ಪುತ್ತೂರು:ಸೆವೆನ್ ಡೈಮಂಡ್ಸ್ ಸ್ಪೋರ್ಟ್ಸ್ ಆಂಡ್ ಆರ್ಟ್ಸ್ ಕ್ಲಬ್ ಪುತ್ತೂರು ಇದರ ಆಶ್ರಯದಲ್ಲಿ ದಿ| ಅಖಿಲೇಶ್ ಸ್ಮರಣಾರ್ಥ, ಹೊನಲು ಬೆಳಕಿನಲ್ಲಿ ಪ್ರಥಮ ಬಾರಿಗೆ ಲೀಗ್ ಮಾದರಿಯ ಪುರುಷರ ವಾಲಿಬಾಲ್ ಪಂದ್ಯಾಟ ಫೆ.10ರಂದು ಸಂಜೆ ಇಲ್ಲಿನ ಕಿಲ್ಲೆ ಮೈದಾನದಲ್ಲಿ ಉದ್ಘಾಟನೆಗೊಂಡಿದೆ.ದ.ಕ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳ ಆಹ್ವಾನಿತ 8 ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಿವೆ.
ಹೊಸ ರೀತಿಯಲ್ಲಿ ವಾಲಿಬಾಲ್ ಪಂದ್ಯಾಟ ಪರಿಚಯ ಯಶಸ್ವಿಯಾಗಲಿ: ಪಂದ್ಯಾಟದ ಸಭಾ ಕಾರ್ಯಕ್ರಮ ಉದ್ಘಾಟಿಸಿದ ದೀಪ ವಿಜಯ ಸಾಮ್ರಾಟ್ ಸ್ಥಾಪಕ ಅಧ್ಯಕ್ಷ, ಉದ್ಯಮಿ ಸಹಜ್ ಜೆ. ರೈ ಬಳಜ್ಜ ಅವರು ಮಾತನಾಡಿ ನಾವು ಕ್ರಿಕೆಟ್, ಕಬಡ್ಡಿ ನೋಡಿದ್ದೇವೆ.ಆದರೆ ಇವತ್ತು ವಾಲಿಬಾಲ್ ಅನ್ನು ವಿಶೇಷ ಪಂದ್ಯಾಟದ ಮೂಲಕ ಪರಿಚಯ ಮಾಡಿರುವುದು ಕ್ರೀಡಾಸಕ್ತರಿಗೆ ಪ್ರೋತ್ಸಾಹ ನೀಡಿದಂತಾಗಿದೆ.ಈ ಮಣ್ಣಿನಲ್ಲಿ ಆಡಿದ ಎಲ್ಲಾ ಕ್ರೀಡಾಪಟುಗಳು ರಾಜ್ಯ ಮತ್ತು ರಾಷ್ಟ್ರದಲ್ಲಿ ಮಿಂಚುವಂತಾಗಲಿ ಎಂದರು.
ವಿದ್ಯಾರ್ಥಿಗಳಿಗೆ ಒತ್ತು ನೀಡುವ ಪಂದ್ಯಾಟ ಮೂಡಿಬರಲಿ: ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸುದಾನ ವಸತಿಯುತ ಶಾಲೆಯ ಸಂಚಾಲಕ ರೆ|ವಿಜಯ ಹಾರ್ವಿನ್ ಅವರು ಮಾತನಾಡಿ ಇಲ್ಲಿನ ವಾತಾವರಣ ನೋಡಿದಾಗ ಅಂತರ್ರಾಷ್ಟ್ರೀಯ ಮಟ್ಟದ ರೀತಿಯಲ್ಲಿ ಆಯೋಜನೆ ಮಾಡಿದಂತೆ ಕಾಣುತ್ತಿದೆ.ಕ್ರೀಡಾಪಟುಗಳನ್ನು ಕ್ರೀಡೆಗೆ ತೊಡಗಿಸಲು ಇಂತಹ ಪ್ರೋತ್ಸಾಹ ಬೇಕು.ಅದರಲ್ಲೂ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಸಿಗಬೇಕು. ಯಾಕೆಂದರೆ ಎಳೆಯ ವಯಸ್ಸಿನಲ್ಲೇ ವಾಲಿಬಾಲ್ ಕ್ರೀಡೆಯ ಆಸಕ್ತಿ ಮೂಡಿದಾಗ ಮುಂದೆ ಪ್ರತಿಭೆ ಅತೀ ಎತ್ತರಕ್ಕೆ ಬೆಳೆಯುತ್ತದೆ ಎಂದರು.ಎಮ್‌ಆರ್‌ಪಿಎಲ್‌ನ ಸೀತಾರಾಮ ರೈ ಚೆಲ್ಯಡ್ಕ, ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ಸಹಸಂಯೋಜಕ ಮುರಳಿಕೃಷ್ಣ ಹಸಂತಡ್ಕ, ನಗರಸಭಾ ಸದಸ್ಯ ರಮೇಶ್ ರೈ ನೆಲ್ಲಿಕಟ್ಟೆ ಶುಭ ಹಾರೈಸಿದರು.
