ಪೂಡ ಅಧ್ಯಕ್ಷತೆಗೆ ಸೂತ್ರಬೆಟ್ಟು ಜಗನ್ನಾಥ ರೈಯವರಿಗೆ ಅವಕಾಶ ನೀಡಿ-ಕಾಂಗ್ರೆಸ್ ಕಾರ್ಯಕರ್ತನ ಪತ್ರ ಸೋಷಿಯಲ್ ಮೀಡಿಯಾದಲ್ಲಿ ವೈರಲ್

0

ಪುತ್ತೂರು:ಪುತ್ತೂರು ಪೂಡ ಅಧ್ಯಕ್ಷತೆಗೆ ಹಿರಿಯ ಕಾಂಗ್ರೆಸ್ಸಿಗ, ಪುರಸಭೆಯ ಮಾಜಿ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈಯವರಿಗೆ ಅವಕಾಶ ನೀಡುವಂತೆ ಆಗ್ರಹಿಸಿ, ಕಾಂಗ್ರೆಸ್ ಕಾರ್ಯಕರ್ತ ಚಂದ್ರಶೇಖರ್ ಪುತ್ತೂರು ಎಂಬವರ ಹೆಸರಿನಲ್ಲಿ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬೆಟ್ಟ ಈಶ್ವರ ಭಟ್ಟರ ಕಾಲದಿಂದಲೇ ಹಲವು ಚುನಾವಣೆಗಳಲ್ಲಿ ಪ್ರಾಮಾಣಿಕವಾಗಿ,ದಕ್ಷತೆಯಿಂದ ದುಡಿದ, ಪಕ್ಷದ ಸಿದ್ಧಾಂತಕ್ಕೆ ಬದ್ಧರಾಗಿ ಎಂಥ ಕಷ್ಟ ಬಂದರೂ ಪಕ್ಷಕ್ಕಾಗಿ ಹಗಲಿರುಳು ದುಡಿದಿರುವ,ಪುರಸಭೆಯ ಅಧ್ಯಕ್ಷರಾಗಿ ಅತ್ಯಂತ ಯಶಸ್ವಿಯಾಗಿ ಭ್ರಷ್ಟಾಚಾರ ರಹಿತ ಆಡಳಿತದೊಂದಿಗೆ ಜನಪರ ಕೆಲಸ ಮಾಡಿರುವ…ಹೀಗೆ ಸೂತ್ರಬೆಟ್ಟು ಜಗನ್ನಾಥ ರೈಯವರ ಕಾರ್ಯವೈಖರಿ ಬಗ್ಗೆ ಉಲ್ಲೇಖಿಸಿ ಬರೆದ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಪ್ರಸ್ತುತ ರಾಜ್ಯದ ವಿವಿಧ ನಿಗಮ, ಮಂಡಳಿಗಳಲ್ಲಿ ಪಕ್ಷದ ನಿಷ್ಟಾವಂತ ಕಾರ್ಯಕರ್ತರಿಗೆ ಅವಕಾಶ ನೀಡುವ ಕುರಿತ ಸಿಎಂ ಸಿದ್ಧರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೇಳಿರುವ ಬೆನ್ನಲ್ಲೇ ಸೂತ್ರಬೆಟ್ಟು ಅವರಿಗೆ ಪೂಡಾ ಅಧ್ಯಕ್ಷತೆ ನೀಡಬೇಕೆಂದು ಆಗ್ರಹಿಸಿರುವ ಪತ್ರ ವೈರಲ್ ಆಗಿರುವುದು ಚರ್ಚೆಗೆ ನಾಂದಿ ಹಾಡಿದೆ.

LEAVE A REPLY

Please enter your comment!
Please enter your name here