ಕೆಯ್ಯೂರು :ಕೆಯ್ಯೂರು ಶ್ರೀ ದುರ್ಗಾಭಜನಾ ಮಂಡಳಿ, ಇದರ ವತಿಯಿಂದ ನಡೆಯುವ ಶ್ರೀ ಮಹಿಷಮರ್ದಿನಿ ದುರ್ಗಾಪರಮೇಶ್ವರಿ ದೇವಸ್ಥಾನ ಕೆಯ್ಯೂರಿನಲ್ಲಿ 33ನೇ ವರ್ಷದ ನಗರ ಭಜನೆಯು ನ:19ರಂದು ಕೆಯ್ಯೂರು ಶ್ರೀ ಕ್ಷೇತ್ರ ಕೆಯ್ಯೂರು ದೇವಿ ಸನ್ನಿಧಿಯಿಂದ ಪ್ರಾರಂಭಗೊಂಡು ಜ.26ರ ತನಕ 69ದಿನಗಳ ಪರ್ಯಂತ ರಾತ್ರಿ ನಗರ ಭಜನೆಯು ನಡೆದು ಜ.27ರಂದು ಬೆಳಿಗ್ಗೆ 6ಗಂಟೆಗೆ ದೇವಿ ಸನ್ನಿಧಿಯಲ್ಲಿ ದೀಪೋಜ್ವಲನಗೊಂಡು ಊರ ಮತ್ತು ಪರವೂರ ಭಜನಾ ವೃಂದದವರಿಂದ ಏಕಾಹ ಭಜನಾ ಮಂಗಲೋತ್ಸವವು ಶ್ರೀ ಕ್ಷೇತ್ರದಲ್ಲಿ ವಿಜೃಂಭಣೆಯಿಂದ ನಡೆಯಿತು.
ದೇವಳದ ಪ್ರಧಾನ ಆರ್ಚಕರಾದ ಶ್ರೀನಿವಾಸರಾವ್,ಆನಂದ ಭಟ್ ಕೆಯ್ಯೂರು ವೈಧಿಕ ವಿಧಿ ನೇರವೇರಿಸಿ, ಮಧುಸೂಧನ್ ಭಟ್ ಕಜೆಮೂಲೆ ಸಹಕರಿಸಿ, ಏಕಾಹ ಭಜನಾ ಮಂಗಲೋತ್ಸವವವನ್ನು ಸಮಾಪ್ತಿಗೊಳಿಸಿದರು. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಆಡಳಿತ ಮಂಡಳಿ, ಶ್ರೀ ಕ್ಷೇತ್ರದ ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯರು, ಶ್ರೀ ದುರ್ಗಾ ಭಜನಾ ಮಂಡಳಿ ಕೆಯ್ಯೂರು ಗೌರವದ್ಯಕ್ಷ ಕೃಷ್ಣ ಭಟ್ ಕುಡ್ಪಲ್ತಡ್ಕ, ಪದಾಧಿಕಾರಿಗಳು, ಭಕ್ತಾಧಿಗಳು ಉಪಸ್ಥಿತರಿದ್ದರು. 69ದಿನಗಳ ಕಾಲ ರಾತ್ರಿ ನಡೆದ ನಗರ ಭಜನಾ ಕಾರ್ಯಕ್ರಮದಲ್ಲಿ ನಿತ್ಯ ಅರ್ಚಕರಾಗಿ ಸಹಕರಿಸಿದ ಸುಬ್ರಮಣ್ಯ ಭಟ್ ಅರ್ತ್ಯಡ್ಕ ಇವರನ್ನು ಕೃತಜ್ಞತಾ ಪೂರ್ವಕವಾಗಿ ಅಭಿನಂದಿಸಲಾಯಿತು.
ಏಕಾಹ ಭಜನಾ ಕಾರ್ಯಕ್ರಮದಲ್ಲಿ ಒಟ್ಟು 18 ತಂಡಗಳು ಭಾಗವಹಿಸಿ ಶ್ರೀ ದೇವರ ನಾಮ ಸಂಕೀರ್ತನೆಯಲ್ಲಿ ಪಾಲ್ಗೊಂಡು ಶ್ರೀ ದೇವಿಯ ಅನುಗ್ರಹಕ್ಕೆ ಪಾತ್ರರಾಗಿ ಕಾರ್ಯಕ್ರವನ್ನು ಯಶಸ್ವಿಗೊಳಿಸಿದರು.ಕೆಯ್ಯೂರು ಶ್ರೀ ದುರ್ಗಾ ಭಜನಾ ಮಂಡಳಿ ಅಧ್ಯಕ್ಷ ದೇವಣ್ಣ ನಾಯ್ಕ 69ದಿನಗಳ ಕಾಲ ನಡೆದ ನಗರ ಭಜನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಶ್ರೀ ದುರ್ಗಾ ಭಜನಾ ಮಂಡಳಿ ಕೆಯ್ಯೂರು ಪದಾಧಿಕಾರಿಗಳು,ಅರ್ಚಕವೃಂದ, ನೌಕರ ವೃಂದ, ಭಕ್ತಾಧಿಗಳಿಗೆ, ಊರ ಹತ್ತು ಸಮಸ್ತರಿಗೆ, ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿ, ಧನ್ಯವಾದ ಸಲ್ಲಿಸಿದರು. ಶ್ರೀ ಕ್ಷೇತ್ರಕ್ಕೆ ಹೂವಿನ ಅಲಂಕಾರವನ್ನು ಶ್ರೀ ಕ್ಷೇತ್ರ ದೇವಳದ ವ್ಯವಸ್ಥಾಪನಾ ಸಮಿತಿ ಮಾಜಿ ಅದ್ಯಕ್ಷರು ಶಶಿಧರ ರಾವ್ ಬೊಳಿಕಲ, ಶ್ರೀ ಕ್ಷೇತ್ರದ ಮಾಜಿ ಮೊಕ್ತೇಶರರು ಮೋಹನ ರೈ ಓಲೆಮುಂಡೋವು, ಅಜಿತ್ ಕುಮಾರ್ ರೈ ದೇರ್ಲ, ಭಾಗ್ಯೇಶ್ ರೈ ಕೆಯ್ಯೂರು, ಶಿವಶ್ರೀರಂಜನ್ ರೈ ದೇರ್ಲ ಸೇವೆಗೈದ ಹೂವಿನಿಂದ ಶೃಂಗಾರಗೊಂಡಿತು. ರಾತ್ರಿ ದಕ್ಷೀಣೋತ್ತರ ಜಿಲ್ಲೆಯ ಪ್ರಸಿದ್ದ ಕಲಾವಿದರ ಹಾಗೂ ಹನುಮಗಿರಿ ಮೇಳದ ಅತಿಥಿ ಕಲಾವಿದರ ಸಮಾಗಮದಲ್ಲಿ ಭಸ್ಮಾಸುರ ಮೋಹಿನಿ ಮತ್ತು ಶಬರಿಮಲೆ ಶ್ರೀ ಅಯ್ಯಪ್ಪ ಪೌರಾಣಿಕ ಯಕ್ಷಗಾನ ಬಯಲಾಟ ನಡೆದು, ಸುಡುಮದ್ದು ಕಾರ್ಯಕ್ರಮ ನಡೆಯಿತು.