ಕೆಯ್ಯೂರು ಶ್ರೀ ದುರ್ಗಾ ಸ್ಪೋರ್ಟ್ಸ್ ಕ್ಲಬ್ ಕೆಪಿಎಲ್ ಸೀಸನ್ 3 ಕ್ರಿಕೆಟ್ ಪಂದ್ಯಾಟ  ಸಮಾರೋಪ ಸಮಾರಂಭ- ಸನ್ಮಾನ 

0

ಭಾವೈಕ್ಯತೆಯ ಸಂಕೇತದಿಂದ ಸೋದರತೆಯ ಬಾಂಧವ್ಯವನ್ನು ಬೆಳೆಸಿಕೊಳ್ಳಿ-ಸಹಜ್ ರೈ

ಕೆಯ್ಯೂರು:ಕೆಯ್ಯೂರು ಶ್ರೀ ದುರ್ಗಾ ಸ್ಪೋರ್ಟ್ಸ್ ಕ್ಲಬ್ ಇದರ ವತಿಯಿಂದ ಕೆಪಿಎಲ್ ಸೀಸನ್ 3 ಕ್ರಿಕೆಟ್ ಪಂದ್ಯಾಟ ಸಮಾರೋಪ ಸಮಾರಂಭ ಜ.27ರಂದು ಕೆ.ಪಿ.ಎಸ್ ಪ್ರಾಥಮಿಕ ವಿಭಾಗ ಕೆಯ್ಯೂರಿನಲ್ಲಿ ನಡೆಯಿತು.

