ಫೆ.11: ತುಳುಕೂಟ ಪುತ್ತೂರು ವತಿಯಿಂದ ಕೆಡ್ಡಸದ ಕೂಟ ಕಾರ್ಯಕ್ರಮ

0

ತುಳುಕೂಟ ಪುತ್ತೂರು ವತಿಯಿಂದ ಒಡಿಯೂರು ಶ್ರೀ ವಜ್ರಮಾತಾ ಮಹಿಳಾ ಮಂಡಳಿ ಪುತ್ತೂರು ಘಟಕದ ಸಹಯೋಗದಲ್ಲಿ ಕೆಡ್ಡಸದ ಕೂಟ ಕಾರ್ಯಕ್ರಮವು ಫೆ.11 ಭಾನುವಾರ ಬೆಳಗ್ಗೆ 10 ಗಂಟೆಯಿಂದ 11 ಗಂಟೆಯವರೆಗೆ ನೆಲ್ಲಿಕಟ್ಟೆ ನಯನಾ ರೈಯವರ ಅಂಗಳದಲ್ಲಿ ಜರಗಲಿದೆ.

ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಅವರು ತುಳುವರ ಕೆಡ್ಡಸ ಆಚರಣೆಯ ವಿಷಯದಲ್ಲಿ ಉಪನ್ಯಾಸ ನೀಡಲಿದ್ದು, ಉಜಿರೆ ಎಸ್.ಡಿ.ಎಂ. ಕಾಲೇಜಿನ ಉಪನ್ಯಾಸಕಿ ಪ್ರೊ. ಹರಿಣಿ ಪುತ್ತೂರಾಯ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಸಾರ್ವಜನಿಕರಿಗೆಮುಕ್ತ ಪ್ರವೇಶವಿದೆ ಎಂದು ತುಳುಕೂಟದ ಅಧ್ಯಕ್ಷ ಪ್ಯಾಟ್ರಿಕ್ ಸಿಪ್ರಿಯನ್ ಮಸ್ಕರೇನಸ್ ಮತ್ತು ವಜ್ರಮಾತಾ ಮಹಿಳಾ ಮಂಡಳಿಯ ಅಧ್ಯಕ್ಷೆ ನಯನಾ ರೈ ನೆಲ್ಲಿಕಟ್ಟೆ ಪ್ರಕಟಿಸಿದ್ದಾರೆ.

LEAVE A REPLY

Please enter your comment!
Please enter your name here