ಉಪ್ಪಿನಂಗಡಿ ಸ.ಪ.ಪೂ ಕಾಲೇಜಿನ ಸಂಗೀತ ಶಿಕ್ಷಕಿ ವಿದುಷಿ ಡಾ. ಸುಚಿತ್ರಾ ಹೊಳ್ಳರಿಗೆ ’ಇರೈ ಇಸೈ ಸೇವಾ ರತ್ನ’ ಬಿರುದು ಪ್ರದಾನ

0

ಚೆನ್ನೈನಲ್ಲಿ ’ಇರೈ ಇಸೈ ಸೇವಾ ರತ್ನ’ ಬಿರುದು ಪ್ರದಾನ


ಪುತ್ತೂರು: ಸಂಗೀತ ಕಲಾವಿದೆ ಪುತ್ತೂರು ಉಪ್ಪಿನಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸಂಗೀತ ಶಿಕ್ಷಕಿ ವಿದುಷಿ ಡಾ| ಸುಚಿತ್ರಾ ಹೊಳ್ಳರವರಿಗೆ, ಚೆನ್ನೈನ ಅಂಬತ್ತೂರು ವಿಶಾಖ ಇರೈ ಇಸೈ ಪೆರವೈ ಟ್ರಸ್ಟ್ ಅವರು ಸಂಗೀತ ಸಾಧನೆಯನ್ನು ಗುರುತಿಸಿ “ಇರೈ ಇಸೈ ಸೇವಾ ರತ್ನ ” ಎಂಬ ಬಿರುದು ನೀಡಿ ಗೌರವಿಸಿದ್ದಾರೆ.


ಜ.22ರಂದು ಅಯೋಧ್ಯೆಯಲ್ಲಿ ಶ್ರೀ ರಾಮಚಂದ್ರ ಪ್ರಭುವಿನ ಪ್ರಾಣ ಪ್ರತಿಷ್ಠೆಯ ಶುಭ ಸಂದರ್ಭದ ಆಚರಣೆಯ ಪ್ರಯುಕ್ತ, ಚೆನ್ನೈನ ಅಂಬತ್ತೂರು ವಿಶಾಖ ಇರೈ ಇಸೈ ಪೆರವೈ ಟ್ರಸ್ಟ್ ಅವರು ಚೆನ್ನೈನಲ್ಲಿ ವಿದೂಷಿ ಡಾ| ಸುಚಿತ್ರಾ ಹೊಳ್ಳ ಅವರ ಕರ್ನಾಟಕ ಶಾಸ್ತ್ರೀಯ ಸಂಗೀತ ಕಚೇರಿಯನ್ನು ಏರ್ಪಡಿಸಿದ್ದರು. ಕಚೇರಿಯ ಬಳಿಕ, ಸುಚಿತ್ರಾ ಹೊಳ್ಳ ಅವರ ವಿದ್ವತ್ ಪ್ರೌಡಿಮೆ, ಹಾಗೂ ಅವರ ಈವರೆಗಿನ ಸಂಗೀತ ಸಾಧನೆಯನ್ನು ಗುರುತಿಸಿ ಸುಚಿತ್ರಾ ಹೊಳ್ಳ ಅವರಿಗೆ ” ಇರೈ ಇಸೈ ಸೇವಾ ರತ್ನ ” ಎಂಬ ಬಿರುದನ್ನು ನೀಡಿ ಸನ್ಮಾನಿಸಿದ್ದಾರೆ.


ವಿದುಷಿ ಡಾ| ಸುಚಿತ್ರಾ ಹೊಳ್ಳ ಇವರು ಪುತ್ತೂರಿನ ಹರೀಶ್ ಹೊಳ್ಳ ಅವರ ಪತ್ನಿ. ಹಲವಾರು ವರ್ಷಗಳಿಂದ ಪುತ್ತೂರಿನ ಕೊಂಬೆಟ್ಟಿನ ” ಸಾಧನಾ ಸಂಗೀತ ವಿದ್ಯಾಲಯ ” ಎಂಬಲ್ಲಿ ಸಂಗೀತ ತರಗತಿ ನಡೆಸುತ್ತಾ ಬಂದಿದ್ದು, ಅವರ ಸಂಗೀತ ಸಾಧನೆಯನ್ನು ಗುರುತಿಸಿ ಈಗಾಗಲೇ ಅವರಿಗೆ ’ಸಂಗೀತ ಕಲಾಧರೆ’, ’ಸಂಗೀತ ವಿಶಾರದೆ’ ಮುಂತಾದ ಬಿರುದುಗಳು ಬಂದಿರುತ್ತದೆ. ಇವರು ಉಪ್ಪಿನಂಗಡಿಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸಂಗೀತ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here