ರಾಮಕುಂಜ: ರಾಮಕುಂಜ ಗ್ರಾಮದ ಆನ ನಿವಾಸಿ ಮೋಂಟ ಗೌಡ (80ವ) ವಯೋಸಹಜ ಅನಾರೋಗ್ಯದಿಂದ ಫೆ.9ರಂದು ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದರು.
24ನೇ ವಯಸ್ಸಿನಲ್ಲಿಯೇ ದೈವದ ಪರಿಚಾರಕರಾಗಿ ಸೇವೆ ಆರಂಭಿಸಿದ್ದ ಮೋಂಟ ಗೌಡ ಅವರು ಸುಮಾರು 50 ವರ್ಷಕ್ಕಿಂತಲೂ ಹೆಚ್ಚು ಕಾಲ ದೈವದ ಪರಿಚಾರಕರಾಗಿ ಸೇವೆ ಸಲ್ಲಿಸಿದ್ದರು.
ಶ್ರೀ ರಾಮಕುಂಜೇಶ್ವರ ದೇವಸ್ಥಾನದಲ್ಲಿ ನಡೆಯುವ ವರ್ಷಾವಧಿ ನೇಮೋತ್ಸವದಲ್ಲಿ ಮೋಂಟ ಗೌಡ ಅವರು ದೈವದ ಪರಿಚಾರಕರಾಗಿ ಪ್ರತಿವರ್ಷವೂ ಸೇವೆ ಸಲ್ಲಿಸುತ್ತಿದ್ದರು. ವಯೋಸಹಜ ಅನಾರೋಗ್ಯದಿಂದಾಗಿ ಕಳೆದ ಕೆಲ ವರ್ಷಗಳಿಂದ ವಿಶ್ರಾಂತ ಜೀವನ ನಡೆಸುತ್ತಿದ್ದರು. ಮೃತರು ಪತ್ನಿ ಶಿವಮ್ಮ, ಪುತ್ರರಾದ ಗಿರಿಯಪ್ಪ ಗೌಡ, ಚಂದ್ರಶೇಖರ ಹಾಗೂ ಪುತ್ರಿ ಚಂದ್ರಾವತಿ, ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ. ಮೃತರ ಮನೆಗೆ ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಸಂಚಾಲಕ ಟಿ.ನಾರಾಯಣ ಭಟ್, ರಾಮಕುಂಜ ಒಕ್ಕಲಿಗ ಗೌಡ ಸೇವಾ ಸಂಘದ ರಾಮಕುಂಜ ಗ್ರಾಮ ಸಮಿತಿ ಅಧ್ಯಕ್ಷ ಪದ್ಮಪ್ಪ ಗೌಡ ರಾಮಕುಂಜ, ಕ್ಯಾಂಪ್ಕೋ ನಿವೃತ್ತ ಉದ್ಯೋಗಿ ರವೀಂದ್ರ ಆನ, ರಾಮಕುಂಜ ಗ್ರಾ.ಪಂ.ಸದಸ್ಯರಾದ ಪ್ರಶಾಂತ್ ಆರ್.ಕೆ., ಪ್ರದೀಪ್ ಬಾಂತೊಟ್ಟು ಮತ್ತಿತರರು ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.