ಪುತ್ತೂರು: ಪಾಲ್ತಾಡಿ ಗ್ರಾಮದ ಕುಂಜಾಡಿ ತರವಾಡು ಮನೆ ದೈವಗಳ ಪುನರ್ ಪ್ರತಿಷ್ಠೆ ಹಾಗೂ ಕಲಶಾಭಿಷೇಕ ಮತ್ತು ಗ್ರಾಮ ದೈವ ಅಬ್ಬೆಜಲಾಯ ದೈವ ಹಾಗೂ ತರವಾಡು ದೈವಗಳ ನೇಮೋತ್ಸವ ಫೆ.29 ರಿಂದ ಮಾರ್ಚ್ 2ರವರೆಗೆ ನಡೆಯಲಿದ್ದು, ಅದರ ಆಮಂತ್ರಣ ಪತ್ರವನ್ನು ಫೆ.8ರಂದು ತರವಾಡು ಮನೆಯಲ್ಲಿ ಬಿಡುಗಡೆಗೊಳಿಸಲಾಯಿತು. ತರವಾಡು ಮನೆಯ ಸಲಹಾ ಸಮಿತಿ ಗೌರವಾಧ್ಯಕ್ಷ ಮಂಜುನಾಥ ರೈ ಕೆಳಗಿನಕುಂಜಾಡಿಯವರು ಬಿಡುಗಡೆಗೊಳಿಸಿದರು.
ಸಮಿತಿಯ ಅಧ್ಯಕ್ಷ ದೇವದಾಸ ರೈ ಕುಂಜಾಡಿ, ಕಾರ್ಯದರ್ಶಿ ಸುಧೀರ್ ಕುಮಾರ್ ರೈ ಕುಂಜಾಡಿ, ಕೋಶಾಧಿಕಾರಿ ಭಾಸ್ಕರ ರೈ ಕುಂಜಾಡಿ, ಗಣೇಶ್ ಶೆಟ್ಟಿ ಕುಂಜಾಡಿ, ಲಕ್ಷ್ಮೀಶ ಶೆಟ್ಟಿ ಕುಂಜಾಡಿ, ಭಾಸ್ಕರ ರೈ ಬಜದಗುತ್ತು, ಸುಧಾಕರ ರೈ ಕುಂಜಾಡಿ, ಪದ್ಮಪ್ರಸಾದ್ ಆರಿಗ ಪಂಚೋಡಿ, ದೀಕ್ಷಿತ್ ಜೈನ್ ಚೆನ್ನಾವರ, ವಿಶ್ವನಾಥ ರೈ ಚೆನ್ನಾವರ, ಬಾಲಕೃಷ್ಣ ರೈ ಚೆನ್ನಾವರ, ಜಯಪ್ರಕಾಶ್ ರೈ ಸೋಣಂಗೇರಿ, ಸಂಪತ್ ಕುಮಾರ್ ರೈ ಪಾತಾಜೆ, ಪ್ರಮೋದ್ ರೈ ಮೇನಾಲ, ಹರೀಂದ್ರನಾಥ ರೈ ಕಾಯರ, ವಿವೇಕ್ ರೈ ಅರಿಯಡ್ಕ, ಪ್ರಶಾಂತ್ ಕುಂಜಾಡಿ, ಪ್ರಸನ್ನ ಕುಂಜಾಡಿ, ಸುಕೇಶ್ ಕುಮಾರ್ ರೈ ಕುಂಜಾಡಿ, ಸನತ್ ಕುಮಾರ್ ರೈ, ರಕ್ಷಣ್ ರೈ, ಸುಶೀಲಾವತಿ ರೈ ಕುಂಜಾಡಿ, ಸುನೀತಾ ಜಯಪ್ರಕಾಶ್ ರೈ, ಹರಿಕಲಾ ಕುಂಜಾಡಿ, ಮಲ್ಲಿಕಾ ಶೆಟ್ಟಿ ಕುಂಜಾಡಿ, ಪದ್ಮಲತಾ ರೈ ಕುಂಜಾಡಿ ಉಪಸ್ಥಿತರಿದ್ದರು.
ಸುಮಾರು 75 ಲಕ್ಷ ರೂ. ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡ ದೈವಸ್ಥಾನಗಳಲ್ಲಿ ಧರ್ಮರಸು ಉಳ್ಳಾಕುಲು ಗ್ರಾಮದೈವ ಅಬ್ಬೆಜಲಾಯ, ಧರ್ಮದೈವ ಪಿಲಿಚಾಮುಂಡಿ, ವರ್ಣಾರ ಪಂಜುರ್ಲಿ, ಜಾವತೆ, ಕಲ್ಲುರ್ಟಿ, ಬೊಬ್ಬರ್ಯ, ಗುಳಿಗ ದೈವಗಳ ಪುನರ್ ಪ್ರತಿಷ್ಠೆಯು ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಗಳ ಮಾರ್ಗದರ್ಶನದಲ್ಲಿ ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ಫೆ.29ರಿಂದ ನಡೆಯಲಿದೆ.