ಕಡಬ: ಹೊರ ರಾಜ್ಯದಿಂದ ಕೆಲಸಕ್ಕೆ ಬಂದ ಕಾರ್ಮಿಕರ ಮಾಹಿತಿ ನೀಡಲು ಠಾಣೆಗೆ ಹೋದ ವೇಳೆ ಪೊಲೀಸ್ ಸಿಬ್ಬಂದಿಯೊಬ್ಬರು ಅರ್ಜಿ ಮತ್ತು ಕಾರ್ಮಿಕರ ಗುರುತಿನ ದಾಖಲೆ ಪಡೆಯಲು ನಿರಾಕರಿಸಿದ್ದು ಕೆಲ ಸಮಯ ಬಳಿಕ ಮತ್ತೋರ್ವ ಅಧಿಕಾರಿ ಸ್ವೀಕರಿಸಿದ ಬಗ್ಗೆ ಕೃಷಿಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಎಲ್ಲೆಡೆ ವೈರಲ್ ಆಗಿದೆ. ಕಡಬ ತಾಲೂಕು ಐತ್ತೂರು ಗ್ರಾಮದ ಸುಂಕದಕಟ್ಟೆಯ ಬಾಲಕೃಷ್ಣ ಭಟ್ ಎಂಬವರು ತನ್ನ ಪಾರ್ಮ್ ಹೌಸ್ ನಲ್ಲಿ ವಾಸಮಾಡಲು ಕರೆದುಕೊಂಡು ಬಂದ ಹೊಸ ಕೆಲಸಗಾರರ ಬಗ್ಗೆ ಮಾಹಿತಿ ನೀಡಲು ಠಾಣೆಗೆ ಹೋದವರು ಜಾರ್ಖಂಡ್ ಮೂಲದ ಮೂವರು ಕೆಲಸಗಾರರನ್ನು ನನ್ನ ಸಂಬಂಧಿಕರ ಮೂಲಕ ಕರೆಸಿಕೊಂಡಿದ್ದರು . ಅಪರಿಚಿತರೂ ಮತ್ತು ಬೇರೆ ರಾಜ್ಯದವರಾದುದರಿಂದ ಮುಂಜಾಗರೂಕತೆಗಾಗಿ ಅರ್ಜಿಯ ಜೊತೆ ಕಾರ್ಮಿಕರ ಆಧಾರ್ ಕಾರ್ಡ್ ನಕಲು ಪ್ರತಿಯನ್ನು ಠಾಣೆಗೆ ಕೊಂಡು ಹೋಗಿದ್ದರು. ಠಾಣೆಯ ಒಳಗೆ ಇದ್ದ ಸಿಬ್ಬಂದಿಯೊಬ್ಬರು ವಿಚಾರಿಸಿ ಅರ್ಜಿ ಮತ್ತು ಕಾರ್ಮಿಕರ ಗುರುತಿನ ಪುರಾವೆಯನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ, ನಾಳೆ ಏನಾದರೂ ಕದ್ದುಕೊಂಡು ಹೋದರೆ ನಮ್ಮ ತಲೆ ಮೇಲೆ ಬರತ್ತದೆ ಎಂದು ಹೇಳಿರುವುದಾಗಿ ಬಾಲಕೃಷ್ಣ ಭಟ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ .
ಠಾಣಾ ಉಪನಿರೀಕ್ಷರ ಬಗ್ಗೆ ವಿಚಾರಿಸಿ ಒಳಗೆ ಹೋದ ವೇಳೆ ಪೊಲೀಸ್ ಅಧಿಕಾರಿಯೊಬ್ಬರು ಅರ್ಜಿಯನ್ನು ಪಡೆದು ಅದರಲ್ಲಿ ಕಾರ್ಮಿಕರ ಫೋನ್ ನಂಬರ್ ಬರೆಯಲು ಹೇಳಿದರು . ಬೀಟ್ ಪೋಲಿಸರನ್ನು ಕರೆಸಿ ಮಾಹಿತಿ ರವಾನಿಸಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಈ ಪೋಸ್ಟ್ ಎಲ್ಲೆಡೆ ವೈರಲ್ ಆಗಿದ್ದು ಹಲವು ಮಂದಿ ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ . ಈ ಹಿಂದೆ ಕಡಬ ಗ್ರಾಮ ಪಂಚಾಯತ್ ಅಸ್ತಿತ್ವದಲ್ಲಿ ಇದ್ದ ವೇಳೆ ಯಾವುದೇ ಕೆಲಸಕ್ಕೆ ಪರಿಚಯ ಇಲ್ಲದ ಹೊರಕಡೆಯ ಜನರು ಬಂದಾಗ ಸೇರಿಸಿಕೊಳ್ಳುವ ಮುನ್ನ ಅವರ ಕಂಪ್ಲೀಟ್ ಡಿಟೇಲ್ ನ್ನು ಕೆಲಸಕ್ಕೆ ಸೇರಿಸಿಕೊಳ್ಳುವನು ಫೋಟೋ ಸಮೇತ ತಂದು ಗ್ರಾಮ ಪಂಚಾಯತ್ ಗೆ ಒಪ್ಪಿಸತಕ್ಕದ್ದು ಎಂದು ಪಂಚಾಯತ್ ಸಭೆಯಲ್ಲೇ ನಿರ್ಣಯ ಆಗಿತ್ತು. ಅಲ್ಲದೆ ಅಂದಿನ ಠಾಣೆಯ ಎಸ್ ಐ ಸಾರ್ವಜನಿಕ ಸಭೆ ಕರೆದು ಠಾಣೆಗೆ ಸಂಬಂಧಿಸಿದ ಗ್ರಾಮದ ಪ್ರದೇಶದ ಜನತೆಗೆ ಮಾಹಿತಿ ನೀಡಲು ಸೂಚಿಸಿದ್ದರು ಎಂದು ಓರ್ವರು ಪ್ರತಿಕ್ರಿಯೆ ನೀಡಿದ್ದಾರೆ. ಮತ್ತೋರ್ವರು ಕಮೆಂಟ್ ಮಾಡಿ ಮಾಹಿತಿ ಕೊಡುದು ಒಳ್ಳೆದೆ. ಈ ಹಿಂದೆ ಪೊಲೀಸರೇ ಹೇಳಿದ್ದಾರೆ ಅನೇಕ ಬಾರಿ ದುರ್ಘಟನೆಗಳಾದಾಗ ಮಾಹಿತಿ ಕೊಟ್ಟಿರಿ ಅಂತ. ಕೊಡಲು ಹೋದರೆ ಹೀಗಾದರೆ ಹೇಗೆ? ಎಂದು ಪ್ರಶ್ನಿಸಿದ್ದಾರೆ.