ಪುಣಚ‌: ಪರಿಯಾಲ್ತಡ್ಕ, ಮೂಡಂಬೈಲು ಅಂಗನವಾಡಿ ಕೇಂದ್ರಗಳಿಗೆ ವಿಟ್ಲ ರೋಟರಿ ಕ್ಲಬ್ ವತಿಯಿಂದ ಮೇಜು, ಚಯರು ಕೊಡುಗೆ

0

ಪುಣಚ: ವಿಟ್ಲ ರೋಟರಿ ಕ್ಲಬ್ ವತಿಯಿಂದ ಪುಣಚ ಗ್ರಾಮದ ಪರಿಯಾಲ್ತಡ್ಕ ಮತ್ತು ಮೂಡಂಬೈಲು ಸರವು ಅಂಗನವಾಡಿ ಕೇಂದ್ರಗಳಿಗೆ ಮೇಜು ಮತ್ತು ಚಯರುಗಳ ಕೊಡುಗೆಯನ್ನು ಉಚಿತವಾಗಿ ಹಸ್ತಾಂತರಿಸಿದರು.
ಪುಣಚ ಪರಿಯಾಲ್ತಡ್ಕ ಅಂಗನವಾಡಿ ಕೇಂದ್ರದ ಶಿಕ್ಷಕಿ ರಂಜಿನಿ, ಸಹಾಯಕಿ ವೇದ ರವರಿಗೆ ಕೃಷ್ಣ ಭಟ್ ಚಯರುಗಳನ್ನು ಹಸ್ತಾಂತರಿಸಿದರು.
ಮೂಡಂಬೈಲು ಸರವು ಅಂಗನವಾಡಿ ಕೇಂದ್ರದ ಶಿಕ್ಷಕಿ ಹೇಮಮಾಲಿನಿ, ಸಹಾಯಕಿ ಕಮಲರವರಿಗೆ ವಿಟ್ಲ ರೆಡಿಮೇಡ್ ಸೆಂಟರ್’ನ ಮಾಲಕ ಬಾಲಕೃಷ್ಣರವರು ಮೇಜನ್ನು ಹಸ್ತಾಂತರಿಸಿದರು. ವಿಟ್ಲ ರೋಟರಿ ಅಧ್ಯಕ್ಷ ಕಿರಣ್ ಕುಮಾರ್, ಕಾರ್ಯದರ್ಶಿ ಮೋಹನ್, ಡೈರೆಕ್ಟರ್ ಡಾ. ವಿ.ಕೆ ಹೆಗ್ಗಡೆ, ಪ್ರಕಾಶ್ ನಾಯಕ್, ಸಂಜೀವ ಪೂಜಾರಿ, ವಸಂತ ಶೆಟ್ಟಿ, ಹಾಗೂ ಗ್ರಾ.ಪಂ. ಅಧ್ಯಕ್ಷೆ ಬೇಬಿ ಪಟ್ಟಿಕಲ್ಲು, ಸದಸ್ಯರು, ಶ್ರೀ ಶಕ್ತಿ ಗುಂಪಿನ ಸದಸ್ಯರು, ಬಾಲ ವಿಕಾಸ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here