ಕೊಡಿಮಾರು ಗೆಳೆಯರ ಬಳಗದಿಂದ ಕೊಡಿಮಾರು ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ

0

ಕಾಣಿಯೂರು: ಕ್ರಿಕೆಟ್ ಅನಿರೀಕ್ಷಿತಗಳ ಅಟ ಯಾವಾಗ ಯಾವ ಓವರ್ ನಲ್ಲಿ ಏನಾಗುತ್ತದೆ ಎಂದು ಗೊತ್ತಿಲ್ಲ ಅದು ನಮ್ಮ ಜೀವನದ ಹಾಗೆ ಈ ಕ್ಷಣದಲ್ಲಿ ಏನಾಗುತ್ತದೆ, ಇವತ್ತು ಏನಾಗುತ್ತದೆ, ನಾಳೆ ಏನಾಗುತ್ತದೆ ಎಂದು ಗೊತ್ತಿಲ್ಲ ಎಂದು ಕಾಣಿಯೂರು, ಸವಣೂರು ರೈತ ಉತ್ಪಾದಕ ಕಂಪನಿಯ ಅಧ್ಯಕ್ಷ ಗಿರಿಶಂಕರ ಸುಲಾಯ ಹೇಳಿದರು. ಅವರು ಗೆಳೆಯರ ಬಳಗ ಕೊಡಿಮಾರು ಅಬೀರ ಇದರ ವತಿಯಿಂದ ಎಲಡ್ಕ ಸುಭಾಶ್ ಚಂದ್ರ ಬೋಸ್ ಕ್ರೀಡಾಂಗಣದಲ್ಲಿ ನಡೆದ ಕೊಡಿಮಾರು ಪ್ರೀಮಿಯರ್ ಲೀಗ್ 2024 ಕ್ರಿಕೆಟ್ ಪಂದ್ಯಾಟದ ಸಮಾರೋಪ ಸಮಾರಂಭದ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಕ್ರಿಕೆಟ್ ನಲ್ಲಿ ಪ್ರತಿ ಕ್ಷಣವೂ ರೋಚಕತೆಯಿಂದ ಕೂಡಿದ್ದು ಈ ರೋಚಕತೆಯನ್ನು ಸವಿಯುವ ಮೂಲಕ ಮನಸ್ಸಿನಲ್ಲಿರುವ ಕಷ್ಟಗಳನ್ನು ಮರೆತು ಮಾನಸಿಕ ನೆಮ್ಮದಿ ಪಡೆಯಲು ಸಾಧ್ಯ,ದೇಹದಲ್ಲಿರುವ ನೋವುಗಳನ್ನು ಮರೆಯಲು ಸಾಧ್ಯ ಜತೆಗೆ ನಾಯಕತ್ವ ಗುಣವನ್ನು ಪಡೆಯಲು ಸಾಧ್ಯ ಎಂದರು.


ಸಮಾರಂಭದ ಅಧ್ಯಕ್ಷತೆಯನ್ನು ಗೆಳೆಯರ ಬಳಗದ ಅಧ್ಯಕ್ಷ ಅಶ್ಲೇಷ್ ಮಿಪಾಲು ವಹಿಸಿದ್ದರು. ಕೊಡಿಮಾರು ದೈವಸ್ಥಾನದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಉದಯ ರೈ ಮಾದೋಡಿ, ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ಕಾಣಿಯೂರು ಇದರ ಅಧ್ಯಕ್ಷ ಕಿರಣ್ ಮಲೆಕೆರ್ಚಿ,ಗೆಳೆಯರ ಬಳಗದ ಗೌರವಾಧ್ಯಕ್ಷ ರಂಜಿತ್ ಹೊಸೊಕ್ಲು ಉಪಸ್ಥಿತರಿದ್ದರು. ಬೆಳಿಗ್ಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಕ್ರೀಡಾ ಕೂಟದ ಉದ್ಘಾಟನೆಯನ್ನು ಗೆಳಯರ ಬಳಗದ ಸ್ಥಾಪಕಾಧ್ಯಕ್ಷ ವಸಂತ ರೈ ಕಾರ್ಕಳ ಅವರು ನೆರವೇರಿಸಿದರು. ಗೆಳೆಯರ ಬಳಗದ ಅಧ್ಯಕ್ಷ ಅಶ್ಲೇಷ್ ಮಿಪಾಲು, ಬೆಳಂದೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಯಂತ ಅಬೀರ ಗೌರವಾಧ್ಯಕ್ಷ ರಂಜಿತ್ ಹೊಸೊಕ್ಲು, ಕಾರ್ಯದರ್ಶಿ ಪ್ರೀತಮ್ ಕಂಡೂರು ಉಪಸ್ಥಿತರಿದ್ದರು.

ಕ್ರಿಕೆಟ್ ಪಂದ್ಯಾಟದಲ್ಲಿ ಒಟ್ಟು ಆರು ತಂಡಗಳು ಭಾಗವಹಿಸಿದ್ದು ಲೀಗ್ ಮಾದರಿಯಲ್ಲಿ ಪಂದ್ಯಾಟ ನಡೆದು ಮನೋಜ್ ಬರೆಮೇಲು ಮತ್ತು ಜಿತೇಶ್ ಅಗಳಿ ಮಾಲಕತ್ವದ ಸದಾಶಿವ ವಾರಿಯರ್ಸ್ ತಂಡ ಪ್ರಥಮ ಸ್ಥಾನ, ಪ್ರಮೋದ್ ನೀರಜರಿ ಮತ್ತು ಪ್ರದೀಪ್ ನೀರಜರಿ ಮಾಲಕತ್ವದ ನೀರಜರಿ ಬ್ರದರ್ಸ್ ತಂಡ ದ್ವಿತೀಯ ಸ್ಥಾನ, ಸನತ್ ಬೈತ್ತಡ್ಕ ಮಾಲಕತ್ವದ ಉಳ್ಳಾಕುಲು ಪ್ರೆಂಡ್ಸ್ ಕಾಣಿಯೂರು ತೃತೀಯ ಸ್ಥಾನ ಪಡೆದುಕೊಂಡಿತ್ತು.

LEAVE A REPLY

Please enter your comment!
Please enter your name here