ಕಡಬ: ಇಲ್ಲಿನ ಅಡ್ಡಗದ್ದೆಯಲ್ಲಿರುವ ಹೊಯಿಗೆಕೆರೆಯಲ್ಲಿ ಮೊಸಳೆಯೊಂದು ಇರುವುದು ಕಂಡು ಬಂದಿದೆ. ಫೆ.12ರಂದು ಸ್ಥಳೀಯ ಯುವತಿಯೋರ್ವರು ಕೆರೆಯ ಬದಿಯಿಂದ ನಡೆದುಕೊಂಡು ಹೋಗುತ್ತಿದ್ದ ವೇಳೆ ಮೊಸಳೆ ಕಂಡು ಬಂದಿದೆ. ಈ ಕೆರೆಯಲ್ಲಿ ಇನ್ನೆರಡು ಮೊಸಳೆಗಳು ಇರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ಕೆರೆಯಲ್ಲಿ ನೀರು ಕಡಿಮೆಯಾಗುತ್ತಿರುವ ಸಮಯದಲ್ಲಿ ಈ ಕೆರೆಯಲ್ಲಿ ಮೊಸಳೆಗಳು ಕಾಣ ಸಿಗುತ್ತಿವೆ ಎಂದು ಸ್ಥಳೀಯ ನಿವಾಸಿ ಪದ್ಮಾವತಿ ಯವರು ತಿಳಿಸಿದ್ದಾರೆ.