ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘದ ವಿವೇಕ ನಗರ, ತೆಂಕಿಲದ ಸಂಕೀರ್ಣದಲ್ಲಿರುವ ವಿದ್ಯಾಸಂಸ್ಥೆಗಳಾದ ಆಂಗ್ಲ ಮಾಧ್ಯಮ ಶಾಲೆ, ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯ ಹಾಗೂ ನರೇಂದ್ರ ಪದವಿ ಪೂರ್ವ ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ 75ನೇ ಗಣರಾಜ್ಯೋತಸವ ದಿನಾಚರಣೆಯನ್ನು ವಿದ್ಯಾಸಂಸ್ಥೆಗಳ ಆವರಣದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.
ಘೋಷ್ ವೃಂದದೊಂದಿಗೆ ವೇದಿಕೆಗೆ ಆಗಮಿಸಿದ ಅತಿಥಿಗಳು ಸಂವಿಧಾನ ಶಿಲ್ಪಿ ಬಿ.ಆರ್ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಸಮಾರಂಭದ ಅತಿಥಿಗಳಾಗಿ ನಿವೃತ್ತ ಯೋಧ ಬಾಲಕೃಷ್ಣ ಪಟ್ಟೆ ಹಾಗೂ ಭಾರತೀಯ ಸೇನಾಪಡೆ ಯೋಧ ನಾಯಕ್ ಶ್ರೀ ಜಯ ಉಪಸ್ಥಿತರಿದ್ದರು.ನಾಯಕ್ ಶ್ರೀ ಜಯ ಪುತ್ತೂರು ಇವರು ದ್ವಜಾರೋಹಣಗೈದರು ಹಾಗೂ ಬಾಲಕೃಷ್ಣ ಪಟ್ಟೆ ಗಣರಾಜ್ಯೋತ್ಸವದ ಸಂದೇಶವನ್ನು ನೀಡಿದರು. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ ಶಿವಪ್ರಕಾಶ್ ಎಂ ಅತಿಥಿಗಳನ್ನು ಗೌರವಿಸಿದರು.
ನರೇಂದ್ರ ಪದವಿಪೂರ್ವ ಕಾಲೇಜಿನ ಸುಮಾ ಇವರು ಸ್ವಾಗತಿಸಿ,ಶಾಲಾ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಮಥ ಎಂ ಭಟ್ ,ವಿವೇಕಾನಂದ ಬಿ.ಎಡ್ ಕಾಲೇಜಿನ ವಿದ್ಯಾರ್ಥಿ ಹರ್ಷಿತ್ ವಂದಿಸಿದರು.ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಒಂಬತ್ತನೇಯ ತರಗತಿ ಕುಮಾರಿ ವರ್ಣ ಕೆ ಪಾಂಬಾರು ಹಾಗೂ ವರ್ಣ ಪಿ.ಡಿ,ಕು. ದರ್ಶನ್ ಕಾರ್ಯಕ್ರಮವನ್ನು ನಿರ್ವಹಿಸಿದರು.ವೇದಿಕೆಯಲ್ಲಿ ನಾಲ್ಕು ಸಂಸ್ಥೆಗಳ ಮುಖ್ಯಸ್ಥರು, ಆಡಳಿತ ಮಂಡಳಿಯ ಅಧ್ಯಕ್ಷರು, ಸಂಚಾಲಕರು ಹಾಗೂ ಸದಸ್ಯರು, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಹರಿಣಾಕ್ಷಿ ಜೆ. ಶೆಟ್ಟಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.