8 ತಂಡಗಳಲ್ಲಿ ಮಾಲಕರುಗಳಿಗೆ ಸನ್ಮಾನ: ಆಹ್ವಾನಿತ 8 ತಂಡಗಳಲ್ಲಿ ದ.ಕ.,ಉಡುಪಿ, ಕಾಸರಗೋಡು ಜಿಲ್ಲೆಗಳ ವಾಲಿಬಾಲ್ ಪಟುಗಳು ಭಾಗವಹಿಸಿದ್ದಾರೆ.ರಾಧಾಕೃಷ್ಣ ರೈ ಮುಂಡಾಸ್ ಮಾಲಕತ್ವದ ಸುಶಾಂತ್ ಕೆಟರರ‍್ಸ್ ಬೆಂಗಳೂರು ತಂಡ, ನ್ಯಾಯವಾದಿ ರಾಮಪ್ರಸಾದ್ ಶೆಟ್ಟಿ ಮಾಲಕತ್ವದ ಬೇರಿಕೆ ತಂಡ, ಜಯಂತ್ ಶೆಟ್ಟಿ ಕಂಬಳತ್ತಡ್ಡ ಮಾಲಕತ್ವದ ರತ್ನಶ್ರೀ ತಂಡ, ಕೀರ್ತನ್ ಮತ್ತು ಸ್ನೇಹಿತರ ಮಾಲಕತ್ವದ ಅಶೋಕ್ ಕುಮಾರ್ ರೈ ಅಭಿಮಾನಿ ಬಳಗ(ಎ.ಆರ್ ವಾರಿಯರ‍್ಸ್) ತಂಡ, ಸೂರ್ಯನಾಥ ಆಳ್ವ ಮಾಲಕತ್ವದ ಟೀಮ್ ಮಿತ್ತಳಿಕೆ ತಂಡ, ಜನಾರ್ದನ ಪಡುಮಲೆ ಮಾಲಕತ್ವದ ಪೃಥ್ವಿ ಚಾಲೆಂಜರ್ಸ್ ಪಡುಮಲೆ, ಆಳ್ವಾಸ್ ವಿದ್ಯಾಸಂಸ್ಥೆಯ ಕಪ್ತಾನ ದೀಕ್ಷಿತ್ ಶೆಟ್ಟಿ, ಡಾ.ದೀಪಕ್ ರೈ ಮಾಲಕತ್ವದ ಪುತ್ತೂರು ಕ್ಲಬ್ ತಂಡ ಪಂದ್ಯಾಟದಲ್ಲಿ ಭಾಗವಹಿಸಿದ್ದು ತಂಡದ ಮಾಲಕರುಗಳಿಗೆ ಸಂಘಟನೆಯಿಂದ ಸನ್ಮಾನ ಕಾರ್ಯಕ್ರಮ ನಡೆಯಿತು. ಪುತ್ತೂರು ಕ್ಲಬ್ ಪರವಾಗಿ ನಿತಿನ್ ಪಕ್ಕಳ ಸನ್ಮಾನ ಸ್ವೀಕರಿಸಿದರು.
