ಪುಣಚ : ಸುಮಾರು 300 ವರ್ಷಗಳ ಇತಿಹಾಸವಿರುವ ಕಾಶಿ ನಿವಾಸಿಗಳಾದ ಶ್ರೀ ಮನ್ನಾರಾಯಣಾನಂತ ಸ್ವಾಮಿಗಳಿಂದ ಸ್ಥಾಪಿತವಾದ ಪುಣಚ ಮೂಡಂಬೈಲು ಶ್ರೀ ಗೋಪಾಲಕೃಷ್ಣ ದೇವರ ಮಠವು ತೀರಾ ಶಿಥಿಲಾವ್ಯವಸ್ಥೆಯಲ್ಲಿದ್ದು ಇದರ ಜೀರ್ಣೋದ್ಧಾರ ಕೆಲಸ ಆರಂಭಗೊಂಡಿದ್ದ ಹಿನ್ನಲೆಯಲ್ಲಿ ಪೂರ್ವಭಾವಿ ಸಭೆಯು ಮೂಡಂಬೈಲು ಮಹಿಷಮರ್ದಿನಿ ಭಜನಾಮಂದಿರದ ವೈಭವೀ ಕಲಾಭವನದಲ್ಲಿ ಜ.23 ನಡೆಯಿತು.
ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈಯವರ ಗೌರವಾಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಊರವರೆಲ್ಲರ ಸಹಭಾಗಿತ್ವದೊಂದಿಗೆ ನೂರಿನ್ನೂರು ವರ್ಷಗಳ ಮುಂದಾಲೋಚನೆಯಿಟ್ಟುಕೊಂಡು ಮಠದ ಜೀರ್ಣೋದ್ಧಾರ ಕೆಲಸ ಕಾರ್ಯಗಳು ಯಶಸ್ವಿಯಾಗಿ ನಡೆಯಲಿ ಎಂದು ಸಲಹೆ ನೀಡಿದರು. ಸಮಿತಿಯ ಗೌರವಾಧ್ಯಕ್ಷ ಎಸ್ ಆರ್ ರಂಗಮೂರ್ತಿ ಜೀರ್ಣೋದ್ಧಾರದ ಮುಂದಿನ ರೂಪುರೇಷೆಗಳ ಬಗ್ಗೆ ಮಾರ್ಗದರ್ಶನ ನೀಡಿದರು. ಅಧ್ಯಕ್ಷರಾದ ನೀರ್ಕಜೆ ಜಯಶ್ಯಾಮ ಸಮಿತಿಯ ಜವಾಬ್ದಾರಿ, ಪದಾಧಿಕಾರಿಗಳ ಪಟ್ಟಿಯನ್ನು ಉಲ್ಲೇಖಿಸಿದರು.
ಪುಣಚ ಗ್ರಾ.ಪಂ.ಅಧ್ಯಕ್ಷೆ ಬೇಬಿ ಪಟಿಕಲ್ಲು, ಉದಯಕುಮಾರ್ ದಂಬೆ, ಎಂ.ಎಸ್ ಮಹಮ್ಮದ್, ಸಮಿತಿಯ ಕಾರ್ಯಾಧ್ಯಕ್ಷ ದೊಡ್ಡಮನೆ ರಾಜೇಶ್ವರ ಶಾಸ್ತ್ರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗೋಕುಲ ರಾಮಕೃಷ್ಣ ಶಾಸ್ತ್ರಿ ಪ್ರಸ್ತಾವನೆಗೈದರು. ಮುರಳೀಧರ ಶಾಸ್ತ್ರಿ ಪ್ರಾರ್ಥಿಸಿದರು, ನಡುಮನೆ ಈಶ್ವರ ಶಾಸ್ತ್ರಿ ಸ್ವಾಗತಿಸಿ, ಸಮಿತಿಯ ಕಾರ್ಯನಿರ್ವಾಹಕ ಜಯಕೃಷ್ಣ ಶಾಸ್ತ್ರಿ ಧನ್ಯವಾದಗೈದರು. ರಾಮಕೃಷ್ಣ ಬಿ. ಕಾರ್ಯಕ್ರಮ ನಿರೂಪಿಸಿದರು.