ಈಶ್ವರಮಂಗಲ ವಲಯ ಯುವ ಒಕ್ಕಲಿಗ ಗೌಡ ಸೇವಾ ಸಂಘದ ವತಿಯಿಂದ ಯುವ ಕ್ರೀಡಾ ಸಂಗಮ-2024

0

ಕಾವು:ಯುವ ಒಕ್ಕಲಿಗ ಗೌಡ ಸೇವಾ ಸಂಘ ಈಶ್ವರಮಂಗಳ ವಲಯ ಇವರ ನೇತೃತ್ವದಲ್ಲಿ ಒಕ್ಕಲಿಗ ಗೌಡ ಸೇವಾ ಸಂಘ ಈಶ್ವರಮಂಗಳ ವಲಯ, ಒಕ್ಕಲಿಗ ಸ್ವ ಸಹಾಯ ಸಂಘಗಳ ಒಕ್ಕೂಟ, ಒಕ್ಕಲಿಗ ಗೌಡ ಮಹಿಳಾ ಘಟಕ ಇವರ ಸಹಭಾಗಿತ್ವದಲ್ಲಿ ಮಾಡ್ನೂರು, ಬಡಗನ್ನೂರು, ನೆಟ್ಟಣಿಗೆ ಮುಡ್ನೂರು,ಪಡವನ್ನೂರು, ನಿಡ್ಪಳ್ಳಿ, ನೆಟ್ಟಣಿಗೆ ಬೆಳ್ಳೂರು ಗ್ರಾಮಗಳನ್ನು ಒಳಗೊಂಡ ವಲಯ ಮಟ್ಟದ ಯುವ ಕ್ರೀಡಾ ಸಂಗಮ ಪಟ್ಟೆ ವಿದ್ಯಾಸಂಸ್ಥೆಗಳ ಕ್ರೀಡಾಂಗಣದಲ್ಲಿ ಫೆ 4 ರಂದು ನಡೆಯಿತು.


ಕ್ರೀಡಾಕೂಟ ಉದ್ಗಾಟನಾ ಕಾರ್ಯಕ್ರಮ
ಕ್ರೀಡಾಕೂಟವನ್ನು ಹಿರಿಯರು, ಶ್ರಿ ಅಯ್ಯಪ್ಪ ಭಜನಾ ಮಂದಿರ ಪೇರಿಗೆರಿ ಇದರ ಮಾಜಿ ಅಧ್ಯಕ್ಷರಾದ ಗಣಪತಿ ಗೌಡ ಕೊಡಿಯಡ್ಕ ದೀಪ ಬೆಳಗಿಸಿ ಉದ್ಘಾಟಿಸಿ ಕಾರ್ಯಕ್ರಮ ಕ್ಕೆ ಶುಭ ಹಾರೈಸಿದರು. ಉದ್ಗಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಒಕ್ಕಲಿಗ ಗೌಡ ಸೇವಾ ಸಂಘ ಬಡಗನ್ನೂರು ಗ್ರಾಮ ಸಮಿತಿ ಅಧ್ಯಕ್ಷರಾದ ಶ್ರೀಧರ ಗೌಡ ಕನ್ನಯ,ಮುಖ್ಯ ಅತಿಥಿಗಳಾಗಿದ್ದ ಪ್ರಗತಿಪರ ಕೃಷಿಕರಾದ ವಿಶ್ವನಾಥ ಗೌಡ ಅಡಿಲು,ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ಕುಂಬ್ರ ಶಾಖೆ ಯ ಸಲಹಾ ಸಮಿತಿ ಸದಸ್ಯರಾದ ರಾಮಣ್ಣ ಗೌಡ ಬಸವಹಿತ್ಳು. ಈಶ್ವರಮಂಗಳ ವಲಯ ಒಕ್ಕಲಿಗ ಗೌಡ ಸೇವಾ ಸಂಘದ ವಲಯ ಉಸ್ತುವಾರಿ ಲೋಕೇಶ್ ಚಾಕೋಟೆ,ಒಕ್ಕಲಿಗ ಗೌಡ ಸೇವಾ ಸಂಘ ಬಡಗನ್ನೂರು ಸಮಿತಿಯ ಗೌರವಾಧ್ಯಕ್ಷರಾದ ಚಂದ್ರಶೇಖರ ಸಾರೆಪ್ಪಾಡಿ, ಬಡಗನ್ನೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಸುಶೀಲ ವೆಂಕಪ್ಪ ಗೌಡ ಮತ್ತು ಒಕ್ಕಲಿಗ ಸ್ವ ಸಹಾಯ ಸಂಘಗಳ ಒಕ್ಕೂಟ ನೆಟ್ಟಣಿಗೆ ಮುಡ್ನೂರು ಇದರ ಅದ್ಯಕ್ಷರಾದ ಕಲಾವತಿ ಎಸ್ ಗೌಡ ಪಟ್ಲಡ್ಕ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಕ್ರೀಡಾಳುಗಳಿಗೆ ಶುಭಹಾರೈಸಿದರು. ಈಶ್ವರಮಂಗಲ ವಲಯ ಯುವ ಒಕ್ಕಲಿಗ ಗೌಡ ಸೇವಾ ಸಂಘದ ಗೌರವಾಧ್ಯಕ್ಷ ಲಿಂಗಪ್ಪ ಗೌಡ ಮೋಡಿಕೆ,ಅಧ್ಯಕ್ಷರಾದ ಜಗ್ಗನಾಥ ಪಟ್ಟೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಧ್ಯಾ ಸಾರೆಪ್ಪಡಿ ಮತ್ತು ತಂಡ ಪ್ರಾರ್ಥಿಸಿದರು.ಈಶ್ವರಮಂಗಲ ವಲಯ ಯುವ ಒಕ್ಕಲಿಗ ಗೌಡ ಸೇವಾ ಸಂಘದ ಜೊತೆ ಕಾರ್ಯದರ್ಶಿ ಶರತ್ ಗೌಡ ಪುಳಿತ್ತಡಿ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ದೀಪಕ್ ಮುಂಡ್ಯ ವಂದಿಸಿದರು, ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಕಾವು ಕಾರ್ಯಕ್ರಮ ನಿರ್ವಹಿಸಿದರು.


