ಮರಿಲ್ ಇ.ಎಸ್. ಆರ್.ಪ್ರೆಸಿಡೆನ್ಸಿ ಶಾಲೆಯಲ್ಲಿ ಗಣರಾಜ್ಯೋತ್ಸವ ದಿನಾಚರಣೆ

0

ಪುತ್ತೂರು: ಮರಿಲ್ ಇ.ಎಸ್. ಆರ್.ಪ್ರೆಸಿಡೆನ್ಸಿ ಶಾಲೆಯಲ್ಲಿ 75 ನೇ ಗಣರಾಜ್ಯೋತ್ಸವ ದಿನಾಚರಣೆ ಆಚರಿಸಲಾಯಿತು. ಶಾಲಾ ಸಂಚಾಲಕ ಜಾಕೀರ್ ಹುಸೇನ್ ಧ್ವಜಾರೋಹಣವನ್ನು ನೆರವೇರಿಸಿದರು. ಆಡಳಿತ ಮಂಡಳಿಯ ಸದಸ್ಯ ವಿ ಕೆ ಶರೀಫ್ ವಿದ್ಯಾರ್ಥಿಗಳಿಗೆ ಸಂವಿಧಾನ ದೊರಕಿದ ರೀತಿಯನ್ನು ವಿವರಿಸಿದರು. ಶಾಲಾ ಮುಖ್ಯ ಶಿಕ್ಷಕಿ ತಾಜುನ್ನಿಷಾ ರವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ವೇದಿಕೆಯಲ್ಲಿ ಆಡಳಿತ ಮಂಡಳಿಯ ಮಕ್ಸೂದ್, ಮುಫೀದಾ ಬಾನು, ಶಿಕ್ಷಕರ ರಕ್ಷಕ ಸಂಘದ ಸದಸ್ಯೆ ಸುನೈನಾ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ 5ನೇ ತರಗತಿಯ ನೆಫೀಸ ಫಿದಾ ಸ್ವಾಗತಿಸಿ, 6ನೇ ತರಗತಿಯ ಮೊಹಮ್ಮದ್ ರಾಫಿದ್ ವಂದಿಸಿದರು ಹಾಗೂ 6ನೇ ತರಗತಿಯ ಝಿಸಾನದ ಇಬ್ರಾಹಿಂ ನಿರೂಪಿಸಿದರು.

LEAVE A REPLY

Please enter your comment!
Please enter your name here