ರಕ್ತದಾನ ಸಂಘಟನೆಗೆ ಸನ್ಮಾನ: ಸೆವೆನ್ ಡೈಮಂಡ್ಸ್ ಸ್ಪೋರ್ಟ್ಸ್ ಆಂಡ್ ಆರ್ಟ್ಸ್ ಕ್ಲಬ್ ಇವರ ಮೂಲಕ ರಕ್ತದಾನ ಸೇವಾ ಕಾರ್ಯಕ್ಕೆ ಸಂಘಟನೆಯ ಸದಸ್ಯರನ್ನು ಜೋಡಿಸುವ ಕಾರ್ಯವನ್ನು ಬಹಳ ಯಶಸ್ವಿಯಾಗಿ ನಿರ್ವಹಿಸುತ್ತಿರುವ ಸುಜಿತ್ ಬಂಗೇರ ಅವರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.ಅಖಿಲ ಭಾರತ ಪೆಟ್ರೋಲಿಯಂ ವಿತರಕರ ಸಂಘದ ಅಧ್ಯಕ್ಷ ವಿಶ್ವಾಸ್ ಶೆಣೈ, ಜಿಲ್ಲಾ ವಾಲಿಬಾಲ್ ಅಸೋಸಿಯೇಶನ್ ಅಧ್ಯಕ್ಷ ಸತೀಶ್ ಬಿ.ಎಸ್, ದ.ಕ ವಾಲಿಬಾಲ್ ಅಸೋಸಿಯೇಶನ್ ಸಂಘಟನಾ ಕಾರ್ಯದರ್ಶಿ ಅಹಮದ್ ಮುಸ್ತಫ, ಪುತ್ತೂರು ತಾಲೂಕು ವಾಲಿಬಾಲ್ ಅಸೋಸಿಯೇಶನ್‌ನ ಅಧ್ಯಕ್ಷ ಸತೀಶ್ ರೈ ಕಟ್ಟಾವು, ಬಂಟ್ವಾಳ ತಾಲೂಕಿನ ವಾಲಿಬಾಲ್ ಅಸೋಸಿಯೇಶನ್‌ನ ಗೌರವಾಧ್ಯಕ್ಷ ಶ್ರೀಕಾಂತ್ ಶೆಟ್ಟಿ, ರಾಜ್ಯ ವಾಲಿಬಾಲ್ ಸಂಘಟನೆ ಸದಸ್ಯ ಇಬ್ರಾಹಿಂ ಗೋಳಿಕಟ್ಟೆ, ಉದ್ಯಮಿಗಳಾದ ಪ್ರಸನ್ನ ಕುಮಾರ್ ಶೆಟ್ಟಿ ಸಾಮೆತ್ತಡ್ಕ, ನಿತಿನ್ ಪಕ್ಕಳ, ಶಿವರಾಮ ಆಳ್ವ, ಪುತ್ತೂರು ಕ್ಲಬ್‌ನ ದೀಪಕ್ ಕೆ.ಪಿ,ಸಾಮೆತ್ತಡ್ಕ ಯುವಕ ಮಂಡಲದ ಅಧ್ಯಕ್ಷ ರೋಶನ್ ರೆಬೆಲ್ಲೊ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಸೆವೆನ್ ಡೈಮಂಡ್ಸ್ ಸ್ಪೋರ್ಟ್ಸ್ ಆಂಡ್ ಆರ್ಟ್ಸ್ ಕ್ಲಬ್‌ನ ಅಧ್ಯಕ್ಷ ಶರತ್ ಆಳ್ವ ಕೂರೇಲು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.ಉಪಾಧ್ಯಕ್ಷ ಶಿವರಾಮ್ ಭಟ್ ಪೆರ್ಲಂಪಾಡಿ ವಂದಿಸಿದರು. ವಿ.ಜೆ.ವಿಖ್ಯಾತ್ ಕಾರ್ಯಕ್ರಮ ನಿರೂಪಿಸಿದರು.ಸೆವೆನ್ ಡೈಮಂಡ್ಸ್ ಸ್ಪೋರ್ಟ್ಸ್ ಆಂಡ್ ಆರ್ಟ್ಸ್ ಕ್ಲಬ್‌ನ ಗೌರವಾಧ್ಯಕ್ಷ ಜೂಲಿಯನ್ ಪೀಟರ್, ಕಾರ್ಯಾಧ್ಯಕ್ಷ ಗಣೇಶ್ ರೈ ಮುಂಡಾಸು, ಪ್ರಧಾನ ಕಾರ್ಯದರ್ಶಿ ಪ್ರದೀಪ್ ಪಿ.ಆರ್, ಉಪಾಧ್ಯಕ್ಷ ಮೋಹನ್ ಕೆ, ರಾಧಾಕೃಷ್ಣ, ಕೋಶಾಧಿಕಾರಿ ಗುಣಕರ್ ಶೆಟ್ಟಿ, ಜೊತೆ ಕಾರ್ಯದರ್ಶಿ ಶರತ್ ರೈ ಮುಂಡಾಸು ವಿವಿಧ ಕಾರ್ಯಕ್ರಮ ನಿರೂಪಿಸಿದರು.ಸಭಾ ಕಾರ್ಯಕ್ರಮದ ಬಳಿಕ ವಾಲಿಬಾಲ್ ಪಂದ್ಯಾಟ ಮುಂದುವರಿಯಿತು.