ಕ್ರೀಡಾಕೂಟದ ಸಮಾರೋಪ ಕಾರ್ಯಕ್ರಮ
ಸಂಜೆ ನಡೆದ ಕ್ರೀಡಾ ಕೂಟದ ಸಮಾರೋಪ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಕ್ಕಲಿಗ ಗೌಡ ಸೇವಾ ಸಂಘ ರಿ ಪುತ್ತೂರು ಇದರ ಪೂರ್ವ ಅಧ್ಯಕ್ಷರಾದ ನಾಗಪ್ಪ ಗೌಡ ಬೊಮ್ಮೆಟ್ಟಿ, ವಹಿಸಿದ್ದು, ಮುಖ್ಯ ಅತಿಥಿಗಳಾಗಿ ಒಕ್ಕಲಿಗ ಗೌಡ ಸೇವಾ ಸಂಘದ ತಾಲೂಕು ಅಧ್ಯಕ್ಷರಾದ ರವಿ ಮುಂಗ್ಲಿಮನೆ,ಕೋಶಾಧಿಕಾರಿ ಶಿವರಾಮ ಮತಾವು, ತಾಲೂಕು ಮಹಿಳಾ ಸಂಘದ ವರಿಜಾ ಬೆಳಿಯಪ್ಪ ಗೌಡ,ಈಶ್ವರಮಂಗಲ ವಲಯ ಉಸ್ತುವಾರಿ ಲೋಕೇಶ್ ಚಾಕೋಟೆ, ನಿಡ್ಪಳ್ಳಿ ಒಕ್ಕಲಿಗ ಗೌಡ ಸೇವಾ ಸಂಘದ ಗೌರವಾಧ್ಯಕ್ಷರಾದ ನಾಗೇಶ್ ಗೌಡ ಪುಳಿತ್ತಡಿ, ನಿವೃತ್ತ ಸೈನಿಕರಾದ ವಿದ್ಯಾಧರ್ ಎನ್, ಒಕ್ಕಲಿಗ ಗೌಡ ಸಂಘ ನೆಟ್ಟಣಿಗೆ ಮುಡ್ನೂರು ಗ್ರಾಮದ ಉಪಾಧ್ಯಕ್ಷರಾದ ಕುಕ್ಕುಡೆಲು ಎಸ್ಟೇಟ್ ನ ನವೀನ್ ಕುಮಾರ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ದಿವ್ಯಪ್ರಸಾದ್ ಎ ಯಂ, ಶ್ರೀನಿವಾಸ ಗೌಡ ಕನ್ನಯ,ಒಕ್ಕಲಿಗ ಸ್ವ ಸಹಾಯ ಸಂಘಗಳ ಬಡಗನ್ನೂರು ಒಕ್ಕೂಟ ಅಧ್ಯಕ್ಷರಾದ ಗಿರಿಯಪ್ಪ ಗೌಡ ಅಲಂತಡ್ಕ,ವಲಯದ ಗೌರವಾಧ್ಯಕ್ಷ ಲಿಂಗಪ್ಪ ಗೌಡ ಮೋಡಿಕೆ,ಅದ್ಯಕ್ಷರಾದ ಜಗ್ಗನಾಥ ಪಟ್ಟೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಯುವ ಒಕ್ಕಲಿಗ ಗೌಡ ಸೇವಾ ಸಂಘ ಮಾಡ್ನೂರು ಗ್ರಾಮ ಅಧ್ಯಕ್ಷರಾದ ಯೋಗೀಶ್ ಕಾವು ಸ್ವಾಗತಿಸಿದರು. ವಲಯದ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಕಾವು ವಂದಿಸಿದರು. ಉಪಾಧ್ಯಕ್ಷ ಅನಿಲ್ ಕುಮಾರ್ ಕನ್ನಡ್ಕ ,ಕ್ರೀಡಾ ಕಾರ್ಯದರ್ಶಿ ಅಶ್ವಿತ್ ಮಾಡ್ಯಲಮಜಲು, ಸಾಂಸ್ಕೃತಿಕ ಕಾರ್ಯದರ್ಶಿ ಪ್ರೇಮಾನಂದ ಮೂಡಿಪಿನಡ್ಕ,ಕೋಶಾಧಿಕಾರಿ ಆಶೀರ್ವಾದ್ ಹೂಸಮನೆ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.


ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನ
2022-2023 ನೇ ಸಾಲಿನಲ್ಲಿ ಕ್ರೀಡಾ ಕ್ಷೇತ್ರದಲ್ಲಿ ರಾಷ್ಟ್ರ, ರಾಜ್ಯ, ಜಿಲ್ಲೆ, ತಾಲೂಕು ಮಟ್ಟದಲ್ಲಿ ಸಾಧನೆಗೈದ ಸಾರಕೂಟೇಲು ಲತಾ ಅರುಣ್ ಕುಮಾರ್ ದಂಪತಿಗಳ ಪುತ್ರಿ ಗ್ರಿಷ್ಮಾ, ಸಾರಕೂಟೇಲು ಶೋಭಾ ಮೋನಪ್ಪ ಗೌಡ ದಂಪತಿಗಳ ಪುತ್ರಿ ಸಿಂಚನಾ ಎಸ್ ಗೌಡ,ಕಾವು ಆಚಾರಿಮೂಲೆ ಪುಷ್ಪಲತಾ ಸತೀಶ್ ಗೌಡರ ಪುತ್ರಿ ಆಶಿಕ,ಉಳಯ ಭವಾನಿಪರಮೇಶ್ವರ ಗೌಡರ ಪುತ್ರಿ ಶ್ರಾವ್ಯ,ಅಲಂತಡ್ಕ ಉಷಾ ಮೋಹನಚಂದ್ರ ರ ಪುತ್ರಿ ದನ್ವಿ,ಅಲಂತಡ್ಕ ಚಿದಾನಂದ ಗೌಡರ ಪುತ್ರಿ ವಿಕ್ಷಾ ಇವರುಗಳನ್ನು ಶಾಲು ಹಾಕಿ,ಹುಗುಚ್ಛ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.ಹಾಗೂ ಕ್ರೀಡಾಕೂಟದಲ್ಲಿ ಅಂಪೈರ್ ಗಳಾಗಿ ಸಹಕರಿಸಿದ ಪಟ್ಟೆ ವಿದ್ಯಾ ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಮೋನಪ್ಪ ಮತ್ತು ಪ್ರಸಾದ್ ಈಶ್ವರಮಂಗಲ ಇವರುಗಳನ್ನು ಶಾಲು ಹಾಕಿ ಸ್ಮರಣಿಕೆ ಹೂಗುಚ್ಛ ನೀಡಿ ಗೌರವಿಸಲಾಯಿತು.


