ಪುತ್ತೂರು: ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಎಸ್.ಟಿ ಮೋರ್ಛಾ ಅಧ್ಯಕ್ಷರಾಗಿ ತಾಪಂ ಮಾಜಿ ಸದಸ್ಯ ಹರೀಶ್ ಬಿಜತ್ರೆಯವರನ್ನು ನೇಮಕಗೊಳಿಸಿ ದ.ಕ ಜಿಲ್ಲಾ ಬಿಜೆಪಿ ಆದೇಶ ಹೊರಡಿಸಿದೆ. ಒಳಮೊಗ್ರು ಗ್ರಾಮದ ಬಿಜತ್ರೆ ನಿವಾಸಿಯಾಗಿರುವ ಇವರು ಆರಂಭದಲ್ಲಿ ಒಳಮೊಗ್ರು ಬಿಜೆಪಿ ಬೂತ್ ಸಂಖ್ಯೆ 163 ರ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು ಬಳಿಕ ಬಿಜೆಪಿ ಪುತ್ತೂರು ಮಂಡಲದ ಕಾರ್ಯದರ್ಶಿಯಾಗಿ 3 ವರ್ಷ ಸೇವೆ, ಜಿಲ್ಲಾ ಎಸ್‌ಟಿ ಮೋರ್ಛಾದ ಪ್ರಧಾನ ಕಾರ್ಯದರ್ಶಿಯಾಗಿ 4 ವರ್ಷ ಸೇವೆ, ತಾಪಂ ಸದಸ್ಯರಾಗಿ 5 ವರ್ಷಗಳ ಸೇವೆ, ಸ್ಥಾಯಿ ಸಮಿತಿ ಅಧ್ಯಕ್ಷರಾಗಿ 2 ವರ್ಷ ಸಲ್ಲಿಸಿದ್ದಾರೆ. ಪ್ರಸ್ತುತ ಪುತ್ತೂರು ವಿಭಾಗದ ಅರಣ್ಯ ಹಕ್ಕು ಸಮಿತಿಯ ಸದಸ್ಯರಾಗಿ, ಜಿಲ್ಲಾ ಯುವಜನ ಪ್ರಾಧಿಕಾರದ ಸದಸ್ಯರಾಗಿ, ಭೂ ನ್ಯಾಯ ಮಂಡಳಿಯ ಸದಸ್ಯರಾಗಿ, ಪುತ್ತೂರು ವಿಧಾನಸಭಾ ಕ್ಷೇತ್ರದ ಬೂತ್ ಲೆವೆಲ್ ಏಜೆಂಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಬಿಜತ್ರೆ ದಿ.ಕುಂಞಣ್ಣ ನಾಯ್ಕ ಮತ್ತು ಪುಷ್ಪಾವತಿಯವರ ಪುತ್ರರಾಗಿರುವ ಹರೀಶ್ ಬಿಜತ್ರೆಯವರು ಓರ್ವ ಕೃಷಿಕರು ಆಗಿದ್ದು ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದು ಹಲವು ಸಂಘ ಸಂಸ್ಥೆಗಳಲ್ಲಿ ಸೇವೆ ಮಾಡಿಕೊಂಡಿದ್ದಾರೆ.