ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ  ಬಿ.ಸಿ.ರೋಡ್ ಶಾಖೆ,  ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಕಛೇರಿ ಸ್ಥಳಾಂತರಗೊಂಡು ಉದ್ಘಾಟನೆ

0

*ಸಂಸ್ಥೆ ಸದಾ ಸಮಾಜಮುಖಿಯಾಗಬೇಕು: ಒಡಿಯೂರು‌ ಶ್ರೀ
*ಸಹಕಾರಿಯ ಮುಖಾಂತರ ಹಳ್ಳಿಯ ಉದ್ಧಾರ ಸಾಧ್ಯ: ಸಾಧ್ವೀ ಶ್ರೀ ಮಾತಾನಂದಮಯೀ

ವಿಟ್ಲ: ಸಂಸ್ಥೆ ಸದಾ ಸಮಾಜಮುಖಿಯಾಗಬೇಕು.  ಸಮಾಜದ ಕಟ್ಟಕಡೇಯ ವ್ಯಕ್ತಿಗೂ ಅದರ ಪ್ರಯೋಜನ ಸಿಕ್ಕಿದಾಗ ಸಹಕಾರಿಯ ಧ್ಯೇಯ ಸಾಕಾರವಾಗುತ್ತದೆ. ಬ್ಯಾಂಕ್ ನಲ್ಲಿ ಕೊಡುಕೊಳ್ಳುವಿಕೆಗೆ ಪ್ರಧಾನ ಸ್ಥಾನವಿದೆ. ಸಹಕಾರಿಯಲ್ಲಿ ಪವಿತ್ರವಾದ ಸಂಬಂಧಗಳು ಬೆಳೆದಾಗ ಸಂಸ್ಥೆ ಉನ್ನತ ಮಟ್ಟಕ್ಕೇರಲು ಕಾರಣ. ಸಹಕಾರಿ ಎನ್ನುವ ಶಬ್ದಕ್ಕೆ ಉತ್ತಮ ಅರ್ಥವಿದೆ. ಬ್ಯಾಂಕ್  ಆರಂಭವಾಗಿ ಆ ಬಳಿಕ ಅದು  ಸ್ವಂತ ಕಟ್ಟಡಕ್ಕೆ ಸ್ಥಳಾಂತರ ಆಯಿತು ಎಂದಾದರೆ ಅದು ಬೆಳೆದಿದೆ ಎಂದರ್ಥ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಹೇಳಿದರು. 

ಅವರು ಜ.24ರಂದು ಬಿ.ಸಿ.ರೋಡ್ ನ ರಕ್ತೇಶ್ವರೀ ದೇವಸ್ಥಾನದ ಬಳಿಯ ಪಾರ್ಕ್ ಸ್ಕ್ವೇರ್ ನ ಒಂದನೇ ಮಹಡಿಗೆ ಸ್ಥಳಾಂತರಗೊಂಡ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಬಿ.ಸಿ.ರೋಡ್ ಶಾಖೆ ಹಾಗೂ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಕಛೇರಿಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು‌.

ನಮ್ಮ ಸಹಕಾರಿಯ ಹುಟ್ಟು ಸಮಾಜದ ಬಡಬಗ್ಗರನ್ನು ಮೇಲಕ್ಕೆತ್ತುವ ಪ್ರಯತ್ನವಾಗಿದೆ. ನಮ್ಮ ಮನಸ್ಸು ಸ್ವಚ್ಚವಾಗಿರಬೇಕು. ಶುದ್ದತೆಯನ್ನು ತಿಳಿಯಲು ನಮ್ಮ‌ಜೀವನದಲ್ಲಿ ಪಾರದರ್ಶಕತೆ ಹಾಗೂ ಮಾನವೀಯತೆ ಬೇಕು. ಪ್ರಾಮಾಣಿಕ ಸೇವೆಯಿಂದ ಸಂಸ್ಥೆ ಎತ್ತರಕ್ಕೇರಲು ಸಾಧ್ಯವಾಗಿದೆ. ಆಧುನಿಕತೆಯೊಂದಿಗೆ  ಆಧ್ಯಾತ್ಮ  ಸೇರಿದಾಗ ಬದುಕು ಹಸನಾಗುತ್ತದೆ ಎಂದರು.

ಸಹಕಾರಿಯ ಗೌರವ ಮಾರ್ಗದರ್ಶಕರಾದ ಸಾಧ್ವೀ ಶ್ರೀ ಮಾತಾನಂದಮಯೀ ರವರು ಆಶೀರ್ವಚನ ನೀಡಿ ಗುರುಗಳ ಸಂಕಲ್ಪದಂತೆ ಸಹಕಾರಿ ಮುಂದುವರಿಯುತ್ತಿದೆ. ಸಮಾಜದ ಉನ್ನತಿಗೆ ಸಂಸ್ಥೆಯನ್ನು ಹುಟ್ಟು ಹಾಕಲಾಗಿದೆ. 

