ಪುತ್ತೂರು: ಮಂಗಳೂರು ತಣ್ಣೀರು ಬಾವಿ ಬೀಚ್‌ನಲ್ಲಿ ಜ.26 ರಂದು ಮಂಗಳೂರು ಸರ್ಫ್ ಕ್ಲಬ್ ಆಯೋಜನೆ ಮಾಡಿದ ಡೆನ್ ಡೆನ್ ಬೀಚ್ ಸ್ವಿಮ್ಮಿಂಗ್‌ನಲ್ಲಿ 1.5 ಕೀ ಮೀ ಈಜು ಸ್ಪರ್ಧೆಯಲ್ಲಿ ಪುತ್ತೂರು ಅಕ್ವಾಟಿಕ್ ಕ್ಲಬ್‌ನ ಈಜುಗಾರ ರಾದ ಅನಿಕೇತ ಎನ್. (ಕಾವೇರಿ ಕಟ್ಟೆ ನಿವಾಸಿ ನಳಿನಾಕ್ಷ ಮತ್ತು ಗಾಯತ್ರಿ ದಂಪತಿಯ ಪುತ್ರ) ಚಿನ್ನದ ಪದಕ, ನಂದನ್ ನಾಯಕ್ (ಮುಕ್ವೆ ನಿವಾಸಿ ರವಿ ಸಂಪತ್ ಮತ್ತು ಕ್ಷಮಿತಾ ದಂಪತಿಯ ಪುತ್ರ) ಕಂಚಿನ ಪದಕ, ಲಾಸ್ಯ ಕಿಶನ್ (ತೆಂಕಿಲ ಕಿಶನ್ ಮತ್ತು ಡೀನಾ ದಂಪತಿಯ ಪುತ್ರಿ) ಕಂಚಿನ ಪದಕ ಪಡೆದಿದ್ದಾರೆ. ಇವರು ಪುತ್ತೂರು ಅಕ್ವಾಟಿಕ್ ಕ್ಲಬ್‌ನ ಪಾರ್ಥ ವಾರಣಾಸಿ, ನಿರೂಪ್ ಜಿ.ಆರ್, ದೀಕ್ಷಿತ್, ರೋಹಿತ್ ಇವರಲ್ಲಿ ತರಬೇತಿಯನ್ನು ಪಡೆಯತ್ತಿದ್ದಾರೆ.