ʼಅಶೋಕ ಜನಮನʼ ದೀಪಾವಳಿ ಕಾರ್ಯಕ್ರಮಕ್ಕೆ 22 ವಿವಿಧ ಸಮಿತಿಗಳ ನೇಮಕ: ಸುಮಾ ಅಶೋಕ್ ರೈ

0

ಪುತ್ತೂರು: ಅಕ್ಟೋಬರ್ 20 ರಂದು ದೀಪಾವಳಿ ಹಬ್ಬದ ಪ್ರಯುಕ್ತ ನಡೆಯುವ 13 ನೇ ವರ್ಷದ ಅಶೋಕ ಜನಮನ 2025 ಕಾರ್ಯಕ್ರಮ ನಡೆಸಲು ಸಹಕಾರಿಯಾಗುವಂತೆ 23 ವಿವಿಧ ಸಮಿತಿಗಳನ್ನು ರಚಿಸಲಾಗಿದೆ ಎಂದು ರೈ ಎಸ್ಟೇಟ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಪ್ರವರ್ತಕಿ,ಶಾಸಕ ಅಶೋಕ್ ರೈ ಅವರ ಧರ್ಮಪತ್ನಿ ಸುಮಾ ಅಶೋಕ್ ರೈ ತಿಳಿಸಿದರು.
ಗುರುವಾರ ಟ್ರಸ್ಟ್ ಸಭೆಯಲ್ಲಿ ವಿಷಯ ತಿಳಿಸಿದರು. ಎಲ್ಲಾ ಸಮಿತಿಗಳಿಗೂ ವಿವಿಧ ಜವಾಬ್ದಾರಿಯನ್ನು ವಹಿಸಲಾಗಿದೆ ಎಂದು ಹೇಳಿದರು.

5 ತಂಡಗಳಲ್ಲಿ ಪ್ರಚಾರ
ಕಾರ್ಯಕ್ರಮದ ಬಗ್ಗೆ ಪ್ರತೀ ಗ್ರಾಮಕ್ಕೆ ತೆರಳಿ ಪ್ರಚಾರವನ್ನು ನಡೆಸುವ ಮೂಲಕ ಗ್ರಾಮಸ್ಥರನ್ನು ಆಹ್ವಾನಿಸಲಾಗುತ್ತದೆ. ಸ್ಥಳೀಯ ಗ್ರಾಮಸ್ಥರು ಈ ಪ್ರಚಾರ ಕಾರ್ಯಕ್ರಮದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲಿದ್ದಾರೆ. ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲೂ ಪ್ರಚಾರ ಮತ್ತು ಆಹ್ವಾನ ಸಭೆ ನಡೆಯಲಿದೆ ಈ ಕಾರ್ಯಕ್ರಮಕ್ಕೆ ಎಲ್ಲಾ ಬಂಧುಗಳು ಸಹಕಾರ ನೀಡಬೇಕು ಎಂದು ಸುಮಾ ಅಶೋಕ್ ರೈ ಮನವಿ ಮಾಡಿದರು.

ವಿವಿಧ ಸಮಿತಿಗಳು:
ನೀರಾವರಿ ಸಮಿತಿ, ಸಾಂಸ್ಕೃತಿಕ ಸಮಿತಿ, ಗೂಡುದೀಪ ಸಮಿತಿ ಪ್ರಚಾರ,ಮಾಧ್ಯಮ ಸಮಿತಿ, ನಿರ್ವಹಣಾ ಸಮಿತಿ, ವಸ್ತ್ರ ಸಂಯೋಜನೆ ಸಮಿತಿ, ಗ್ರಾಮ ಭೇಟಿ ಸಮಿತಿ, ವಸ್ತ್ರ ವಿತರಣಾ ಸಮಿತಿ, ಆರೋಗ್ಯ ಸಮಿತಿ, ಅತಿಥಿ ಸತ್ಕಾರ ಸಮಿತಿ,‌ಮಾಹಿತಿ ಕೇಂದ್ರ, ವೇದಿಕೆ ಸಮಿತಿ, ವಾಹನ ನಿರ್ವಹಣಾ ಸಮಿತಿ, ಸ್ವಯಂ ಸೇವಕರ ಸಮಿತಿ, ಆಹಾರ ವಿತರಣೆ ಸಮಿತಿ, ಆಹಾರ ಸಿದ್ದತೆ ಸಮಿತಿ,‌ಚಪ್ಪರ ಸಮಿತಿ, ನೋಂದಾವಣೆ ಸಮಿತಿ, ವೈಧಿಕ ಸಮಿತಿ, ಸ್ವಾಗತ ಸಮಿತಿ,ವೇದಿಕೆ ಅಲಂಕಾರ ಸಮಿತಿಗಳನ್ನು ರಚನೆ ಮಾಡಲಾಗಿದೆ.

