ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸೇರಿದ ಸಂಪ್ಯದಮೂಲೆಯ ಗೋ ವಿಹಾರಧಾಮದಲ್ಲಿ 2 ದಿನಗಳ ಗೋಲೋಕೋತ್ಸವಕ್ಕೆ ಚಾಲನೆ

0

ಪುತ್ತೂರು: ಮೊಟ್ಟೆತ್ತಡ್ಕ ಗೇರು ಸಂಶೋಧನಾಲಯದ ಸಮೀಪ ಸಂಪ್ಯದಮೂಲೆ ಎಂಬಲ್ಲಿ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಮಂಜೂರುಗೊಂಡ ಗೋವಿಹಾರ ಧಾಮದಲ್ಲಿ ಮಹಾಲಿಂಗೇಶ್ವರ ದೇವಸ್ಥಾನದ ಆಶ್ರಯದಲ್ಲಿ ಶ್ರೀ ಮಹಾಲಿಂಗೇಶ್ವರ ಗೋಸೇವಾ ಬಳಗ ಇದರ ನೇತೃತ್ವದಲ್ಲಿ ಎರಡು ದಿನ ನಡೆಯುವ ಗೋಲೋಕೋತ್ಸವಕ್ಕೆ ಫೆ.3ರಂದು ಚಾಲನೆ ನೀಡಲಾಯಿತು.


ಬೆಳಿಗ್ಗೆ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳ ಮಾರ್ಗದರ್ಶನದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವೇ ಮೂ ವಸಂತ ಕೆದಿಲಾಯ ಅವರ ನೇತೃತ್ವದಲ್ಲಿ ಗಣಪತಿಹೋಮ, ಗೋಸೂಕ್ತ ಹೋಮ ಹಾಗೂ ಗೋಪೂಜೆ ನಡೆಯಿತು. ಮಾಣಿಲ ಶ್ರೀ ಧಾಮ್ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಪಶುಪತಿನಾಥ ಭಜನಾ ಮಂಟಪದಲ್ಲಿ ಭಜನೆಗೆ ಚಾಲನೆ ನೀಡಿದರು. ಈ ಸಂದರ್ಭ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಸದಸ್ಯರಾದ ರಾಮಚಂದ್ರ ಕಾಮತ್, ರಾಮದಾಸ್ ಗೌಡ, ಡಾ.ಸುಧಾ ಎಸ್ ರಾವ್, ವೀಣಾ ಬಿ ಕೆ, ಬಿ ಐತ್ತಪ್ಪ ನಾಯ್ಕ್, ಶೇಖರ್ ನಾರಾವಿ, ರವೀಂದ್ರನಾಥ ರೈ ಬಳ್ಳಮಜಲು, ಜಿಲ್ಲಾ ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಮುರಳಿಕೃಷ್ಣ ಹಸಂತಡ್ಕ, ಗೋಸೇವಾ ಬಳಗದ ಸಂಚಾಲಕ ಗೋಪಾಲಕೃಷ್ಣ ಭಟ್, ಸಂಯೋಜಕ ವಿಜಯ ಬಿ.ಎಸ್, , ಮುರಳೀಧರ ಬಂಗಾರಡ್ಕ, ಸಂತೋಷ್ ಬೋನಂತಾಯ, ಉದ್ಯಮಿ ಸೀತಾರಾಮ ರೈ ಕೆದಂಬಾಡಿಗುತ್ತು, ಪಶುವೈದ್ಯ ಡಾ ಪ್ರಸನ್ನ ಹೆಬ್ಬಾರ್ ಸಹಿತ ಹಲವಾರು ಸಂಘಸಂಸ್ಥೆಗಳ ಪದಾಧಿಕಾರಿಗಳು ಈ ಸಂದರ್ಭ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here