67 ವಿಷಯಗಳಲ್ಲಿ 7 ಸಾವಿರ ವಿದ್ಯಾರ್ಥಿಗಳ ಪ್ರತಿಭೆ ಅನಾವರಣ
ಪುತ್ತೂರು : ಸಮಸ್ತ ಕೇರಳ ಜಂಇಯ್ಯತುಲ್ ಮುಅಲ್ಲಿಮೀನ್ ಸೆಂಟ್ರಲ್ ಕೌನ್ಸಿಲ್ ಅಧಿನದಲ್ಲಿ ಸಮಸ್ತ ಅಂಗೀಕೃತ ಮದರಸ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಗಾಗಿ ನಡೆಸಲಾದ ಇಸ್ಲಾಮಿಕ್ ಕಲಾ ಸಾಂಸ್ಕೃತಿಕ ಸ್ಪರ್ಧೆ ಕರ್ನಾಟಕ ರಾಜ್ಯ ಮಟ್ಟದ ‘ಮುಸಾಬಖ’ ಪರ್ಲಡ್ಕ ಹಯಾತುಲ್ ಇಸ್ಲಾಂ ಮದರಸ ವಠಾರದಲ್ಲಿ ಪ್ರಾರಂಭಗೊಂಡಿತು.
ಬೆಳಿಗ್ಗೆ ಪುತ್ತೂರು ತಾಲೂಕು ಸಮಸ್ತ ಜಂಇಯ್ಯತುಲ್ ಉಲಮಾ ಅಧ್ಯಕ್ಷ ಸಯ್ಯದ್ ಅಹ್ಮದ್ ಪೂಕೋಯ ತಂಜಳ್ ರವರ ನೇತೃತ್ವದಲ್ಲಿ ಪುತ್ತೂರು ಮರ್’ಹೂಂ ಸಯ್ಯದ್ ಮುಹಮ್ಮದ್ ತಂಞಳ್ ರವರ ಮಖ್ಯರ ಝಿಯಾರತಿನೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ನಂತರ ಪುತ್ತೂರಿನಿಂದ ಪರ್ಲಡ್ಕ ಶಂಸುಲ್ ಉಲಮಾ ನಗರ ತನಕ ಎಸ್ಕೆಎಸ್‌ಬಿವಿ ವಿದ್ಯಾರ್ಥಿಗಳ ಆಕರ್ಷಣೀಯ ಕಾಲ್ನಡಿಗೆ ಜಾಥಾ ನಡೆಯಿತು. ಜಾಥಾದ ನಾಯಕ ಸುನ್ನಿ ಬಾಲವೇದಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರ್ವೇಜ್ ಅಕ್ತರ್‌ಗೆ ಮುಸಾಬಖ ಸ್ವಾಗತ ಸಮಿತಿ ಜನರಲ್ ಕನ್ವೀನರ್ ಹುಸೈನ್ ತಂಞಳ್ ಕಾಸರಗೋಡು ರವರು ಸಮಸ್ತದ ಧ್ವಜ ಹಸ್ತಾಂತರ ಮಾಡುವ ಮೂಲಕ ಚಾಲನೆ ನೀಡಿದರು. ಪರ್ಲಡ್ಕ ಜುಮ್ಮಾ ಮಸೀದಿ ವಠಾರದಲ್ಲಿ ಜಮಾಅತ್ ಅಧ್ಯಕ್ಷ ಅಬ್ದುಲ್ ರಜಾಕ್ ಹಾಜಿಯವರು ಧ್ವಜಾರೋಹಣ ನಿರ್ವಹಿಸಿದರು.ಬೆಳಿಗ್ಗೆ ಪರ್ಲಡ್ಕ ಜುಮಾ ಮಸೀದಿ ಖತೀಬರಾದ ಅಬ್ದುಲ್ ರಶೀದ್ ರಹ್ಮಾನಿ ಶಂಸುಲ್ ಉಲಮಾ ಮೌಲಿದ್ ಮಜ್ಲಿಸಿಗೆ ನೇತೃತ್ವ ನೀಡಿದರು.
