ರೋಟರಿ ಎಲೈಟ್ ಗೆ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ

0

ಫಲಾನುಭವಿಗಳ ಬಾಳಿಗೆ ಬೆಳಕಾಗುವ ಹೃದಯವಂತ ಮನಸ್ಸುಳ್ಳವವರಾಗಿ-ಎಚ್.ಆರ್ ಕೇಶವ್

ಪುತ್ತೂರು: ಮಾನವನಲ್ಲಿ ಯೌವನ, ಸಂಪತ್ತು, ಪ್ರಭುತ್ವ, ಅವಿವೇಕ ಅತಿಯಾಗಿ ಮೇಳೈಸಿದರೆ ಅದು ಅವನ ಅಧಃಪತನಕ್ಕೆ ಕಾರಣವಾಗುತ್ತದೆ. ಉತ್ತಮ ನಾಯಕತ್ವದ ಗುಣಗಳನ್ನು ಬೆಳೆಸಿಕೊಂಡು, ಸಮಾಜದಲ್ಲಿನ ಫಲಾನುಭವಿಗಳ ಬಾಳಿಗೆ ಬೆಳಕಾಗಿ, ಉತ್ತಮ ಮನಸ್ಸುಳ್ಳ ಹೃದಯವಂತ ನಾಗರಿಕರಾಗಿ ಬೆಳೆಯಬೇಕು ಎಂದು ರೋಟರಿ ಜಿಲ್ಲಾ ಗವರ್ನರ್ ಎಚ್.ಆರ್ ಕೇಶವ್ ಹೇಳಿದರು.


ಅಂತರ್ರಾಷ್ಟ್ರೀಯ ರೋಟರಿ ಜಿಲ್ಲೆ 3181, ವಲಯ ಐದರ ರೋಟರಿ ಕ್ಲಬ್ ಪುತ್ತೂರು ಎಲೈಟ್ ಗೆ ಜ.31 ರಂದು ರೋಟರಿ ಜಿಲ್ಲಾ ಗವರ್ನರ್ ಎಚ್.ಆರ್ ಕೇಶವ್ ರವರು ಅಧಿಕೃತ ಭೇಟಿ ನೀಡಿದ್ದು, ಸಂಜೆ ಸುದಾನ ಶಾಲೆಯ ಆವರಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಕ್ಲಬ್ ನ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು.
ರೋಟರಿ ಅಸಿಸ್ಟೆಂಟ್ ಗವರ್ನರ್ ನರಸಿಂಹ ಪೈರವರು ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಸಂಪಾದಕತ್ವದ ಕ್ಲಬ್ ಬುಲೆಟಿನ್ ಅನಾವರಣಗೊಳಿಸಿ ಶುಭಹಾರೈಸಿದರು. ರೋಟರಿ ವಲಯ ಸೇನಾನಿ ಸುಜಿತ್ ಪಿ.ಕೆ.ರವರು ಕ್ಲಬ್ ನ ಸಮಾಜಮುಖಿ ಕಾರ್ಯಗಳನ್ನು ಶ್ಲಾಘಿಸಿದರು.


ರೋಟರಿ ಎಲೈಟ್ ಅಧ್ಯಕ್ಷ ಅಬ್ದುಲ್ ರಝಾಕ್ ಕಬಕಕಾರ್ಸ್ ಸ್ವಾಗತಿಸಿ ಮಾತನಾಡಿ, ಜಗತ್ತಿನಲ್ಲಿ ಭರವಸೆಯನ್ನು ಮೂಡಿಸು ಎಂಬ ಧ್ಯೇಯ ವಾಕ್ಯದಂತೆ ಕ್ಲಬ್ ಸದಸ್ಯರ
ಸಹಕಾರದೊಂದಿಗೆ ಸಮಾಜಕ್ಕೆ ಸಮಾಜಮುಖಿ ಕಾರ್ಯಕ್ರಮಗಳನ್ನು ನೀಡುತ್ತಿದೆ ಎಂದರು.


ನೂತನ ಸದಸ್ಯೆ ಸೇರ್ಪಡೆ:
ಕ್ಲಬ್ ಸರ್ವಿಸ್ ವತಿಯಿಂದ ಖ್ಯಾತ ವೈದ್ಯ ಡಾ.ಸಚಿನ್ ಶಂಕರ್ ಹಾರಕರೆರವರ ಪತ್ನಿ ಡಾ.ನಾಗಶ್ರೀ ಎಸ್.ಶಂಕರ್ ರವರನ್ನು ಜಿಲ್ಲಾ ಗವರ್ನರ್ ಎಚ್.ಆರ್ ಕೇಶವ್ ರವರು ರೋಟರಿ ಪಿನ್ ತೊಡಿಸಿ ಕ್ಲಬ್ ಗೆ ಸೇರ್ಪಡೆಗೊಳಿಸಿದರು.


