ನೆಲ್ಯಾಡಿ: ಕಳೆದ ಎರಡು ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕೌಕ್ರಾಡಿ ಗ್ರಾಮದ ದೋಂತಿಲ ನಿವಾಸಿ, ರಿಕ್ಷಾ ಚಾಲಕ ಇಸ್ಮಾಯಿಲ್(38ವ.)ರವರು ಫೆ.12ರಂದು ಮುಂಜಾನೆ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಇಸ್ಮಾಯಿಲ್ ಅವರು ಕಳೆದ 15 ವರ್ಷ ನೆಲ್ಯಾಡಿ ಪೇಟೆಯಲ್ಲಿ ರಿಕ್ಷಾ ಬಾಡಿಗೆಗೆ ಓಡಾಟ ನಡೆಸುತ್ತಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆದು ಮನೆಯಲ್ಲಿಯೇ ವಿಶ್ರಾಂತಿಯಲ್ಲಿದ್ದವರು ಫೆ.12ರಂದು ಮುಂಜಾನೆ ನಿಧನರಾಗಿದ್ದಾರೆ. ಮೃತರು ತಂದೆ ಇಬ್ರಾಹಿಂ, ತಾಯಿ ನೆಬಿಸಾ, ಪತ್ನಿ ಶಾಯಿದಾ, ಮಕ್ಕಳಾದ ತೌಫಿಕ್, ತೌಸಿಯಾ, ಮುಸ್ತಾಫ, ತಸ್ರೀಫ ಅವರನ್ನು ಅಗಲಿದ್ದಾರೆ.