ಕ್ರೀಡಾಕೂಟದಲ್ಲಿ ಚಾಂಪಿಯನ್ ಬಡಗನ್ನೂರು ಗ್ರಾಮ,ರನ್ನರ್ಸ್ ನೆಟ್ಟಣಿಗೆ ಮುಡ್ನೂರು ಗ್ರಾಮ ಯುವ ಕ್ರೀಡಾ ಸಂಗಮ-2೦24 ಕ್ರೀಡಾಕೂಟದಲ್ಲಿ ಪುರುಷರರಿಗೆ,ಮಹಿಳೆಯರಿಗೆ,ಹುಡುಗರು, ಹುಡುಗಿಯರು, ಮಕ್ಕಳಿಗೆ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾಗಿ ಹೆಚ್ಚು ಅಂಕ ಗಳಿಸಿದ ಬಡಗನ್ನೂರು ಗ್ರಾಮ ಕ್ರೀಡಾಕೂಟದ ಚಾಂಪಿಯನ್ ಟ್ರೋಫಿಯನ್ನು ಮೂಡಿಗೇರಿಸಿಕೊಂಡಿದ್ದು,ರನ್ನರ್ಸ್ ಟ್ರೋಫಿ ಯನ್ನು ನೆಟ್ಟಣಿಗೆ ಮುಡ್ನೂರು ಗ್ರಾಮ ತನ್ನದಾಗಿಸಿಕೊಂಡಿತು.


ಕ್ರೀಡಾಕೂಟಕ್ಕೆ ಅನೇಕ ಗಣ್ಯರ ಭೇಟಿ
ವಲಯ ಮಟ್ಟದ ಕ್ರೀಡಾಕೂಟಕ್ಕೆ ಪುತ್ತೂರು ವಿಧಾನಸಭಾ ಕ್ಷೇತ್ರದ ಪೂರ್ವ ಶಾಸಕರದ ಸಂಜೀವ ಮಠ0ದೂರು, ಪಟ್ಟೆ ವಿದ್ಯಾಸಂಸ್ಥೆಗಳ ಸಂಚಾಲಕರಾದ ನಾರಾಯಣ ಭಟ್ ಬಿರ್ನೋಡಿ,ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ಪುತ್ತೂರು ಇದರ ಅಧ್ಯಕ್ಷರಾದ ಚಿದಾನಂದ ಬೈಲಾಡಿ, ನಿರ್ದೇಶಕರಾದ ಸತೀಶ್ ಪಾಂಬಾರು, ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಪೂರ್ವ ಅಧ್ಯಕ್ಷರಾದ ವಿಶ್ವನಾಥ ಗೌಡ ಕೆಯ್ಯುರು,ಯುವ ಒಕ್ಕಲಿಗ ಗೌಡ ಸೇವಾ ಸಂಘದ ತಾಲೂಕು ಅಧ್ಯಕ್ಷರಾದ ಅಮರನಾಥ ಗೌಡ ಬಪ್ಪಳಿಗೆ, ಪ್ರಧಾನ ಕಾರ್ಯದರ್ಶಿ ಅನಂದ ತೆಂಕಿಲ,ಪದಾಧಿಕಾರಿಗಳಾದ ಮೋಹನ್ ಕಬಕ,ಪ್ರಕಾಶ್ ಕೆಮ್ಮಾಯಿ, ವಸಂತ ನೆಕ್ಕರಾಜೆ,ತಾಲೂಕು ಮಹಿಳಾ ಘಟಕದ ಪದಾಧಿಕಾರಿಗಳಾದ ತ್ರಿವೇಣಿ, ವಿಜಯ,ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನ ಸಲಹಾ ಸಮಿತಿ ಸದಸ್ಯರಾದ ವೆಂಕಪ್ಪ ಗೌಡ ದೇವಳಿಕೆ, ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.400ಕ್ಕೂ ಮಿಕ್ಕಿ ಕ್ರೀಡಾಪಟುಗಳು,ಸಮಾಜ ಬಾಂಧವರು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here