ಕರಪತ್ರ ಬಿಡುಗಡೆ
ಇದೇ ಸಂದರ್ಭದಲ್ಲಿ‌ ಅಶೋಕ‌ ಜನಮನ‌ ಕಾರ್ಯಕ್ರಮದ ಕರಪತ್ರವನ್ನು ಸುಮಾ ಅಶೋಕ್ ರೈ ಬಿಡುಗಡೆ ಮಾಡಿದರು.

ಸಭೆಯಲ್ಲಿ ರೈ ಚಾರಿಟೇಬಲ್ ಟ್ರಸ್ಡ್ ಮಾಧ್ಯಮ ಸಲಹೆಗಾರ ಕೃಷ್ಣಪ್ರಸಾದ್ ಬೊಳ್ಳಾವು, ಟ್ರಸ್ಟ್ ನ ಯೋಗೀಶ್ ಸಾಮಾನಿ, ಜಯಪ್ರಕಾಸ್ ಬದಿನಾರ್, ಚಂದ್ರಶೇಖರ ಕಲ್ಲಗುಡ್ಡೆ, ಸಿದ್ದಿಕ್ ಸುಲ್ತಾನ್, ದಯಾನಂದ ರೈ ಕೊಮ್ಮಂಡ, ಸಾಹಿರಾ ಬನ್ನೂರು, ಪ್ರವೀಣ್ ಆಚಾರ್ಯ, ಮೋಹನ್ ಗುರ್ಜಿನಡ್ಕ,ನೆಬಿಸಾ ಬಪ್ಪಳಿಗೆ, ಚಂದ್ರಪ್ರಭಾ, ಹರೀಶ್ ಬಂಗೇರಾ,ಪೂರ್ಣಿಮಾ ರೈ,ಅನಿಮಿನೇಜಸ್, ಹಕೀಂ ಬೊಳುವಾರು, ಧರಣಿ ಕೆಯ್ಯೂರು,ರೇವತಿ ಬಡಗನ್ನೂರು,ಬಾಬು ರೈ ಕೋಟೆ, ಲೋಕೇಶ್ ಪಡ್ಡಾಯೂರು, ಬಾಬು ಮರಿಕೆ, ಗಿರೀಶ್ ಸಂಟ್ಯಾರ್, ರಾಕೇಶ್ ರೈ ಕುದ್ಕಾಡಿ, ಸತೀಶ್ ರೈ ನಿಡ್ಪಳ್ಫಿ ಜಯಶೀಲ ಲಿಂಗಪ್ಪ, ಮತ್ತಿತರರು ಉಪಸ್ಥಿತರಿದ್ದರು.
ಟ್ರಸ್ಟ್ ಕಾರ್ಯಾಧ್ಯಕ್ಷರಾದ ಸುದೇಶ್ ಶೆಟ್ಟಿ‌ಸ್ವಾಗತಿಸಿದರು. ಕಚೇರಿ ಸಿಬಂದಿ ಲಿಂಗಪ್ಪ, ರಚನಾ ರೈ ವಿವಿಧ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here