ಕೆಯ್ಯೂರು ಶ್ರೀ  ದುರ್ಗಾ ಸ್ಪೋರ್ಟ್ಸ್ ಕ್ಲಬ್ ನ 20ನೇ ವರ್ಷದ ವಾರ್ಷಿಕೋತ್ಸವ,  ಪ್ರತಿಭಾ ಪುರಸ್ಕಾರ, ಸನ್ಮಾನ ಕಾರ್ಯಕ್ರಮ

0

ಸಂಘಟನೆಗಳು ಸಮಾಜದ ಕಣ್ಣೀರೊರೆಸುವ ಕೆಲಸ ಮಾಡಬೇಕು : ಅಶೋಕ್ ರೈ

ಕೆಯ್ಯೂರು:ಕೆಯ್ಯೂರು ಶ್ರೀ ದುರ್ಗಾ ಸ್ಪೋಟ್ಸ್ ಕ್ಲಬ್ 20ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ, ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಸಮಾರಂಭವು ಕೆಪಿಎಸ್ ಪ್ರಾಥಮಿಕ ವಿಭಾಗ ಶಾಲೆ ಕೆಯ್ಯೂರಿನಲ್ಲಿ ಜ.29 ರಂದು ನಡೆಯಿತು. ಮಂಗಳೂರು ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿ ಸಮಾಜದಲ್ಲಿ ಸಮಾಜವನ್ನು ಒಗ್ಗೂಡಿಸಿಕೊಂಡು ಒಂದು ಉತ್ತಮ ರೀತಿಯಲ್ಲಿ ಕೆಲಸ ಕಾರ್ಯಗಳನ್ನು ಮಾಡುವಂತದ್ದು  ಯುವಕರ ಸಾಧನೆ, ತುಂಬಾ ಮೆಚ್ಚುವಂತಹ ಕೆಲಸ, ಇತಂಹ ಸಮಾಜ ಸೇವೆ ಕೆಲಸಗಳು ನಿರಂತರವಾಗಿ ನಡೆಯಲಿ ಎಂದು ಶುಭ ಹಾರೈಸಿದರು. 

ಶ್ರೀ ದುರ್ಗಾ ಸ್ಪೋರ್ಟ್ಸ್ ಕ್ಲಬ್ ನ ಗೌರವಧ್ಯಕ್ಷ  ಎಸ್ ಬಿ ಜಯರಾಮ ರೈ ಬಳಜ್ಜ  ಅಧ್ಯಕ್ಷತೆ ವಹಿಸಿ ಯುವಶಕ್ತಿ ಒಂದು ಅದ್ಬುತ ಶಕ್ತಿ ,ಯುವಕರ ಒಗ್ಗಟಿನಿಂದ ಒಂದು ಒಳ್ಳೆಯ ರೀತಿಯಲ್ಲಿ ಕಾರ್ಯಕ್ರಮ ನಡೆಯುತ್ತಿದೆ, ದೇಶದ ಸಂಪತ್ತು, ರಾಷ್ಟ್ರದ ಸಂಪತ್ತು, ಮುಂದೆಯೂ ಇತಂತಹ ಕೆಲಸ ಕಾರ್ಯಗಳು ಯುವಕರ ಸ್ಪೂರ್ತಿಯಿಂದ ನಡೆಯಲಿ ಎಂದರು. 

ಈ ಸಂದರ್ಭದಲ್ಲಿ ಸನ್ಮಾನ ಕಾರ್ಯಕ್ರಮವನ್ನು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ನೇರವೆರಿಸಿ, ಯುವ ಸಂಘಟನೆಗಳು ಸಮಾಜದ ಕಣ್ಣೀರೊರೆಸುವ ಕೆಲಸವನ್ನು ಮಾಡುವ ಮೂಲಕ ಸಮಾಜದಲ್ಲಿ ಗುರುತಿಸಿಕೊಳ್ಳಬೇಕು ಅದು ಇಂದಿನ ಅವಶ್ಯಕತೆಯಾಗಿದೆ ,ಪುತ್ತೂರಿನಲ್ಲಿ ಸುಮಾರು‌ 5 ಸಾವಿರ ಸಂಘಟನೆಗಳಿದೆ. ಪ್ರತೀಯೊಂದು ಸಂಘಟನೆಗಳು ಒಂದೊಂದು ಸಮಾಜ ಸೇವೆಯನ್ನು ಮಾಡಿದರೆ ಅಥವಾ ಬಡವರ ಕಣ್ಣೀರೊರೆಸುವ ಕೆಲಸ ಮಾಡಿದಲ್ಲಿ ವರ್ಷಕ್ಕೆ 5 ಸಾವಿರ ಕುಟುಂಬಗಳಿಗೆ ನೆರವಾಗಬಹುದು. ಹಣ ಇದ್ದರೆ ಮಾತ್ರ ಸಮಾಜ ಸೇವೆ ಮಾಡಲು ಸಾಧ್ಯ ಎಂಬ‌ ವಿಚಾರವನ್ನು ನಾವು ಮರೆತು ಬಿಡಬೇಕು. ಸಮಾಜದಲ್ಲಿ ಯಾರೇ ನೊಂದುಕೊಂಡಿದ್ದರೂ ಅವರಿಗೆ ಸಾಂತ್ವನ ಹೇಳುವ ಕೆಲಸವನ್ನು ಮಾಡಿದರೆ ಸಾಕು ಅದರಿಂದ ನಾವು ಮಾಡುವ ಸಮಾಜ ಸೇವೆ ಸಾರ್ಥಕವಾಗ್ತದೆ ಎಂದು ಹೇಳಿದರು.

