ಕಡಬ: ದೋಲ್ಪಾಡಿ ಗ್ರಾಮದ ದಿ.ಗಣಪಯ್ಯ ಪಟೇಲ್ ರ ಧರ್ಮಪತ್ನಿ ಗಂಗಮ್ಮ (87 ವ.) ಅವರು ಅಲ್ಪಕಾಲದ ಅಸೌಖ್ಯದಿಂದ ಜ.25ರಂದು ಸಂಜೆ ನಿಧನರಾದರು.
ಮೃತರು ಪುತ್ರರಾದ ನಿತ್ಯಾನಂದ, ಜಗನ್ನಾಥ, ಯಶವಂತ ಪುತ್ರಿಯರಾದ ಯಶೋದೆ ಆನೆಮನೆ, ನಳಿನಿ ಕಾರ್ಯ, ಪ್ರೇಮ ಬಾನಡ್ಕ, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರನ್ನು ಅಗಲಿದ್ದಾರೆ.