ಪುತ್ತೂರು: ನಗರಸಭಾ ವ್ಯಾಪ್ತಿಯ ರಾಗಿದಕುಮೇರು ಎಂಬಲ್ಲಿ ಈಗಾಗಲೇ ಕಾಂಕ್ರೀಟ್ ರಸ್ತೆ ಕಾಮಗಾರಿ ನಡೆಸಿದ್ದು ಇದಕ್ಕೆ ನೀರು ಸರಿಯಾಗಿ ಹಾಕದೆ ಕಾಮಗಾರಿಗಳು ಹಾಳಾಗುತ್ತಿರುವ ಬಗ್ಗೆ ಚಿಕ್ಕಮುಡ್ನೂರು ಕಲಿಯುಗ ಸೇವಾ ಸಮಿತಿಯಿಂದ ನಗರಸಭಾ ಅಯುಕ್ತರಿಗೆ ದೂರು ನೀಡಲಾಗಿದೆ.
ಕಾಂಕ್ರೀಟ್ ರಸ್ತೆಗಳಿಗೆ ಸರಿಯಾಗಿ ನೀರುಣಿಸದೇ ಇದ್ದಲ್ಲಿ ಕಾಮಗಾರಿಗಳ ಬಾಳ್ವಿಕೆ ಮೇಲೆ ಪರಿಣಾಮಗಳಾಗುತ್ತದೆ. ಗುತ್ತಿಗೆದಾರರು ಕಾಟಾಚಾರಕ್ಕಾಗಿ ನೀರಿನ ಟ್ಯಾಂಕರ್ಗಳನ್ನು ಕಾಮಗಾರಿ ನಡೆಸಿದ ಸ್ಥಳದಲ್ಲಿ ಇರಿಸುತ್ತಾರೆ. ದಿನದಲ್ಲಿ ಒಂದು ಬಾರಿಯೂ ಸರಿಯಾಗಿ ನೀರು ಹಾಕುತ್ತಾ ಇಲ್ಲ. ಹಲವಾರು ಕಡೆ ಗುತ್ತಿಗೆ ಪಡೆದುಕೊಂಡು ಕಾಂಕ್ರೀಟ್ ರಸ್ತೆಗಳ ಕ್ಯೂರಿಂಗ್ ವ್ಯವಸ್ಥೆಗಳ ಬಗ್ಗೆ ಗಮನ ಹರಿಸುತ್ತಾ ಇಲ್ಲ. ಸಂಬಂಧಪಟ್ಟ ಇಂಜಿನಿಯರ್ಗಳು ಕೂಡ ರಸ್ತೆಗಳಿಗೆ ನೀರು ಹಾಕಿಸುಲ್ಲಿ ನಿರಾಸಕ್ತಿ ತೋರಿಸುವುದು ಕಂಡು ಬರುತ್ತಿದೆ. ರಾಗಿದ ಕುಮೇರು ರಸ್ತೆಗೆ ಕೂಡಲೇ ನಿಗದಿತ ದಿನದವರೆಗೆ ನೀರು ಹಾಕಿಸಲು ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ವಿನಂತಿಸಲಾಗಿದೆ.