 100 ನಾಯಿಗಳಿಗೆ ಈ ಶಿಬಿರದಲ್ಲಿ ಸಂತನಾ ಹರಣ ಚಿಕಿತ್ಸೆ ನೀಡಲಾಗುತ್ತದೆ. ಈಗಾಗಲೆ 70 ನಾಯಿಗಳ ನೋಂದಾವಣೆ ಆಗಿದೆ. ಮುಂದಿನ ದಿನಗಳಲ್ಲಿ ಕೂಡ ಶಿಬಿರವು ಜರುಗಲಿರುವುದು ರಿಜಿಸ್ಟರ್ ಮಾಡಲು 9902253064 ಗೆ ಕರೆಮಾಡಿ ನೋಂದಾಯಿಸಬಹುದು ಎಂದವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ರೋಟರಿ ಕ್ಲಬ್ ಪುತ್ತೂರು ಯುವ ಅಧ್ಯಕ್ಷ ಪಶುಪತಿ ಶರ್ಮ, ಪೂರ್ವಾಧ್ಯಕ್ಷ ಭರತ್ ಪೈ, ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಅಶ್ವಿನಿ ಕೃಷ್ಣ ಉಪಸ್ಥಿತರಿದ್ದರು.