ಪುತ್ತೂರು: ಪೋಳ್ಯ ಶ್ರೀ ಲಕ್ಷ್ಮೀವೆಂಕಟರಮಣ ಮಠದಲ್ಲಿ ರಥೋತ್ಸವವು ಫೆ.16ರಂದು ನಡೆಯಲಿದೆ. ಫೆ.15ರಂದು ಬೆಳಿಗ್ಗೆ ಶ್ರೀ ನಾಗ ದೇವರಿಗೆ ತಂಬಿಲ, ಮಧ್ಯಾಹ್ನ ಮಹಾಪೂಜೆ, ರಾತ್ರಿ ಉತ್ಸವ, ಗರುಡೋತ್ಸವ, ಮುರದವರೆಗೆ ಶ್ರೀ ದೇವರ ಸವಾರಿ, ಮುರ ಶ್ರೀ ಲಕ್ಷ್ಮೀವೆಂಕಟರಮಣ ದೇವರ ಕಟ್ಟೆಯಲ್ಲಿ ಕಟ್ಟೆಪೂಜೆ ನಡೆಯಲಿದೆ.
ಫೆ.16ರಂದು ಪೂರ್ವಾಹ್ನ 9 ರಿಂದ 10 ಗಂಟೆಯ ತನಕ ಕಬಕ ಮತ್ತು ಪುತ್ತೂರು ವಿಪ್ರರಿಂದ ರುದ್ರಪಾರಾಯಣ, 10.30ಕ್ಕೆ ರಥಾರೋಹಣ, ರಾತ್ರಿ 9.15 ಕ್ಕೆ ರಥೋತ್ಸವ, ಸುಡುಮದ್ದು ಸೇವೆ, 9.30ಕ್ಕೆ ಕಟ್ಟೆಪೂಜೆ ಸೇವೆ (ಸಂಪಿಗೆ ಕಟ್ಟೆ), 10 ಗಂಟೆಗೆ ಉತ್ಸವ, ದರ್ಶನ ಬಲಿ, 11.30ರಿಂದ ವಸಂತ ಕಟ್ಟೆಪೂಜೆ, ಅಷ್ಠಾವಧಾನ ಸೇವೆ, ಬಟ್ಟಲು ಕಾಣಿಕೆ, 12.15ಕ್ಕೆ ಮಂಗಳಾರತಿ, ಮಂಗಳ ಪ್ರದಕ್ಷಿಣೆ, 12.30ಕ್ಕೆ ಮಹಾಮಂಗಳಾರತಿ ನಡೆಯಲಿದೆ. ಫೆ.17ರಂದು ಬೆಳಿಗ್ಗೆ 8.30ಕ್ಕೆ ಬಾಗಿಲು ತೆರೆಯುವ ಮುಹೂರ್ತ, ಸಂಪ್ರೋಕ್ಷಣೆ ಮಹಾಪೂಜೆ, ಅನ್ನಸಂತರ್ಪಣೆ, ಅಪರಾಹ್ನ 3 ಗಂಟೆಗೆ ವೈದಿಕ ಮಂತ್ರಾಕ್ಷತೆ, ಸಂಜೆ 5 ರಿಂದ ಧೂಮಾವತಿ – ಗುಳಿಗ ದೈವಗಳ ತಂಬಿಲ ಸೇವೆ, ಭಂಡಾರ ತೆಗೆಯುವುದು ಮತ್ತು ನೇಮ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮ:
ಫೆ.16ರಂದು ರಾತ್ರಿ 7ಗಂಟೆಯಿಂದ ವಿಠಲ ನಾಯಕ್ ಕಲ್ಲಡ್ಕ ಮತ್ತು ಬಳಗದವರಿಂದ ಗೀತಾ ಸಾಹಿತ್ಯ ಸಂಭ್ರಮ ನಡೆಯಲಿದೆ.