ಮಹಾಲಿಂಗೇಶ್ವರ ದೇವಳದ ಸಿಬ್ಬಂದಿ ರಾಮನಾಥರಿಗೆ ಸೇವಾ ನಿವೃತ್ತಿ – ಬೀಳ್ಕೊಡುಗೆ

0

ಪುತ್ತೂರು : ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದದಲ್ಲಿ ಸುಮಾರು 25 ವರ್ಷ ಕರ್ತವ್ಯ ನಿರ್ವಹಿಸಿ ಡಿ.31 ರಂದು ನಿವೃತ್ತಿಗೊಂಡ ದೇವಳದ ಸಿಬ್ಬಂದಿ ರಮಾನಾಥ ಅವರಿಗೆ ಬೀಳ್ಕೊಡುವ ಕಾರ್ಯಕ್ರಮ ಜ.24 ರಂದು ದೇವಳದ ಸಭಾಭವನದಲ್ಲಿ ನಡೆಯಿತು.
ದೇವಳದ ವ್ಯವಸ್ಥಾಪನಾ ಸಮಿತಿ ಮತ್ತು ಸಿಬ್ಬಂದಿಗಳು ಸೇರಿಕೊಂಡು ರಮಾನಾಥ ಮತ್ತು ಅವರ ಪತ್ನಿ ಲೀಲಾ ಅವರಿಗೆ ಶಾಲು ಮತ್ತು ಹಾರಾರ್ಪಣೆ, ಸ್ಮರಣಿಕೆ ನೀಡಿ ಗೌರವಿಸಿದರು. ಈ ಸಂದರ್ಭ ಹಿರಿಯರಾದ ಕಿಟ್ಟಣ್ಣ ಗೌಡ, ಸ್ಯಾಕ್ಸೋಪೋನ್ ವಾದಕ ಡಾ| ಪಿ.ಕೆ.ಗಣೇಶ್ ದಂಪತಿ ಗೌರವ ಸಲ್ಲಿಸಿದರು.


ನಂಬಿಕೆಯ ಕಾವಲುಗಾರ:
ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಸದಸ್ಯರಾದ ರಾಮದಾಸ್ ಗೌಡ, ಬಿ.ಕೆ ವೀಣಾ, ಶೇಖರ್ ನಾರಾವಿ, ಹಿರಿಯರಾದ ಕಿಟ್ಟಣ್ಣ ಗೌಡ, ಮಾಜಿ ಆಡಳಿತ ಮೊಕ್ತೇಸರ ಎನ್ ಕೆ ಜಗನ್ನಿವಾಸ ರಾವ್, ಆಂಜನೇಯ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ, ದೇವಳದ ಕಾರ್ಯನಿರ್ವಹಣಾಧಿಕಾರಿ ಕೆ ವಿ ಶ್ರೀನಿವಾಸ, ಮೋಹಿನಿ ಅವರು ಶುಭ ಹಾರೈಸಿ ಮಾತನಾಡಿ ಯಾವುದೇ ಸರಕಾರಿ ವಲಯ, ಖಾಸಗಿ ವಲಯದಲ್ಲಿ ಸೇವೆ ಸೇರಿದಾಗ ಸಂಭ್ರಮ ಆದರೆ ಕೊನೆಗೆ ಬೀಡುವಾಗ ಬೇಸರ ಸಹಜ. ದೇವರ ಕೆಲಸ ನಿಷ್ಠೆಯಿಂದ ಮಾಡಿದರೆ ದೇವರ ಅನುಗ್ರಹ ಇರುತ್ತದೆ. ಈ ನಿಟ್ಟಿನಲ್ಲಿ ರಮಾನಾಥ ಅವರು ನಂಬಿಕೆಯ ಕಾವಲುಗಾರರಾಗಿದ್ದರು. ಅವರು ಅಗಾದ ಜ್ಞಾನ ಭಂಡಾರ ಹೊಂದಿದ್ದಾರೆ. ಅವರ ಸೇವೆ ಮುಂದೆಯು ಯಾವ ರೀತಿಯಲ್ಲಿ ನೀಡಬಹುದು ಎಂಬುದನ್ನು ನೋಡಿಕೊಂಡು ಪ್ರೌವೃತ್ತಿಯಲ್ಲೂ ಅವರು ಸೇವೆ ಮಾಡುವ ಶಕ್ತಿ ದೇವರು ನೀಡಲಿ ಎಂದರು. ಪ್ರಧಾನ ಅರ್ಚಕರಾದ ವೇ ಮೂ ವಿ.ಎಸ್ ಭಟ್, ವೇ ಮೂ ವಸಂತ ಕೆದಿಲಾಯ, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ಹಿರಿಯರಾದ ಕಾವೇರಿಯಮ್ಮ, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಎನ್ ಸುಧಾಕರ್ ಶೆಟ್ಟಿಯವರ ಪತ್ನಿ ಗೀತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here