ಉಪ್ಪಿನಂಗಡಿ: ಜೇಸಿಐ ಸಭೆ, ಸನ್ಮಾನ

0

ಉಪ್ಪಿನಂಗಡಿ: ಉಪ್ಪಿನಂಗಡಿ ಜೇಸಿ ಘಟಕದ ಸರ್ವ ಸದಸ್ಯರ ಸಭೆಯು ಸಹಸ್ರ ಕೋಚಿಂಗ್ ಸೆಂಟರ್‌ನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಯೂತ್ ಡೇ ಪ್ರಯುಕ್ತ ಪುತ್ತೂರು ಕೊಂಬೆಟ್ಟು ಸರಕಾರಿ ಪಿಯು ಕಾಲೇಜಿನ ಕ್ರೀಡಾಧಿಕಾರಿ ಕೀರ್ತನ್ ಎಂ. ಅವರನ್ನು ಅವರ ಸಾಧನೆಗಾಗಿ ಸನ್ಮಾನಿಸಲಾಯಿತು.


ವೇದಿಕೆಯಲ್ಲಿ ನಿಕಟಪೂರ್ವ ಅಧ್ಯಕ್ಷ ಶೇಖರ್ ಗೌಂಡತ್ತಿಗೆ, ಜೆಜೆಸಿ ದೀಪಕ್, ಕಾರ್ಯದರ್ಶಿ ಸುರೇಶ್ ಉಪಸ್ಥಿತರಿದ್ದರು. ಪೂರ್ವಾಧ್ಯಕ್ಷರುಗಳಾದ ರವೀಂದ್ರ ಧರ್ಬೆ, ಪ್ರಶಾಂತ್ ರೈ, ಮೋಹನ್ ಚಂದ್ರ ಘಟಕದ ಸದಸ್ಯರು ಭಾಗವಹಿಸಿದ್ದರು.
ಜೇಸಿಐ ಉಪ್ಪಿನಂಗಡಿ ಘಟಕದ ಅಧ್ಯಕ್ಷೆ ಲವೀನಾ ಪಿಂಟೊ ಸ್ವಾಗತಿಸಿದರು. ಕಾರ್ಯದರ್ಶಿ ಸುರೇಶ್ ವಂದಿಸಿದರು.

LEAVE A REPLY

Please enter your comment!
Please enter your name here