ದೇವಾಲಯದ ಅಭಿವೃದ್ಧಿ ಪುಣ್ಯ ಕಾರ್ಯ: ಸಂಯಮೇಂದ್ರ ತೀರ್ಥ ಸ್ವಾಮೀಜಿ
ಉಪ್ಪಿನಂಗಡಿ: ದೇವಾಲಯದ ಅಭಿವೃದ್ಧಿ ಕಾರ್ಯವು ಪುಣ್ಯ ಕಾರ್ಯವಾಗಿದ್ದು, ಇದರಲ್ಲಿ ಸ್ವಯಂ ಪ್ರೇರಿತವಾಗಿ ಎಲ್ಲರೂ ತೊಡಗಿಸಿಕೊಳ್ಳಬೇಕೆಂದು ಶ್ರೀ ಕಾಶಿ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿ ತಿಳಿಸಿದರು.
ಇಲ್ಲಿನ ಶ್ರೀ ಲಕ್ಷ್ಮೀ ವೆಂಕಟರಮಣ ದೇವಾಲಯಕ್ಕೆ ಭೇಟಿ ನೀಡಿದ ಅವರು ಸಮುದಾಯ ಬಾಂಧವರನ್ನುದ್ದೇಶಿಸಿ ಅವರು ಆರ್ಶೀವಚನ ನೀಡಿದರು. ದೇವಾಲಯ ಅಭಿವೃದ್ಧಿಯೆನ್ನುವುದು ಒದಗಿ ಬರುವ ಭಾಗ್ಯವಾಗಿದೆ. ಇದರಲ್ಲಿ ಎಲ್ಲರೂ ಒಗ್ಗೂಡಿ ಮುಂದುವರಿಯಬೇಕು ಎಂದರು. ಈ ಸಂದರ್ಭ ಶ್ರೀ ಗುರುಗಳಿಗೆ ಪಾದಪೂಜೆ ಗೌರವ ಸಮರ್ಪಣೆ ನಡೆಯಿತು.
ಈ ಸಂದರ್ಭ ಶ್ರೀ ದೇವಾಲಯದ ಆಡಳಿತ ಮೊಕ್ತೇಸರ ಬಿ. ಗಣೇಶ ಶೆಣೈ, ಮೊಕ್ತೇಸರರಾದ ಡಾ. ಎಂ.ಆರ್.ಶೆಣೈ, ಯು.ನಾಗರಾಜ ಭಟ್, ದೇವಿದಾಸ ಭಟ್, ಕೆ.ಅನಂತರಾಯ ಕಿಣಿ. ಪ್ರಮುಖರಾದ ಕರಾಯ ರಾಮಚಂದ್ರ ನಾಯಕ್, ಎಚ್. ವಾಸುದೇವ ಪ್ರಭು, ಕರಾಯ ಗಣೇಶ ನಾಯಕ್, ಕರಾಯ ಸತೀಶ ನಾಯಕ್, ಕರಾಯ ರಾಘವೇಂದ್ರ ನಾಯಕ್, ಕರಾಯ ನರಸಿಂಹ ನಾಯಕ್, ಕೆ.ಸುರೇಶ್ ಕಿಣಿ, ಕೆ. ಗಣೇಶ ಭಟ್, ಪ್ರದೀಪ ನಾಯಕ್, ಕೇಪುಳು ರಾಜೇಶ ನಾಯಕ್, ನೀನಿ ಸಂತೋಷ ಕಾಮತ್, ನ್ಯಾಯವಾದಿ ರಮೇಶ ನಾಯಕ್, ಬಿ. ಚೇತನ್ ಶೆಣೈ, ಎಂ. ಸರ್ವೇಶ್ ಭಟ್ ಲಕ್ಷ್ಮೀನಗರ, ಯು. ರಾಜೇಶ.ಪೈ, ಶಾಂತರಾಮ ಶೆಣೈ, ಕರಾಯ ನಾಗೇಶ ನಾಯಕ್, ಮಾಧವ ನಾಯಕ್, ಬಿ. ವಿಠಲದಾsಸ್ ಮಲ್ಯ, ವೈ. ಅನಂತ ಶೆಣೈ, ಕೆ. ಗಿರೀಶ್ ನಾಯಕ್, ಗಿರಿಧರ್ ನಾಯಕ್, ಹರೀಶ ಪೈ, ಕೆ.ಹರೀಶ ಕಿಣಿ, ಪಣಕಜೆ ಪ್ರಸಾದ ಶೆಣೈ, ನಂದಾವರ ಉಮೇಶ ಶೆಣೈ, ನಂದಾವರ ಗಣೇಶ ಶೆಣೈ, ನಂದಾವರ ಯೋಗೀಶ್ ಶೆಣೈ, ಅಚ್ಚುತ ಪ್ರಭು, ಶ್ರೀನಿವಾಸ್ ಪಡಿಯಾರ್, ಶ್ರೀಕಾಂತ್ ಪ್ರಭು, ಚಂದ್ರಶೇಖರ್ ಪ್ರಭು, ಅಚ್ಯುತ್ ಪಡಿಯಾರ್ ಮತ್ತಿತರರು ಉಪಸ್ಥಿತರಿದ್ದರು. ಅರ್ಚಕರಾದ ರವೀಂದ್ರ ಭಟ್, ನರಸಿಂಹ ಭಟ್, ಸಂದೀಪ್ ಭಟ್, ಸುಬ್ರಹ್ಮಣ್ಯ ಭಟ್, ಎಸ್.ಶ್ರೀನಿವಾಸ ಭಟ್ ಪೂಜಾ ವಿಧಿ-ವಿಧಾನಗಳನ್ನು ನಡೆಸಿಕೊಟ್ಟರು.