ಕಡಬ: ಕೋಡಿಂಬಾಳ ಗ್ರಾಮದ ಕುಕ್ಕೆರೆಬೆಟ್ಟು ಕುಟುಂಬಸ್ಥರ ತರವಾಡು ಮನೆಯಲ್ಲಿ ಕಡಂಬಳಿತ್ತಾಯ ಸ್ವಾಮಿಯ ಪ್ರತಿಷ್ಠೆ, ಕಲಾಭಿಷೇಕ ಹಾಗೂ ನೇಮೋತ್ಸವ ಹಾಗೂ ಶ್ರೀ ರುದ್ರಚಾಮುಂಡಿ, ಪಂಜುರ್ಲಿ, ಸತ್ಯದೇವತೆ ಹಾಗೂ ಇತರ ದೈವಗಳ ನೇಮೋತ್ಸವ ಕಾರ್ಯಕ್ರಮವು ಜ.30ರಿಂದ 31ರವರೆಗೆ ನಡೆಯಲಿದೆ.
ಜ.30ರಂದು ಪೂರ್ವಾಹ್ನ ಸ್ವಸ್ತಿ ಪುಣ್ಯಾಹವಾಚನ, ಸ್ಥಳಶುದ್ಧಿ, ಸಪ್ತಶುದ್ಧಿ, ಅಷ್ಟೋತ್ತರ ಶತನಾರಿಕೇಳ, ಗಣಯಾಗ,ಚಂಡಿಕಾಯಾಗ, ನಾಗತಂಬಿಲ, ಮಧ್ಯಾಹ್ನ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಅಘೋರ ಹೋಮ, ವಾಸ್ತುಪೂಜೆ, ದುರ್ಗಾ ನಮಸ್ಕಾರ ಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.
ಜ.೩೧ರಂದು ಪೂರ್ವಾಹ್ನ ಸ್ವಸ್ತಿ ಪುಣ್ಯಾಹವಾಚನ, ಕಲಶಪೂಜೆ, ಗಂಟೆ 9.32ರಿಂದ ಮೀನಾ ಲಗ್ನದ ಮುಹೂರ್ತದಲ್ಲಿ ಕಡಂಬಳಿತ್ತಾಯ ಸ್ವಾಮಿಯ ಪ್ರತಿಷ್ಠೆ, ಕಲಶಾಭಿಷೇಕ, ಬಳಿಕ ಕಡಂಬಳಿತ್ತಾಯ ಸ್ವಾಮಿಯ ನೇಮೋತ್ಸವ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ರುದ್ರಚಾಮುಂಡಿ, ಪಂಜುರ್ಲಿ, ಕಲ್ಲುರ್ಟಿ, ಸತ್ಯದೇವತೆ, ಪಂಜುರ್ಲಿ, ಗುಳಿಗ ದೈವಗಳ ನೇಮೋತ್ಸವ ನಡೆದು ಅನ್ನಸಂತರ್ಪಣೆ ನಡೆಯಲಿದೆ ಎಂದು ಕೆ.ತಮ್ಮಯ್ಯ ನಾಯ್ಕ್ ಹಾಗೂ ಕುಟುಂಬಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.