ಜೆ ಇ ಇ ಮೈನ್ಸ್ ಪ್ರವೇಶ ಪರೀಕ್ಷೆ – ಇಂದ್ರಪ್ರಸ್ಥ ಪದವಿ ಪೂರ್ವಕಾಲೇಜಿನ ವಿದ್ಯಾರ್ಥಿಗಳ ಉತ್ತಮ ಸಾಧನೆ

0

ಉಪ್ಪಿನಂಗಡಿ: ಇಂದ್ರಪ್ರಸ್ಥ ಪದವಿ ಪೂರ್ವಕಾಲೇಜಿನ ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ಜೆ ಇ ಇ ಮೈನ್ಸ್ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದಿರುತ್ತಾರೆ.
ಈ ಪರೀಕ್ಷೆಯಲ್ಲಿ ದೇಶದ ಒಟ್ಟು 13 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಸುಮಂತ್ ಶೆಟ್ಟಿ ಎಸ್ – 92 ಪರ್ಸಂಟೈಲ್ , ಆಕಾಶ್ ಸಾಲಿಯಾನ್ – 91 ಪರ್ಸಂಟೈಲ್, ಮೋಕ್ಷ – 87ಪರ್ಸಂಟೈಲ್‌ ಪಡೆದು ಕೊಂಡಿದ್ದಾರೆ.

ಆಶಿತ್ ಬಿ – ಗಣಿತಶಾಸ್ತ್ರ- 91ಪರ್ಸಂಟೈಲ್, ಅಶ್ವಿನಿ ರಾವ್ – ರಸಾಯನಶಾಸ್ತ್ರ – 87 ಪರ್ಸಂಟೈಲ್, ಶಿಶಿರ್‌ ಎಸ್ ದೇವಾಡಿಗ- ಗಣಿತಶಾಸ್ತ್ರ- 86 ಪರ್ಸಂಟೈಲ್‌ ಮತ್ತು ವಿನೀಶ್ ಕುಮಾರ್–ಭೌತಶಾಸ್ತ್ರ- 85 ಪರ್ಸಂಟೈಲ್‌ ಪಡೆದಿರುತ್ತಾರೆ. ಇವರು ಒಂದೊಂದು ವಿಷಯದಲ್ಲಿ ಉತ್ತಮವಾದ ಸಾಧನೆ ಮಾಡಿರುತ್ತಾರೆ.
ಈ ಫಲಿತಾಂಶವು ಅತ್ಯಂತ ಆಶಾದಾಯಕವಾಗಿದ್ದು ಸಂಸ್ಥೆಯ ವಿದ್ಯಾರ್ಥಿಗಳು ಉತ್ತಮ ಫಲಿತಾಂಶವನ್ನು ಪಡೆದಿರುವುದು ಇಂದ್ರಪ್ರಸ್ಥ ಪದವಿ ಪೂರ್ವಕಾಲೇಜಿನ ಹಿರಿಮೆಯಾಗಿದೆ ಮತ್ತು ಕಾಲೇಜಿನ ವಿದ್ಯಾರ್ಥಿಗಳು ನಿರಂತರ ವರ್ಷಗಳಲ್ಲಿ ಜೆಇಇ ಅರ್ಹತೆಯನ್ನು ಪಡೆಯುತ್ತಿದ್ದು ಪ್ರಸಕ್ತ ಸಾಲಿನಲ್ಲೂ ಈ ವಿದ್ಯಾರ್ಥಿಗಳು ಪ್ರಶಂಸನೀಯ ಸಾಧನೆಯನ್ನು ಮಾಡಿರುತ್ತಾರೆ ಎಂದು ಸಂಸ್ಥೆಯ ಪ್ರಾಂಶುಪಾಲ ಎಚ್. ಕೆ.ಪ್ರಕಾಶ್‌ ಅವರು ಈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here