ಪಿ.ಎಚ್.ಎಫ್ ಗೌರವ:
ಅಂತರ್ರಾಷ್ಟ್ರೀಯ ಸೇವಾ ವಿಭಾಗದಿಂದ ರೋಟರಿ ಫೌಂಡೇಶನ್ ಗೆ ದೇಣಿಗೆ ನೀಡಿ ಪಿ.ಎಚ್.ಎಫ್ ಗೌರವ ಪಡೆದ ಕ್ಲಬ್ ನ ಅಧ್ಯಕ್ಷ ಅಬ್ದುಲ್ ರಝಾಕ್ ಕಬಕಕಾರ್ಸ್, ಸಿಲ್ವಿಯಾ ಡಿ’ಸೋಜ, ಕಾರ್ಯಾಪ್ಪ ವಿ.ಪಿ, ರಾಮ ಕೆ.ರವರುಗಳನ್ನು ಜಿಲ್ಲಾ ಗವರ್ನರ್ ಅಭಿನಂದಿಸಿದರು.
ಶಿಫಾಲಿಕಾ ಪ್ರಾರ್ಥಿಸಿದರು. ನಿಯೋಜಿತ ಅಧ್ಯಕ್ಷ ಅಶ್ವಿನ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಿಲ್ವಿಯಾ ಡಿ’ಸೋಜ ಕಾರ್ಯಕ್ರಮ ನಿರೂಪಿಸಿದರು.

ಸನ್ಮಾನ/ಅಭಿನಂದನೆ…
ಕಬಕದಲ್ಲಿ ರಾಮಕೃಷ್ಣ ಕ್ಲಿನಿಕ್ ಹೊಂದಿದ್ದು ಸುಮಾರು 2300ಕ್ಕೂ ಮಿಕ್ಕಿ ಹೆರಿಗೆ ಮಾಡಿಸಿ ಮಾನವೀಯತೆಯನ್ನು ಮೆರೆದು ವೃತ್ತಿಪರತೆಗೆ ಸಾಕ್ಷಿಯಾಗಿರುವ ಹಿರಿಯರಾದ ಡಾ.ಕೋಲ್ಫೆ ಸೂರ್ಯನಾರಾಯಣ ರಾವ್ ರವರನ್ನು ಕ್ಲಬ್ ಸಮುದಾಯದ ಸೇವಾ ವಿಭಾಗದಿಂದ ಸನ್ಮಾನಿಸಲಾಯಿತು. ಶಿಕ್ಷಣ ಹಾಗೂ ಮಕ್ಕಳ ಕ್ಷೇತ್ರದಲ್ಲಿ ಗಣನೀಯ ಸೇವೆಗೈದು ತಾಲೂಕು ಆಡಳಿತದ ವತಿಯಿಂದ ತಾಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಸುದಾನ ವಿದ್ಯಾಸಂಸ್ಥೆಯ ಸಂಚಾಲಕ ರೆ|ವಿಜಯ ಹಾರ್ವಿನ್, ಕ್ಲಬ್ ನ ಜಿಲ್ಲಾ ಪ್ರಾಜೆಕ್ಟ್ ಗೆ ಧನಸಹಾಯವಿತ್ತು ಸಹಕರಿಸುತ್ತಾ ಬಂದಿರುವ ರೋಟರಿ ಭೀಷ್ಮ ಕೆ.ಆರ್ ಶೆಣೈ, ಮೈಸೂರಿನಲ್ಲಿ ನಡೆದ ರೋಟರಿ ಜಿಲ್ಲಾ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಪುಟಾಣಿ ಸಾಯರವರುಗಳಿಗೆ ಶಾಲು ಹೊದಿಸಿ ಅಭಿನಂದಿಸಲಾಯಿತು.

ಎಲ್.ಇ.ಡಿ ಮೂಲಕ ವರದಿ..
ಕಾರ್ಯದರ್ಶಿ ಆಸ್ಕರ್ ಆನಂದ್ ರವರು ಎಲ್.ಇ.ಡಿ ಪರದೆ ಮೂಲಕ ದೃಶ್ಯಾವಳಿಗಳ ಮೂಲಕ ಕ್ಲಬ್ ವರದಿ ಮಂಡಿಸಿದರು ಮಾತ್ರವಲ್ಲ ಜಿಲ್ಲಾ ಗವರ್ನರ್ ರವರ ಪರಿಚಯವನ್ನು ಸದಸ್ಯ ಮೌನೇಶ್ ವಿಶ್ವಕರ್ಮರವರ ನೇತೃತ್ವದಲ್ಲಿ ಎಲ್.ಇ.ಡಿಯಲ್ಲಿ ಪ್ರಸ್ತುತಪಡಿಸಲಾಯಿತು. ಈ ಸಂದರ್ಭದಲ್ಲಿ ಮೌನೇಶ್ ವಿಶ್ವಕರ್ಮರವರು ಪೆನ್ಸಿಲ್ ಸ್ಕೆಚ್ ಮೂಲಕ ರಚಿಸಿದ ಜಿಲ್ಲಾ ಗವರ್ನರ್ ರವರ ಭಾವಚಿತ್ರವನ್ನು ಜಿಲ್ಲಾ ಗವರ್ನರ್ ರವರಿಗೆ ಹಸ್ತಾಂತರಿಸಿದರು.

LEAVE A REPLY

Please enter your comment!
Please enter your name here