ಭಕ್ತಕೋಡಿ ಪಾಲೆತ್ತಗುರಿ ಪ.ಜಾತಿ ಕಾಲನಿ ರಸ್ತೆ ಕಾಂಕ್ರೀಟ್‌ಗೆ ಗುದ್ದಲಿಪೂಜೆ

0

ನಾವು ನುಡಿದಂತೆ ನಡೆಯುತ್ತಿದ್ದೇವೆ: ಶಾಸಕ ಅಶೋಕ್ ರೈ


ಪುತ್ತೂರು: ಚುನಾವಣಾ ಪೂರ್ವದಲ್ಲಿ ಜನತೆಗೆ ಕೊಟ್ಟ ಭರವಸೆಯನ್ನು ಈಡೇರಿಸುವ ಮೂಲಕ ನಾವು ನುಡಿದಂತೆ ನಡೆಯುತ್ತಿದ್ದೇವೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು.


ಅವರು ಸರ್ವೆ ಗ್ರಾಮದ ಭಕ್ತಕೋಡಿ ಪಾಲೆತ್ತಗುರಿ ಪ. ಜಾತಿ ಕಾಲನಿ ಕಾಂಕ್ರೀಟ್‌ಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.ಗ್ರಾಮೀಣ ರಸ್ತೆಗಳು ಇನ್ನು ಕೂಡಾ ಅಭಿವೃದ್ದಿಯಾಗಿಲ್ಲ. ಜನತೆಯ ಮೂಲಭೂತ ಸೌಕರ್ಯಕ್ಕೆ ಒತ್ತು ನೀಡುತ್ತಿದ್ದು ರಸ್ತೆ, ನೀರು, ವಿದ್ಯುತ್ ಮತ್ತು ವಾಸಕ್ಕೆ ಯೋಗ್ಯವಾದ ಮನೆ ಇದು ಪ್ರತೀಯೊಬ್ಬರಿಗೂ ದೊರೆಯುವಂತಾಗಬೇಕು. ಗ್ರಾಮಗಳಲ್ಲಿ ಸರ್ವೆ ನಡೆಸಿ ಜಾಗವನ್ನು ಗುರುತಿಸಿ ಅದನ್ನು ಗ್ರಾಮದ ಮನೆಯಿಲ್ಲದವರಿಗೆ ನೀಡುವ ಯೋಜನೆಯನ್ನು ರೂಪಿಸಲಾಗುವುದು. ಜನರ ಕಷ್ಟಗಳಿಗೆ ಸ್ಪಂದನೆ ಮಾಡುವ ಕೆಲಸವನ್ನು ಕಾಂಗ್ರೆಸ್ ಸರಕಾರ ಮಾಡುತ್ತದೆ. ಗ್ಯಾರಂಟಿ ಯೋಜನೆಯನ್ನು ಜಾರಿ ಮಾಡುವ ಮೂಲಕ ಮನೆಯನ್ನು ಬೆಳಗಿದ ಕಾಂಗ್ರೆಸ್ ಸರಕಾರಕ್ಕೆ ತಮ್ಮ ಆಶೀರ್ವಾದ ಇರಲಿ ಎಂದು ಶಾಸಕರು ಹೇಳಿದರು.


ಸರ್ವೆ ವಲಯ ಕಾಂಗ್ರೆಸ್ ಅಧ್ಯಕ್ಷ ವಸಂತ ಎಸ್ ಡಿ ಮಾತನಾಡಿ ಗ್ರಾಮದ ಅಭಿವೃದ್ದಿಗೆ ಶಾಸಕರು ಅನುದಾನವನ್ನು ನೀಡುತ್ತಿದ್ದು ಇದರಿಂದ ಬಹುಕಾಲದ ಬೇಡಿಕೆಗಳು ಈಡೇರುತ್ತಿದೆ, ಕಾಂಗ್ರೆಸ್ ನಿಂದ ಮಾತ್ರ ಅಭಿವೃದ್ದಿ ಸಾದ್ಯ ಎಂದು ಹೇಳಿ ಶಾಸಕರ ಕಾರ್ಯ ವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.


191 ಬೂತ್ ಸಮಿತಿಯ ಅಧ್ಯಕ್ಷ ಅಶೋಕ್ ಎಸ್ ಡಿ, 192 ಬೂತ್ ಸಮಿತಿ ಅಧ್ಯಕ್ಷ ಯತೀಶ್ ರೈ ಮೇಗಿನಗುತ್ತು, ಗ್ರಾಮ ಪಂ ಅಧ್ಯಕ್ಷ ಚಂದ್ರಶೇಖರ ಎನ್ ಎಸ್ ಡಿ, ಮಹಮ್ಮದ್ ಅಲಿ ನೇರೋಳ್ತಡ್ಕ, ವಿಜಯ ಕರ್ಮಿನಡ್ಕ, ಮಾಜಿ ಪಂ ಸದಸ್ಯ ಶರೀಫ್ ಎಸ್ ಎಂ, ಶಿವನಾಥ್ ರೈ ಮೇಗಿನಗುತ್ತು, ಬೊಗ್ಗ ಮುಗೇರ, ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಗೀತಾ ಮರಿಯ, ಯುವ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಎಸ್ ಡಿ, ಸೇವಾದಳದ ಜಿಲ್ಲಾ ಕಾರ್ಯದರ್ಶಿ ಹಂಝ ಕೂಡುರಸ್ತೆ, ವಲಯ ಪದಾಧಿಕಾರಿ ಅರುಣ್ ಕಲ್ಲಮ, ಜಯಂತ ಎಸ್ ಡಿ, ದಿನೇಶ್ ಭಕ್ತಕೋಡಿ, ಉಮೇಶ್ ಎಸ್ ಡಿ, ಬಾಲಕೃಷ್ಣ ಕಲ್ಲಗುಡ್ಡೆ, ಹರೀಶ್ ಅಲೇಕಿ,ಸಾಂತಪ್ಪ ಕಲ್ಕಾರು, ಶಾರದಾ ಕರಿಯಪ್ಪ ಕೆ ಎಸ್ ಸರ್ವೆ, ಲತೀಫ್ ಭಕ್ತಕೋಡಿ, ಸಿನಾನ್ ಭಕ್ತಕೋಡಿ, ಜಬ್ಬಾರ್ ಭಕ್ತಕೋಡಿ, ಧನಂಜಯ ಸೊರಕೆ, ಅಕ್ಷಯ್ ಪರಂಟೋಲು, ಕರುಣಾಕರ ಸೊರಕೆ ರಸ್ತೆ ಫಲಾನುಭವಿಗಳಾದ ಕೊರಗಪ್ಪ ಪಾಲೆತ್ತಗುರಿ, ರಾಮ ಪಾಲೆತ್ತಗುರಿ, ಹರೀಶ್ ಪಾಲೆತ್ತಗುರಿ, ಮನೀಶ್ ಪಾಲೆತ್ತಗುರಿ, ಚೋಮ ಪಾಲೆತ್ತಗುರಿ, ನಿಧಿಶ್ ಪಾಲೆತ್ತಗುರಿ, ಶಿವಪ್ರಸಾದ್ ಪಾಲೆತ್ತಗುರಿ ಮುಂತಾದವರು ಉಪಸ್ಥಿತರಿದ್ದರು.ಗ್ರಾಮ ಪಂ ಸದಸ್ಯರಾದ ಕಮಲೇಶ್ ಸರ್ವೆದೋಳಗುತ್ತು ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here