ಜ.29: ನೆಲ್ಯಾಡಿ ಜೇಸಿಐ 2024ನೇ ಘಟಕಾಡಳಿತ ಮಂಡಳಿ ಪದಸ್ವೀಕಾರ

0

ನೆಲ್ಯಾಡಿ: ಜೇಸಿಐ ನೆಲ್ಯಾಡಿ ಇದರ 2024ನೇ ಸಾಲಿನ ಅಧ್ಯಕ್ಷೆ ಸುಚಿತ್ರಾ ಜೆ.ಬಂಟ್ರಿಯಾಲ್ ಮತ್ತು ತಂಡದ ಪದಸ್ವೀಕಾರ ಸಮಾರಂಭ ಜ.29ರಂದು ಸಂಜೆ ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ನಡೆಯಲಿದೆ.

ಜೆಸಿಐ ಇಂಡಿಯಾ ಇದರ ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷ ಪುರಂದರ ರೈ ಮಿತ್ರಂಪಾಡಿ, ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆಯ ಸಂಚಾಲಕ ರೆ.ಫಾ.ನೋಮೀಸ್ ಕುರಿಯಾಕೋಸ್ ಅವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ವಲಯ 15 ಪ್ರಾಂತ್ಯ ಬಿ ಇದರ ವಲಯ ಉಪಾಧ್ಯಕ್ಷ ಶಂಕರ ರಾವ್ ಅವರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ಜೇಸಿಐ ನೆಲ್ಯಾಡಿ ಇದರ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here