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಪುತ್ತೂರು ವಕೀಲ ಸಂಘ ಮಾಜಿ ಅಧ್ಯಕ್ಷ ಕುಂಬ್ರ ದುರ್ಗಾಪ್ರಸಾದ್ ರೈ,ಜನ್ಮ ಫೌಂಡೇಶನ್ ಪುತ್ತೂರು ಅಧ್ಯಕ್ಷ ಡಾ. ಹರ್ಷಕುಮಾರ್ ರೈ ಮಾಡಾವು, ಶ್ರೀ ದುರ್ಗಾ ಸ್ಪೋರ್ಟ್ಸ್ ಕ್ಲಬ್‌ ಗೌರವಸಲಹೆಗಾರ ಹುಸೈನಾರ್ ಸಂತೋಷ್ ನಗರ, ಸದಾಶಿವ ಭಟ್ ಎ.ಅರ್ತ್ಯಡ್ಕ, ದ್ವಾರಕ ಕನ್ ಸ್ಟ್ರಕ್ಷನ್ ಪುತ್ತೂರು , ಕ್ಲಬ್‌ನ ಅಧ್ಯಕ್ಷ ದಿನೇಶ್ ಕೆ.ಎಸ್,ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಕೆಯ್ಯೂರಿನ ಅಂತಾರಾಷ್ಟ್ರೀಯ ಕ್ರೀಡಾಪಟು ಅಶೋಕ ಕೆ.ಎಸ್ ಕಣಿಯಾರು, ಹಿರಿಯ ಯಕ್ಷಗಾನ ಕಲಾವಿದರಾದ ಕೆ.ಎಚ್ ದಾಸಪ್ಪ ರೈ, ಕೊರಗಪ್ಪ ರೈ ಸಣಂಗಳ, ಕೆಪಿಎಸ್ ಕೆಯ್ಯೂರು ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಜಿನ್ನಪ್ಪ ಗೌಡ, ಸ.ಪ್ರ.ದರ್ಜೆ ಕಾಲೇಜು ಮುಡಿಪು ಮಂಗಳೂರು ದೈಹಿಕ ಶಿಕ್ಷಣ ನಿರ್ದೇಶಕ ಮಹಮ್ಮದ್ ರಪೀಕ್, ವಿದ್ಯಾಮಾತಾ ಅಕಾಡೆಮಿ ಸಂಸ್ಥಾಪಾಕ ಭಾಗ್ಯೇಶ್ ರೈ ಕೆಯ್ಯೂರು, ಹಿರಿಯ ದೈವನರ್ತಕ ಶೀನ ಅಜಿಲಾಯ ಕಣಿಯಾರು, ಕಂಬಳ ಕ್ಷೇತ್ರ ಲೋಹಿತ್ ಬಂಗೇರ ಬಾಲಯ, ಶ್ರೀ ವಿಷ್ಣು ಯುವಶಕ್ತಿಬಳಗ ಮಜ್ಜಾರಡ್ಕ  ಜಿಲ್ಲಾ ಯುವ ಪ್ರಶಸ್ತಿ ವಿಜೇತ ರಾಜೇಶ್.ಕೆ. ಮಯೂರ ಇವರಿಗೆ ಶಾಲು,ಸ್ಮರಣಿಕೆ ನೀಡಿ ಸನ್ಮಾನಿಸಿದರು.

ಪ್ರತಿಬಾ ಪುರಾಸ್ಕಾರ ದಲ್ಲಿ  ಕೆಪಿಎಸ್ ಕೆಯ್ಯೂರು ಇದರ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಹೂ, ಶಾಲು, ಸ್ಮರಣಿಕೆ ನೀಡಿ ಗೌರವಿಸಲಾಯಿತು.ಕೆಪಿಎಸ್ ಕೆಯ್ಯೂರು ಶಾಲಾ ಮಕ್ಕಳಿಂದ ನೃತ್ಯ ಕಾರ್ಯಕ್ರಮ ,ಅನ್ವಿತಾ.ಎ ಪೂಜಾರಿ ಕಣಿಯಾರು ಇವರಿಂದ ವೀಣಾವಾದನ ಕಾರ್ಯಕ್ರಮ ಜರಗಿತು.ನಂತರ ಎಲ್.ಎನ್.ದೇವದಾಸ್ ಕಾಪೀಕಾಡ್ ರಚಿಸಿ,ನಟಿಸಿರುವ ತುಳು ಹಾಸ್ಯಮಯ ನಾಟಕ ಪುದರ್ ದೀದಾಂಡ್ ಎಂಬ ತುಳು ನಾಟಕ ನಡೆಯಿತು.ಅನ್ವಿತಾ ಪೂಜೆ ಕಣಿಯಾರು ಪ್ರಾರ್ಥಿಸಿ, ಕೃಷ್ಣಪ್ರಸಾದ್ ರೈ ಕಣಿಯಾರು ಪ್ರಸ್ತಾವಿಕವಾಗಿ ಸ್ವಾಗತಿಸಿ, ತಾರನಾಥ ರೈ ಕೊಡಂಬು ವಂದಿಸಿ, ಕೆಪಿಎಸ್ ಕೆಯ್ಯೂರು ಉಪಪ್ರಾಂಶುಪಾಲ ವಿನೋದ್ ಕುಮಾರ್ ಕೆ.ಎಸ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here