ಸಂಜೆ ಪಂದ್ಯಾಟಕ್ಕೆ ಚಾಲನೆ: ರಾಜ್ಯ ಪ್ರಶಸ್ತಿ ವಿಜೇತ ದೈಹಿಕ ಶಿಕ್ಷಣ ಶಿಕ್ಷಕ ದಯಾನಂದ ರೈ ಕೋರ್ಮಂಡ ಪಂದ್ಯಾಟಕ್ಕೆ ಚಾಲನೆ ನೀಡಿದರು.ಈ ಸಂದರ್ಭ ದಿ| ಅಖಿಲೇಶ್ ಅವರ ತಂದೆ ಕೃಷ್ಣನ್, ದ.ಕ ವಾಲಿಬಾಲ್ ಅಸೋಸಿಯೇಶನ್ ಸಂಘಟನಾ ಕಾರ್ಯದರ್ಶಿ ಅಹಮದ್ ಮುಸ್ತಫ, ಸಂತ ಫಿಲೋಮಿನಾ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕ ಎಲಿಯಾಸ್ ಪಿಂಟೊ, ನಗರಸಭೆ ಮಾಜಿ ಅಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಪುತ್ತೂರು ನಗರ ಪೊಲೀಸ್ ಠಾಣೆಯ ಹೆಡ್‌ಕಾನ್‌ಸ್ಟೇಬಲ್ ಸ್ಕರಿಯ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು. ಪಂದ್ಯಾಟದ ಸಂದರ್ಭ ಮಾಜಿ ಶಾಸಕಿ ಶಕುಂತಳಾ ಶೆಟ್ಟಿಯವರು ಆಗಮಿಸಿ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಿ ತೆರಳಿದರು.
ಹಲವಾರು ವರ್ಷಗಳಿಂದಲೇ ವಾಲಿಬಾಲ್‌ಗೆ ಪ್ರೋತ್ಸಾಹ
ಹಲವಾರು ವರ್ಷಗಳಿಂದ ವಾಲಿಬಾಲ್ ತಂಡವನ್ನು ಕಟ್ಟಿಕೊಂಡು ಬಂದಿರುವ ಸೆವೆನ್ ಡೈಮಂಡ್ಸ್ ಸ್ಪೋರ್ಟ್ಸ್ ಆಂಡ್ ಆರ್ಟ್ಸ್ ಕ್ಲಬ್ ಇವತ್ತು ರಿಜಿಸ್ಟರ‍್ಡ್ ಬಾಡಿಯಾಗಿದೆ. ಆ ಮೂಲಕ ಉತ್ತಮ ಕೀಡಾ ಚಟುವಟಿಕೆ ಹಮ್ಮಿಕೊಂಡಿದ್ದೇವೆ.2019ರ ನಂತರ ಸೆವೆನ್ ಡೈಮಂಡ್ಸ್‌ನಲ್ಲಿ ಬ್ಲಡ್ ಗ್ರೂಪ್ ತಂಡವೂ ಹುಟ್ಟಿಕೊಂಡಿತ್ತು.ಕೊರೋನಾ ಸಂದರ್ಭದಲ್ಲಿ ಸಾವಿರಾರು ಮಂದಿಗೆ ರಕ್ತದಾನ ಮಾಡುವ ಮೂಲಕ ಉತ್ತಮ ಸಹಕಾರ ನೀಡಿದೆ.ಇವತ್ತು ವಾಲಿಬಾಲ್ ಪಂದ್ಯಾಟವನ್ನು ಪುತ್ತೂರಿನಲ್ಲಿ ಪ್ರಥಮಬಾರಿಗೆ ಲೀಗ್ ಮಾದರಿಯಲ್ಲಿ ಆಯೋಜಿಸಿದ್ದೇವೆ-
ಶರತ್ ಆಳ್ವ ಕೂರೇಲು ಅಧ್ಯಕ್ಷರು
ಸೆವೆನ್ ಡೈಮಂಡ್ಸ್ ಸ್ಪೋರ್ಟ್ಸ್ ಆಂಡ್ ಆರ್ಟ್ಸ್ ಕ್ಲಬ್ ಪುತ್ತೂರು