ನಿಡ್ಪಳ್ಳಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ ಪುತ್ತೂರು ಬೆಟ್ಟಂಪಾಡಿ ವಲಯದ ನಿಡ್ಪಳ್ಳಿ ಕಾರ್ಯಕ್ಷೇತ್ರದ ನಿಡ್ಪಳ್ಳಿ ಒಕ್ಕೂಟದ ತ್ರೈಮಾಸಿಕ ಸಭೆ ಫೆ.4ರಂದು ನಿಡ್ಪಳ್ಳಿ ಶಾಲೆಯಲ್ಲಿ ನಡೆಯಿತು.
ವಲಯ ಮೆಲ್ವೀಚಾರಕ ಚಂದ್ರಶೇಖರ ಮಾಹಿತಿ ನೀಡಿ ಸಂಪೂರ್ಣ ಸುರಕ್ಷೆ ಮಾಡುವ ಬಗ್ಗೆ ವಿವರಿಸಿದರು. ಮರುಪಾವತಿ ಮಾಡಲು ಸಾಧ್ಯವಿದ್ದಷ್ಟು ಸಾಲ ಪಡೆದು ಕ್ರಮವತ್ತಾಗಿ ಸಾಲದ ವಿನಿಯೋಗ ಮತ್ತು ವಾರದಲ್ಲಿ ಸರಿಯಾಗಿ ಮರುಪಾವತಿ ಮಾಡುವ ಬಗ್ಗೆ ಮಾಹಿತಿ ನೀಡಿ, ಬರುವ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯಲ್ಲಿ ಎಲ್ಲರೂ ಭಾಗವಹಿಸುವಂತೆ ತಿಳಿಸಿದರು.
ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷ ಮಂಜುನಾಥ ರೈ ಮಾತನಾಡಿ ಫೆ.25ರಂದು ನಡೆಯುವ ಪೂಜೆಯ ತಯಾರಿಗೆ 24ರಂದು ನಡೆಯುವ ಶ್ರಮದಾನ ಮತ್ತು ಪೂಜೆಗೆ ಎಲ್ಲರೂ ಸಹಕರಿಸುವಂತೆ ಹೇಳಿದರು. ಸೇವಾ ಪ್ರತಿನಿಧಿ ಶಾಲಿನಿ ಮಾತನಾಡಿ ಸಂಪೂರ್ಣ ಸುರಕ್ಷೆ ಮಾಡಲು ಅಗತ್ಯ ದಾಖಲೆ ತಯಾರಿ ಮಾಡಿ ನೊಂದಾವಣೆ ಮಾಡಲು ಸಹಕಾರ ನೀಡುವಂತೆ ತಿಳಿಸಿ ಎಲ್ಲರ ಸಹಕಾರ ಕೋರಿದರು.
ಪೂಜಾ ಆಮಂತ್ರಣ ಪತ್ರ ಬಿಡುಗಡೆ:
ಇದೇ ತಿಂಗಳ 25ರಂದು ಶ್ರೀ ಶಾಂತದುರ್ಗಾ ದೇವಸ್ಥಾನದಲ್ಲಿ ನಡೆಯುವ 20ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯ ಆಮಂತ್ರಣ ಪತ್ರವನ್ನು ಈ ಸಂದರ್ಭದಲ್ಲಿ ಬಿಡುಗಡೆ ಗೊಳಿಸಲಾಯಿತು.
ಪ್ರಕೃತಿ ತಂಡದ ವಸಂತಿ ಸ್ವಾಗತಿಸಿ, ಜವಾಬ್ದಾರಿ ತಂಡಗಳಿಂದ ಪ್ರೇಮಾ, ಸುರೇಶ ವರದಿ ವಾಚಿಸಿದರು. ಒಕ್ಕೂಟದ ಕಾರ್ಯದರ್ಶಿ ಶ್ರೀಮತಿ ಒಕ್ಕೂಟದ ವರದಿ ವಾಚಿಸಿದರು. ತಂಡದ ಹಾಜರಾತಿ ಮತ್ತು ಗ್ರೇಡಿಂಗ್ ಹಾಕಲಾಯಿತು. ಒಕ್ಕೂಟದ ಜತೆ ಕಾರ್ಯದರ್ಶಿ ಹೇಮಾವತಿ ವಂದಿಸಿದರು.