ಕೊಯಿಲ ಬಡಗನ್ನೂರು ಸ.ಹಿ.ಪ್ರಾ.ಶಾಲಾ ಪ್ರತಿಭಾ ಪುರಸ್ಕಾರ

0

ಬಡಗನ್ನೂರು: ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಬಡಗನ್ನೂರು ನಲ್ಲಿ ಹಿರಿಯ ವಿದ್ಯಾರ್ಥಿ ಸಂಘ ಕೊಯಿಲ ಬಡಗನ್ನೂರು ಇದರ ಸಹಯೋಗದೊಂದಿಗೆ ಗಣರಾಜ್ಯೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಜ.26ರಂದು ಕೊಯಿಲ ಬಡಗನ್ನೂರು ಶಾಲಾ ಆವರಣದಲ್ಲಿ ನಡೆಯಿತು. ಗಣರಾಜ್ಯೋತ್ಸವ ಅಂಗವಾಗಿ ಧ್ವಜಾರೋಹಣ  ಕಾರ್ಯಕ್ರಮ ನಡೆಯಿತು. ಧ್ವಜಾರೋಹಣ ಕಾರ್ಯಕ್ರಮ ಶಾಲಾ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸತೀಶ್ ನಾಯ್ಕ ತಲೆಂಜಿ ನೆರವೇರಿಸಿದರು. ಪುತ್ತೂರು ಉದ್ಯಮಿ ಸತೀಶ್ ರೈ ಕಟ್ಟಾವು ಗೌರವ ವಂದನೆ ಸ್ವೀಕರಿಸಿದರು. ಬಳಿಕ ಅತಿಥಿಗಳಿಂದ ಹಾಗೂ ಗಣ್ಯರಿಂದ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.

ಸಭಾ ಕಾರ್ಯಕ್ರಮ:

ಸಭಾ ಕಾರ್ಯಕ್ರಮವನ್ನು  ಬಡಗನ್ನೂರು ಗ್ರಾ.ಪಂ. ಉಪಾಧ್ಯಕ್ಷೆ ಸುಶೀಲ ಪಕ್ಯೋಡ್ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಶುಭ ಹಾರೈಸಿದರು. ತಾ.ಪಂ ಮಾಜಿ ಅಧ್ಯಕ್ಷೆ ರೇಖಾನಾಗರಾಜ್ ಮಾತನಾಡಿ, ಮಕ್ಕಳ ಪ್ರತಿಭೆಯನ್ನು ಅನಾವರಣಗೊಳಿಸಿಸುವ ವೇದಿಕೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ. ಎಲ್ಲಾ ಮಕ್ಕಳಲ್ಲಿ ಒಂದಲ್ಲೊಂದು ಪ್ರತಿಭೆ ಇರುತ್ತದೆ ಅದನ್ನು ಗುರುತಿಸುವ ಕೆಲಸ  ಪ್ರೋತ್ಸಾಹಿಸುವುದು ನಮ್ಮ ಕರ್ತವ್ಯ ಎಂದು ಹೇಳಿ ಗಣರಾಜ್ಯೋತ್ಸವದ ಶುಭಾಶಯ ಸಲ್ಲಿಸಿದರು. ಕುಂಬ್ರ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಶಶಿಕಲಾ ಬಿ ಸಂದರ್ಭೋಚಿತ ಮಾತನಾಡಿ ಶುಭ ಹಾರೈಸಿದರು. ಬಡಗನ್ನೂರು ಗ್ರಾ.ಪಂ ಅಧ್ಯಕ್ಷೆ ಪುಷ್ಪಲತಾ ದೇವಕಜೆ,  ಸಭಾಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿಭಾ ಪುರಸ್ಕಾರ ಅಂದರೆ ಮಕ್ಕಳಿಗೆ ಸಂತೋಷದ ದಿವಸ, ಮಕ್ಕಳನ್ನು ತಿದ್ದಿ ಮುಖ್ಯ ವಾಹಿನಿಗೆ ತರುವಂತಹ ಕೆಲಸ ಶಿಕ್ಷಕರಿಂದ ನಡಯುತ್ತದೆ. ಮಕ್ಕಳ ಪ್ರತಿಭೆಗಳನ್ನು ಗುರುತಿಸುವ ಪ್ರೋತ್ಸಾಹಿಸುವ ಜತೆಗೆ ಉತ್ತಮ ಸಂಸ್ಕಾರ ನೀಡಿ ಬೆಳೆಸುವ ಜವಾಬ್ದಾರಿ ಹೆತ್ತವರಿಂದ ಆಗಬೇಕು ಆ ಮೂಲಕ ಮುಂದೆ  ಉತ್ತಮ ಪ್ರಜೆಗಳಾಗಿ ಮೂಡಿಬರಲಿ ಎಂದು ಹೇಳಿ  ಗಣರಾಜ್ಯೋತ್ಸವದ ಶುಭ ಹಾರೈಸಿದರು.