ಸಂಸ್ಥೆಯ ಉನ್ನತಿಗೆ  ಮಾರ್ಗದರ್ಶಣ, ಪ್ರಯತ್ನ ಉದ್ದೇಶ ಬಹಳ ಮುಖ್ಯ. ಸೇವೆಯಿಂದ ಸಾರ್ಥಕ್ಯ ಪಡೆಯಲು ಸಾಧ್ಯ. ಒಗ್ಗಟ್ಟಿದ್ದರೆ ಯಶಸ್ಸು ಹೆಚ್ಚು. ಗ್ರಾಮದ ಉದ್ದಾರವಾದರೆ ರಾಷ್ಟ್ರ ಉದ್ದಾರವಾದಂತೆ. ಸಹಕಾರಿಯ ಮುಖಾಂತರ ಹಳ್ಳಿಯ ಉದ್ಧಾರ ಸಾಧ್ಯ. ಮಹಿಳೆಯರು ಸುದೃಡರಾದರೆ ಸಮಾಜ ಬೆಳೆಯುತ್ತದೆ ಎಂದರು.

ವಿಟ್ಲ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ,  ಬಂಟ್ವಾಳ ಬಂಟರ ಸಂಘದ ಅಧ್ಯಕ್ಷರಾದ ಚಂದ್ರಹಾಸ ಶೆಟ್ಟಿ, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ನಿರ್ದೇಶಕರಾದ ಭಾರತಿ ಜಿ.ಭಟ್,  ಧವಳ ಕೋ.ಓಪರೇಟಿವ್ ಸೊಸೈಟಿ ಮಂಗಳೂರು ಇದರ ಅಧ್ಯಕ್ಷರಾದ ಸುದರ್ಶನ್ ಜೈನ್, ಭಗವತಿ ಕನ್ಸ್ ಸ್ಟ್ರೆಕ್ಷನ್ ನ ಸಿವಿಲ್ ಇಂಜಿನಿಯರ್ ಸಂತೋಷ್ ಬಂಗೇರ, ತನಿಷ್ಕಾ ಚಿಟ್ಸ್ ಪ್ರೈವೇಟ್ ಲಿಮಿಟೆಟ್ ನ ನಿರ್ದೇಶಕರಾದ ಯತಿನ್, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಜಿಲ್ಲಾ ಸಂಯೋಜಕರಾದ ವಿಜಯ ಬಿ.ಎಸ್., ಅಬಕಾರಿ ನಿವೃತ್ತ ವೃತ್ತನಿರೀಕ್ಷಕ ರಾಘವ ನಾಯರ್ , ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾದ ಎ.ಸುರೇಶ್ ರೈ, ಉಪಾಧ್ಯಕ್ಷರಾದ ಲಿಂಗಪ್ಪ ಗೌಡ ಪನೆಯಡ್ಕ, ಮುಖ್ಯಕಾರ್ಯನಿರ್ವಹಣಾಧಿಕಾರಿ ದಯಾನಂದ ಶೆಟ್ಟಿ ಬಾಕ್ರಬೈಲ್, ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಯೋಜನಾ ನಿರ್ದೇಶಕರಾದ ಕಿರಣ್ ಉರ್ವ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಜಯಂತಿ ಪ್ರಾರ್ಥಿಸಿದರು. ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕರಾದ ಅಶೋಕ್ ಕುಮಾರ್ ಯು.ಎಸ್. ಸ್ವಾಗತಿಸಿದರು. ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕರಾದ ಭವಾನಿ ಶಂಕರ ಶೆಟ್ಟಿ ಪುತ್ತೂರು ವಂದಿಸಿದರು. ಲೋಕೇಶ್ ರೈ ಬಾಕ್ರಬೈಲು ಕಾರ್ಯಕ್ರಮ ನಿರೂಪಿಸಿದರು.

ರಾಜ್ಯದಲ್ಲಿ ನಮ್ಮ ಸಹಕಾರಿಗೆ 23 ನೇ ಸ್ಥಾನ
ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘವು ಸಂಸ್ಕಾರ, ಸಹಕಾರ, ಸಂಘಟನೆ, ಸಮೃದ್ಧಿ ಧ್ಯೇಯದೊಂದಿಗೆ ಸೇವೆ ನೀಡುತ್ತಿದೆ. ರಾಜ್ಯದಲ್ಲಿ ನಮ್ಮ ಸಹಕಾರಿ ೨೩ ನೇ ಸ್ಥಾನವನ್ನು ಪಡೆದಿರುವುದು ಹೆಮ್ಮೆಯ ವಿಚಾರ. ಈ ಎಲ್ಲಾ ಬೆಳವಣಿಗೆಗೆ ನಿರ್ದೇಶಕ ಮಂಡಳಿ, ಸದಸ್ಯರು, ಸಂಸ್ಥೆಯ ಸಿಬ್ಬಂದಿಗಳ ಸಹಕಾರವೇ ಕಾರಣ. ಶ್ರೀಗಳ ಸಂಕಲ್ಪವನ್ನು ಈಡೇರಿಸುವ ಕೆಲಸ ಅವರ ಆಶೀರ್ವಾದದಿಂದ ನಾವೆಲ್ಲರೂ ಮಾಡುತ್ತಿದ್ದೇವೆ.
ಎ. ಸುರೇಶ್ ರೈ
ಅಧ್ಯಕ್ಷ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ

LEAVE A REPLY

Please enter your comment!
Please enter your name here