ಗವ್ಯ ಆಯುರ್ವೇದ ಚರ್ಮರೋಗ ಚಿಕಿತ್ಸಾ ವಿಭಾಗ ಉದ್ಘಾಟನೆ-ವಿಶೇಷ ಚರ್ಮರೋಗ ತಪಾಸಣಾ ಶಿಬಿರ

0

ಪುತ್ತೂರು: ಬಳ್ಳಿ ಆಯುರ್ ಗ್ರಾಮ-ಆಯುರ್ವೇದ ಆಸ್ಪತ್ರೆ ಗೋ ಸೇವಾ ಗತಿವಿಧಿ ಕರ್ನಾಟಕ, ದಕ್ಷಿಣ ಪ್ರಾಂತ ಇದರ ಆಶ್ರಯದಲ್ಲಿ ಗವ್ಯ ಆಯುರ್ವೇದ ಚರ್ಮರೋಗ ಚಿಕಿತ್ಸಾ ವಿಭಾಗ ಇದರ ಉದ್ಘಾಟನಾ ಕಾರ್ಯಕ್ರಮ ಜ.31ರಂದು ನೆಕ್ಕಿಲಾಡಿ ಗ್ರಾಮದ ಬಳ್ಳಿ ಆಯುರ್ ಗ್ರಾಮ ಮೂಲಿಕಾವನದಲ್ಲಿ ಜರಗಿತು.


ಗೋ ಸೇವಾ ಗತಿವಿಧಿ ಪಂಚಗವ್ಯ ‌ಮನುಷ್ಯ ಚಿಕಿತ್ಸೆ ಅಖಿಲ ಭಾರತ ಪ್ರಮುಖರಾದ ಡಾ.ಹಿತೇಶ್ ಜಾನಿರವರು ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಆಮೇರಿಕಾದ ಶ್ರೀಕೃಷ್ಣ ವೃಂದಾವನದ ಪ್ರಮುಖ ಅರ್ಚಕರಾದ ಯೋಗೀಂದ್ರ ಭಟ್ ಉಳಿರವರು ಮಾತನಾಡಿ, ಸಹಜತೆ ಮಾನವ ಧರ್ಮ, ಗೋವಿನೊಂದಿಗೆ ನಾವು ಸಹಜ ಜೀವನವನ್ನು ನಡೆಸಬೇಕೆಂದು ಕರೆ ಕೊಟ್ಟರು.
ಉಪ್ಪಿನಂಗಡಿ ಭಟ್ಸ್ ನರ್ಸಿಂಗ್ ಹೋಂನ ಡಾ.ಕೆ.ಜಿ ಭಟ್ ಮಾತನಾಡಿ, ಪಂಚಗವ್ಯದಲ್ಲಿ ಇನ್ನೂ ಹೆಚ್ಚಿನ ಸಂಶೋಧನೆಯ ಅಗತ್ಯವಿದೆ ಎಂದರು. ಕಾರ್ಯಕ್ರಮದಲ್ಲಿ ಸಸ್ಯ ತಳಿ ಸಂರಕ್ಷಕರಾದ ಕೃಷಿಋಷಿ ಬಿ.ಕೆ ದೇವರಾವ್ ರವರನ್ನು ಗೌರವಿಸಲಾಯಿತು. ಬಳ್ಳಿ ಪ್ರತಿಷ್ಠಾನ 34 ನೆಕ್ಕಿಲಾಡಿಯ ಐರಿನ್ ಲೋಬೊರವರು ಅಧ್ಯಕ್ಷತೆ ವಹಿಸಿದ್ದರು. ಗವ್ಯ ಆಯುರ್ವೇದ ಚರ್ಮರೋಗ ಹಾಗೂ ಕ್ಯಾನ್ಸರ್ ತಜ್ಞ ಡಾ.ಸಿ.ಪಿ ರಮೇಶ್ ಭಾಗವಹಿಸಿದ್ದರು.


ಬಳಿಕ ಉಪ್ಪಿನಂಗಡಿ ಭಟ್ ನರ್ಸಿಂಗ್ ಹೋಂನ ಜೊಸ್ಸೀಸ್ ಆಯುರ್ ಕೇರ್ ನಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ವಿಶೇಷ ಚರ್ಮರೋಗ ತಪಾಸಣಾ ಶಿಬಿರವು ಜರಗಿತು. ಸುಮಾರು 30 ಮಂದಿ ಫಲಾನುಭವಿಗಳು ಶಿಬಿರದಲ್ಲಿ ಭಾಗವಹಿಸಿ ಪ್ರಯೋಜನ ಪಡೆದುಕೊಂಡರು. ಪ್ರತಿ ತಿಂಗಳ ಮೊದಲನೇ ವಾರದಲ್ಲಿ ಈ ಶಿಬಿರವು ನಿರಂತರವಾಗಿ ನಡೆಯುವುದೆಂದು
ಬಳ್ಳಿ ಪ್ರತಿಷ್ಠಾನದ ಅಧ್ಯಕ್ಷ ಡಾ.ಸುಪ್ರೀತ್ ಲೋಬೊ, ಕೋಶಾಧಿಕಾರಿ ಡಾ.ಶೈನಿ ಪಾಯಿಸ್ ರವರು ತಿಳಿಸಿದರು. ಗೋ ಸೇವಾ ಗತಿವಿಧಿಯ ಪ್ರವೀಣ ಸರಳಾಯ ವಂದಿಸಿದರು.

LEAVE A REPLY

Please enter your comment!
Please enter your name here