ಕಾರ್ಯಕ್ರಮವನ್ನು ಸಮಸ್ತ ಮುಶಾವರ ಸದಸ್ಯರಾದ ಅಬ್ದುಲ್ಲಾ ಫಾಝಿ ಕೊಡಗು ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಎಸ್ ಕೆ ಜೆ ಎಂ ಸಿ ಸಿ ಉಪಾಧ್ಯಕ್ಷ ಅಬ್ದುಲ್ ಖಾದರ್ ಖಾಸಿಮಿ ವಹಿಸಿದ್ದರು.ಸ್ವಾಗತ ಸಮಿತಿ ಕನ್ವೀನರ್ ಹುಸೈನ್ ತಂಞಳ್ ಮಾಸ್ತಿಕುಂಡ್, ಹುಸೈನ್ ಕುಟ್ಟಿ ಮೌಲವಿ, ಉಮರ್ ದಾರಿಮಿ ಸಾಲ್ಮರ ಶುಭ ಹಾರೈಸಿದರು.
ಜಂಇಯ್ಯತುಲ್ ಮುಅಲ್ಲಿಮೀನ್ ಜಿಲ್ಲಾಧ್ಯಕ್ಷ ಶಂಸುದ್ದೀನ್ ದಾರಿಮಿ ಪಮ್ಮಲೆ, ಸಮಸ್ತ ವಿದ್ಯಾಭ್ಯಾಸ ಮಂಡಳಿ ಸದಸ್ಯ ರಶೀದ್ ಹಾಜಿ ಪರ್ಲಡ್ಕ,ಮುಫತ್ತಿಷ್ ಉಮರ್ ದಾರಿಮಿ,ಎಲ್ ಟಿ.ಅಬ್ದುಲ್ ರಝಾಕ್ ಹಾಜಿ,ಶಾಹುಲ್ ಹಮೀದ್ ಮಾಸ್ಟರ್, ಅಬ್ದುಲ್ ಅಝೀಝ್ ಬಪ್ಪಳಿಗೆ, ಅಬೂಬಕ್ಕರ್ ಮುಲಾರ್,ತಮ್ಲೀಕ್ ದಾರಿಮಿ ಕೊಡಗು, ಎಸ್ ಕೆ ಎಸ್ ಎಸ್ ಎಫ್ ಕೇಂದ್ರ ಕಾರ್ಯದರ್ಶಿ ಇಸ್ಮಾಯಿಲ್ ಯಮಾನಿ ತಿಂಗಳಾಡಿ,ಈಸ್ಟ್ ಜಿಲ್ಲಾಧ್ಯಕ್ಷ ತಾಜುದ್ದೀನ್ ರಹ್ಮಾನಿ,ಪುತ್ತೂರು ವಲಯಾಧ್ಯಕ್ಷ ಇಬ್ರಾಹಿಂ ಬಾತಿಷಾ ಹಾಜಿ ಪಾಟ್ರಕೋಡಿ, ಪರ್ಲಡ್ಕ ಜಮಾಅತ್ ಕಾರ್ಯದರ್ಶಿ ಫಾರೂಕ್ ನಿಶ್ಮ,ಉಪಾಧ್ಯಕ್ಷರಾದ ರಿಯಾಝ್ ಕೌನ್ಸಿಲರ್, ಕೋಶಾಧಿಕಾರಿ ಹಸನ್ ಅಕ್ಕರೆ, ಶಮೀರ್ ಸ್ಕೇಲ್,ಬಶೀರ್ ಅಕ್ಕರೆ ಉಪಸ್ಥಿತರಿದ್ದರು. ಜಂ ಇಯ್ಯತುಲ್ ಮುಅಲ್ಲಿಮೀನ್ ಜಿಲ್ಲಾ ಕಾರ್ಯದರ್ಶಿ ಮುಹಮ್ಮದ್ ನವವಿ ಮುಂಡೋಳೆ ಸ್ವಾಗತಿಸಿದರು.
ಫೆ. 11ರಂದು ಬೆಳಿಗ್ಗೆಯಿಂದ ಮಧ್ಯಾಹ್ನದ ತನಕ ನಡೆಯಲಿರುವ ಸ್ಪರ್ಧೆಯಲ್ಲಿ ಜೂನಿಯರ್, ಸೀನಿಯರ್,ಸೂಪರ್ ಸೀನಿಯರ್, ಜನರಲ್,ಅಲುಮ್ನಿ,ಮುಅಲ್ಲಿಂ,ಗರ್ಲ್ಸ್ ವಿಭಾಗಗಳಲ್ಲಾಗಿ 67 ವಿಷಯಗಳಲ್ಲಿ ಆರು ವೇದಿಕೆಗಳಲ್ಲಿ ಒಂದು ಸಾವಿರದಷ್ಟು ಪ್ರತಿಭೆಗಳು ತಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸಲಿದ್ದಾರೆ.