ಶಾಲೆಯ ಪ್ರಗತಿಗೆ ಹಲವು ಯೋಜನೆಗಳ ಭರವಸೆ; ಶಾಸಕ ಅಶೋಕ್ ಕುಮಾರ್ ರೈ
ಉಪ್ಪಿನಂಗಡಿ: ದ.ಕ.ಜಿ.ಪಂ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಕೆಮ್ಮಾರ ಶಾಲೆಯ ನೂತನ ಶೌಚಾಲಯ ಉದ್ಘಾಟನೆ ಮತ್ತು 2023-24 ನೇ ಸಾಲಿನ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು. ಧ್ವಜಾರೋಹಣವನ್ನು ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಅಝೀಝ್ ಬಿ.ಕೆ ರವರು ನೆರವೇರಿಸಿದರು.
ಸಭಾ ಕಾರ್ಯಕ್ರಮದ ದೀಪ ಪ್ರಜ್ವಲನೆಯನ್ನು SDMC ಸಮನ್ವಯ ವೇದಿಕೆಯ ರಾಜ್ಯಾಧ್ಯಕ್ಷ ಉಮೇಶ್.ಜಿ. ಗಂಗವಾಡಿ ನೆರವೇರಿಸಿ ಶುಭಹಾರೈಸಿದರು.ನೂತನ ಶೌಚಾಲಯ ಉಧ್ಘಾಟಿಸಿ ಮಾತನಾಡಿದ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಕೆಮ್ಮಾರ ಸರಕಾರಿ ಶಾಲೆಯ ಉನ್ನತಿಗಾಗಿ ಶಾಲಾಭಿವೃಧ್ದಿ ಸಮಿತಿ ರೂಪಿಸಿದ್ದ ಯೋಜನೆಗಳಿಗೆ ಸಂಪೂರ್ಣ ಸಹಕಾರದ ಭರವಸೆ ನೀಡಿದರು.
ಶಾಲಾಭಿವೃಧ್ದಿ ಹಾಗೂ ಮೇಲುಸ್ತುವಾರಿ ಸಮಿತಿಯ ಜಿಲ್ಲಾಧ್ಯಕ್ಷ ಇಸ್ಮಾಯಿಲ್ ಎಸ್.ಎಂ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪ್ರವೀಣ್ ಆಚಾರ್ಯ, ಹಿರೆಬಂಡಾಡಿ ಗ್ರಾಮಪಂಚಾಯತ್ ಸದಸ್ಯರಾದ ವಾರಿಜಾಕ್ಷಿ ಮತ್ತು ಉಷಾ, ಎ.ಎಸ್.ಐ ಕನಕರಾಜ್, ನಿವೃತ್ತ ಮುಖ್ಯ ಶಿಕ್ಷಕ ಕುಶಾಲಪ್ಪ ಗೌಡ ಕೆಮ್ಮಾರ, ವಕೀಲ ಕಬೀರ್ ಕೆಮ್ಮಾರ, ರವಿಕಾಂತ್ ಕೆಮ್ಮಾರ, ಜಿಲ್ಲಾ ಸಮನ್ವಯ ವೇದಿಕೆ ಸದಸ್ಯರಾದ, ಸಮೀರ್ ಮುಖ್ವೆ, ಜಬ್ಬಾರ್ ಕುರಿಯ, ಶ್ರೀಮತಿ ಸೀತಾ ಭಟ್ ಪಾಣಾಜೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಉಪಾಧ್ಯಕ್ಷೆ ತೇಜಾವತಿ, ಹಾಗೂ ಸರ್ವಸದಸ್ಯರು, ಬೆಳ್ತಂಗಡಿ ಶಿಶು ಅಭಿವೃದ್ಧಿ ಯೋಜನೆ ಮೇಲ್ವಿಚಾರಕಿ ನಂದನಾ.ಪಿ.ಶೆಟ್ಟಿ , ಶಾಲಾ ವಿದ್ಯಾರ್ಥಿಗಳು, ಪೋಷಕ ವೃಂದದವರು, ಅಧ್ಯಾಪಕ ವೃಂದದವರು, ಹಿರಿಯ ವಿದ್ಯಾರ್ಥಿಗಳು, ಅಕ್ಷರ ದಾಸೋಹ ಸಿಬ್ಬಂದಿಗಳು ಉಪಸ್ಥಿತರಿದ್ದರು.
ವಾರ್ಷಿಕ ವರದಿಯನ್ನು ಶಾಲಾ ಮುಖ್ಯೋಪಾಧ್ಯಾಯಿನಿ ಜಯಶ್ರೀ ಎಂ ರವರು ವಾಚಿಸಿದರು. ಬಳಿಕ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಮನೋರಂಜನಾ ಕಾರ್ಯಕ್ರಮ ನಡೆಯಿತು.
ಎಸ್.ಡಿ.ಎಂ.ಸಿ ಅಧ್ಯಕ್ಷ ಅಝೀಝ್ ಬಿ.ಕೆ ಸ್ವಾಗತಿಸಿ, ಶಿಕ್ಷಕಿ ಸುಮನಾ ಮತ್ತು ಹಿರಿಯ ವಿದ್ಯಾರ್ಥಿ ಪ್ರಕಾಶ್.ಕೆ.ಆರ್ , ಸಂಧ್ಯಾ ಮತ್ತು ಲೀನಾ ಲೆಸ್ರಾಡೊ ಹಾಗೂ ದೈಹಿಕ ಶಿಕ್ಷಣ ಶಿಕ್ಷಕಿ ಮೋಹನಾಂಗಿ ವಂದಿಸಿದರು. ಶಿಕ್ಷಕಿ ಮೆಹನಾಝ್ , ವೆಂಕಟ್ರಮಣ ಭಟ್ ಸಹಕರಿಸಿದರು.