ಕುಟ್ರುಪಾಡಿ ಗ್ರಾ.ಪಂ ವ್ಯಾಪ್ತಿಯ ಹಸಿ ಮೀನು ಮಾರಾಟಕ್ಕೆ ಬಿಡ್‌

0

ಕಡಬ: ಕುಟ್ರುಪಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಸಿ ಮೀನು ಮಾರಾಟ ಏಲಂ ಇಂದು ಗ್ರಾಮ ಪಂಚಾಯತ್ ಸಭಾಭವನದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಯಶೋಧ.ಕೆ ಆರ್ ಅಧ್ಯಕ್ಷತೆಯಲ್ಲಿ ನಡೆಯಿತು.

ಹೊಸ್ಮಠ ಪೇಟೆಯಲ್ಲಿ ಮೀನು ಮಾರಾಟ ಹಕ್ಕನ್ನು 5,51000ಕ್ಕೆ ಅಶ್ರಫ್ ಸಾಹೇಬ್ ಅಡ್ಕಾಡಿ ಇವರು ಪಡೆದುಕೊಂಡರು. ಮುಳಿಯದಲ್ಲಿ ಮಾರಾಟದ ಹಕ್ಕನ್ನು ರೂ. 88,500ಕ್ಕೆ ಅಬ್ದುಲ್ ಶರೀಪ್ ಅಡ್ಕಾಡಿ ಪಡೆದುಕೊಂಡಿದ್ದು, ಹಳೆಸ್ಟೇಷನ್ ಎಂಬಲ್ಲಿ ಮಾರಾಟ ಹಕ್ಕನ್ನು 37,000 ಕ್ಕೆ ಆದಂ ಅಡ್ಕಾಡಿ ಪಡೆದುಕೊಂಡರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರು, ಗ್ರಾಮ ಪಂಚಾಯತ್ ವ್ಯಾಪ್ತಿಯ ಬಿಡ್ಡುದಾರರು ಉಪಸ್ಥಿತರಿದ್ದರು. ಪಿಡಿಓ ಆನಂದ ಎ, ಕಾರ್ಯದರ್ಶಿ ಗೋಪಿನಾಥ್.ಡಿ ಏಲಂ ಪ್ರಕ್ರಿಯೆ ನಡೆಸಿಕೊಟ್ಟರು. ಗ್ರಾಮ ಪಂಚಾಯತ್ ಸಿಬ್ಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here