ಸಮರೋಪ ಸಮಾರಂಭದ ಅಧ್ಯಕ್ಷತೆಯನ್ನು ದ.ಕ.ಜಿಲ್ಲಾ ಬಿಜೆಪಿ ಯುವಮೋರ್ಚ ಉಪಾಧ್ಯಕ್ಷ ಸಹಜ್ ರೈ ಬಳಜ್ಜ ವಹಿಸಿ ಯಾವುದೇ ಕ್ರೀಡೆಗಳಲ್ಲಿ ಅಂತರಾಷ್ಟ್ರೀಯ ಮಟ್ಟಕ್ಕೆ ಎರಿಸಿದ ಮಣ್ಣು ಕೆಯ್ಯೂರು, ಕ್ರೀಡೆಗಳಲ್ಲಿ ಸೋಲು ಗೆಲುವು ವಿಶೇಷವಲ್ಲ ಭಾಗವಹಿಸುವಿಕೆ ಮುಖ್ಯ ಅದನ್ನು ಸಮಾನವಾಗಿ ಸ್ವೀಕರಿಸಿ, ಯುವಕರು ಕ್ರಿಕೆಟ್ ನ ಉತ್ತುಂಗಕ್ಕೆ ಬೆಳೆದು ಭಾವೈಕೈತೆಯ ಸಂಖೇತದಿಂದ ಸೋದರತೆಯ ಬಾಂಧವ್ಯವನ್ನು ಬೆಳೆಸಿಕೊಳ್ಳಿ ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ, ಕೆಪಿಎಸ್ ಕೆಯ್ಯೂರು ಕಾರ್ಯದ್ಯಕ್ಷ ಎ.ಕೆ.ಜಯರಾಮ ರೈ ಕೆಯ್ಯೂರು, ಕೆಯ್ಯೂರು ಗ್ರಾ.ಪಂ.ಉಪಾದ್ಯಕ್ಷೆ ಸುಮಿತ್ರಾ ದಿವಾಕರ,  ಶ್ರೀ ದುರ್ಗಾ ಸ್ಪೋರ್ಟ್ಸ್ ಕ್ಲಬ್ ಕೆಯ್ಯೂರು ಸ್ಥಾಪಕಧ್ಯಕ್ಷ ರಾಧಕೃಷ್ಣ ರೈ  ಸಣಂಗಳ,ಗೌರವ ಉಪಸ್ಥಿತಿ ಯಲ್ಲಿ ಕೆಯ್ಯೂರು ಗ್ರಾ.ಪಂ.ಸದಸ್ಯ ಜಯಂತ ಪೂಜಾರಿ ಕೆಂಗುಡೇಲು, ಮೀನಾಕ್ಷಿ ವಿ.ರೈ, ಕೆದಂಬಾಡಿ, ಕೆಯ್ಯೂರು ಸಿ.ಎ.ಬ್ಯಾಂಕ್ ನಿರ್ದೇಶಕ ಸಂತೋಷ್ ರೈ ಕೊರಂಗ, ಶ್ರೀ ಕ್ಷೇತ್ರ ಕೊರಗಜ್ಜ ದೈವಸ್ಥಾನ ಕೊಲ್ಯ,ಪೆರುವಾಜೆ ಅರ್ಚಕ ಜಯಂತ, ಸಾಪ್ಟ್ವೇರ್ ಇಂಜಿನಿಯರ್ ಹರಿಪ್ರಸಾದ್ ಬಾಕ್ತಿಮಾರ್, ದಾಮೋದರ ಎಂ. ಸಂತೋಷ್ ನಗರ, ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಮುಂಡೂರು ಸಹ ಶಿಕ್ಷಕ ಅಬ್ದುಲ್ ಬಶೀರ್, ಶ್ರೀ ಲಕ್ಷ್ಮಿ ವೆಂಕಟರಮಣ ಮಠ ದೇರ್ಲ ಸಂಚಾಲಕ ಶಿವಶ್ರೀ ರಂಜನ್ ರೈ ದೇರ್ಲ, ಕೆಯ್ಯೂರು ಮಾಡಾವು ವರ್ತಕ ಸಂಘ ಅಧ್ಯಕ್ಷ ಅಬ್ದುಲ್ ರಜಾಕ್ ಎ, ಪಂದ್ಯಾಟಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಪಂದ್ಯಾಟದ ನಿರ್ಣಯಕರಾಗಿ ನಿರ್ವಹಿಸಿದ,ಅನಿಲ್ ಗೌಡ ತೆಂಕಿಲ, ರವಿ ಕೆಮ್ಮಾಯಿ, ಬಾನುಪ್ರಕಾಶ್, ಪುರುಷೋತ್ತಮ, ಪಂದ್ಯಾಟದ ಪ್ರಯೋಜಕರು, ಸ್ಮರಣಿಕೆಗಳ ಪ್ರಯೋಜಕರು, ಬ್ಯಾಂಡ್ ಸೆಟ್ ಪ್ರಯೋಜಕರಿಗೆ ಬಹುಮಾನ ಪ್ರಯೋಜಕರಿಗೆ  ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಈ ಪಂದ್ಯಾಟದಲ್ಲಿ ಉತ್ತಮ ಗೂಟ ರಕ್ಷಕ ಇಸ್ಮಾಯಿಲ್, ಸರಣಿಶ್ರೇಷ್ಠ ಸಂದೀಪ್, ಉತ್ತಮ ದಾಂಡಿಗ ಅವಿನ್ ಕಣಿಯಾರು, ಉತ್ತಮ ಎಸೆತಗಾರ ಜಯಂತ ಎಸ್.ಆರ್, ಪೈನಲ್ ಪಂದ್ಯ ಶ್ರೇಷ್ಠ ಕಮಾರುದ್ದೀನ್ ಪಡೆದುಕೊಂಡರು. ಪಂದ್ಯಾಟದ ಶಿಸ್ತಿನ ತಂಡವು ವಾಸುಕೀ ಅರೇಂಜರ್ಸ್ ಪಡೆದುಕೊಂಡಿತು.

ಪಂದ್ಯಾಟದ ಪ್ರಥಮ ಬಹುಮಾನ ಶ್ರೀ ರಾಮ್ ಸ್ಟ್ರೈಕರ್ಸ್ 20,000ರೂ ಮತ್ತು ಟ್ರೋಪಿ, ದ್ವೀತಿಯ ಸ್ಥಾನ  ಯುನೈಟೆಡ್ ಸಂತೋಷ್ ನಗರ15,000ರೂ ಮತ್ತು ಟ್ರೋಪಿ, ತೃತೀಯ ಸ್ಥಾನ  ಶ್ರಿ ದುರ್ಗಾ ಕಣಿಯಾರು,5,000ರೂ ಟ್ರೋಪಿ, ಚತುರ್ಥ ಸ್ಥಾನ ಅಭಿನವ ಮಾಡಾವು 4,000ರೂ ಮತ್ತು ಟ್ರೋಪಿ ಪಡೆದುಕೊಂಡರು. 

LEAVE A REPLY

Please enter your comment!
Please enter your name here