ಪುತ್ತೂರು: ಜ.26ರಂದು ಅನುರಾಗ ವಠಾರದಲ್ಲಿ 75ನೇ ಗಣರಾಜ್ಯೋತ್ಸವವನ್ನು ಕರ್ನಾಟಕ ಕಾರ್ಮಿಕ ಸಂಘ, ಕರ್ನಾಟಕ ರಿಕ್ಷಾ ಚಾಲಕ-ಮಾಲಕ ಸಂಘದ ವತಿಯಿಂದ ಆಚರಿಸಲಾಯಿತು.
ಧ್ವಜಾರೋಹಣವನ್ನು ಕಟ್ಟಡ ಕಾರ್ಮಿಕ ಸಂಘದ ಗೌರವ ಸಲಹೆಗಾರರಾದ ಎಂ ಶೇಷಪ್ಪ ಕುಲಾಲ್ ಇವರು ನೆರವೇರಿಸಿದರು. ಒಕ್ಕೂಟದ ಅಧ್ಯಕ್ಷ ಹಾಗೂ ಕಟ್ಟಡ ಕಾರ್ಮಿಕ ಸಂಘದ ಗೌರವಾಧ್ಯಕ್ಷ ಬಿ.ಪುರಂದರ ಭಟ್ ಮಾತನಾಡಿ ನಮ್ಮ ದೇಶಕ್ಕೆ ಸ್ವಾತಂತ್ರ್ಯವನ್ನು ಬ್ರಿಟಿಷರು ನೀಡಿದ್ದರೂ ಕೂಡ ಪ್ರಜೆಗಳಿಗೆ ಯಾವುದೇ ಹಕ್ಕುಗಳು ಇರಲಿಲ್ಲ, ಗಣರಾಜ್ಯದ ನಂತರ ಪ್ರಜೆಗಳಿಗೆ ಮತ್ತು ಅಧಿಕಾರಿಗಳಿಗೆ ಹಕ್ಕುಗಳು ಮತ್ತು ಕರ್ತವ್ಯಗಳನ್ನು ಸಂವಿಧಾನದ ಮೂಲಕ ನೀಡಲಾಯಿತು. ಪ್ರಜೆಗಳೇ ಪ್ರಭುಗಳು ಎಂದು ಬಾಯಿ ಮಾತಿನಲ್ಲಿ ಮಾತ್ರ ಹೇಳಿಕೊಳ್ಳದೆ, ನಾವೆಲ್ಲರೂ ನಮ್ಮ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ತಿಳಿದುಕೊಳ್ಳಬೇಕಾಗಿದೆ ಎಂದು ಹೇಳಿ ಶುಭ ಹಾರೈಸಿದರು.
ನವ ಕರ್ನಾಟಕ ಕಟ್ಟಡ ಕಾರ್ಮಿಕ ಸಂಘದ ಜಿಲ್ಲಾ ಅಧ್ಯಕ್ಷ ಕೆ. ಜಯರಾಮ ಕುಲಾಲ್ ಸ್ವಾಗತಿಸಿ,ಎಂ ಮೋಹನ್ ಆಚಾರ್ಯ ವಂದಿಸಿದರು.ಈ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕ ಸಂಘದ ಉಪಾಧ್ಯಕ್ಷರುಗಳಾದ ಮೋಹನ ಆಚಾರ್ಯ ಮತ್ತು ಈಶ್ವರ ನಾಯ್ಕ ಅಜಲಾಡಿ, ಜೊತೆ ಕಾರ್ಯದರ್ಶಿ ಚಿನ್ನಪ್ಪ ಮಚ್ಚಿಮಲೆ, ಯುವ ತೇಜಸ್ಸು ಟ್ರಸ್ಟ್ ನ ತೇಜಕುಮಾರ್ ಎಸ್ ಹಾಗೂ ಸಂಘದ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.