ವೇದಿಕೆಯಲ್ಲಿ ಎಸ್.ಡಿ.ಯಂ.ಸಿ  ಮಾಜಿ ಅಧ್ಯಕ್ಷ ಸುಂದರ ನಾಯ್ಕ ತಲೆಂಜಿ , ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಕಾಶ್ ರೈ ಕೊಯಿಲ, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ  ಯಶೋಧ ಬಡಕಾಯೂರು, ಭಜನಾ ತರಬೇತುದಾರ ಶೇಷನ್ ರೆಂಜ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸುಳ್ಯಪದವು ಬಾಲಸುಬ್ರಹ್ಮಣ್ಯ ಅನುದಾನಿತ ಹಿ.ಪ್ರಾ ಶಾಲಾ, ಮುಖ್ಯ ಶಿಕ್ಷಕ ರಾಮಚಂದ್ರ ರಾವ್, ಸರ್ವೋದಯ ಪ್ರೌಢ ಶಾಲಾ ಶಿಕ್ಷಕಿ ಜ್ಯೋತಿ, ಅಂಗನವಾಡಿ ಕಾರ್ಯಕರ್ತೆ ಹೇಮಾವತಿ ಪೇರಾಲು, ಅಕ್ಷರ ದಾಸೋಹಸಿಬ್ಬಂದಿಗಳು, ಶಿಕ್ಷಕ ವರ್ಗದವರು, ಶಾಲಾಭಿವೃದ್ಧಿ ಸಮಿತಿ ಸದಸ್ಯರು ಮತ್ತು ಶಾಲಾ  ಮಕ್ಕಳು ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಪುಷ್ಪಾವತಿ  ಸ್ವಾಗತಿಸಿ, ಶೈಕ್ಷಣಿಕ ವರ್ಷದ ವರದಿ ವಾಚಿಸಿದರು. ಗೌರವ ಶಿಕ್ಷಕಿ ಸರಳಾ ಡಿ ವಂದಿಸಿದರು. ಶಾಲಾ ಸಹ ಶಿಕ್ಷಕ ಗಿರೀಶ್  ಕಾರ್ಯಕ್ರಮ ನಿರೂಪಿಸಿದರು. ಜ್ಞಾನ ದೀಪ ಶಿಕ್ಷಕಿ ಪೂರ್ಣಿಮಾ ಬಹುಮಾನ ವಾಚಿಸಿದರು. 

ಸನ್ಮಾನ:

ಶಾಲಾ ಎಸ್.ಡಿ.ಯಂ.ಸಿ ಮಾಜಿ ಅಧ್ಯಕ್ಷ ಸುಂದರ ನಾಯ್ಕ ತಲೆಂಜಿ, ಕುಣಿತ ಭಜನಾ ತರಬೇತುದಾರ ಶೇಷನ್ ರೆಂಜ, ಕರಾಟೆ ಪಂದ್ಯಾಟದಲ್ಲಿ ರಾಜ್ಯ ಮಟ್ಟದಲ್ಲಿ ದ್ವೀತಿಯ ಸ್ಥಾನ ಪಡೆದು ಬೆಳ್ಳಿಯ ಪದಕ, ಹಾಗೂ ರಾಷ್ಟ್ರ ಮಟ್ಟದಲ್ಲಿ  ಚಿನ್ನದ ಪದಕ ಶಾಲಾ ವಿದ್ಯಾರ್ಥಿ ಅನಸ್ ,  17 ರ ವಯೋಮಾನದ ಬಾಲಕಿಯರ  ಗುಂಡೇಸತ  ಸ್ಪರ್ಧೆಯಲ್ಲಿ  ರಾಷ್ಟ್ರ ಮಟ್ಟದ ಅಯ್ಕೆಯಾದ ಪಟ್ಟೆ ಪ್ರತಿಭಾ ಪ್ರೌಢಶಾಲಾ ವಿದ್ಯಾರ್ಥಿನಿ ಕುಮಾರಿ ತನುಶ್ರೀ ಬಡಕಾಯೂರು, ಹಾಗೂ ಗ್ರಾ.ಪಂ ಅಧ್ಯಕ್ಷೆ ಪುಷ್ಪಲತಾ ಎಂ ಮತ್ತು ಬಡಗನ್ನೂರು ಸ್ವಚ್ಛವಾಹಿನಿ ಸದಸ್ಯರಾದ ಲತಾ ಪದಡ್ಕ, ಸವಿತಾ ಪದಡ್ಕ ವಸಂತಿ ಪದಡ್ಕ ಇವರುಗಳನ್ನು ಶಾಲು ಹಾರ, ಫಲಪುಷ್ಪ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.

ಪ್ರತಿಭಾ ಪುರಸ್ಕಾರ ಅಂಗವಾಗಿ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು. ಬಳಿಕ ಶಾಲಾ ಮಕ್ಕಳಿಂದ ಮತ್ತು ಅಂಗನವಾಡಿ ಪುಟಾಣಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here