ಶಾಂತಿನಗರ ಶಾಲೆಯಲ್ಲಿ ಕೆಡ್ಡಸದ ಪಲಬು ಕಾರ್ಯಕ್ರಮ

0

ನೆಲ್ಯಾಡಿ: ತುಳುನಾಡ ಸಂಸ್ಕೃತಿಯ ಪ್ರತೀಕಗಳಲ್ಲಿ ಒಂದಾದ ಕೆಡ್ಡಸ ಆಚರಣೆಯನ್ನು ವಿದ್ಯಾರ್ಥಿಗಳಿಗೆ ತಿಳಿಸುವ ದೃಷ್ಠಿಯಿಂದ ಗೋಳಿತ್ತಟ್ಟು ಶಾಂತಿನಗರ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಕೆಡ್ಡಸದ ಪಲಬು ಎಂಬ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.


ಊರಿನ ಹಿರಿಯ ನಾಗರಿಕರಾದ ಚೆನ್ನಮ್ಮ ಬರಮೇಲು ಅವರು ಭೂಮಿಗೆ ಎಣ್ಣೆ ಬಿಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಅವರು ಕೆಡ್ಡಸ ಸಂಪ್ರದಾಯದ ಹಿನ್ನೆಲೆ ಹಾಗೂ ಆಚರಣೆಯ ಕ್ರಮವನ್ನು ವಿದ್ಯಾರ್ಥಿಗಳಿಗೆ ಹೇಳಿಕೊಟ್ಟರು. ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಪುರುಷೋತ್ತಮ ಗುರುಂಪು, ಮುಖ್ಯ ಅಡುಗೆ ಸಿಬ್ಬಂದಿ ಮೀನಾಕ್ಷಿ, ಅಂಗನವಾಡಿ ಕಾರ್ಯಕರ್ತೆ ರೀತಾಕ್ಷಿ, ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸಹಾಯಕಿ ಲೀನಾ, ಆಶಾ ಕಾರ್ಯಕರ್ತೆ ಜಯಮಾಲ, ಶಾಲಾ ದಾನಿಗಳಾದ ಶಿವಪ್ರಸಾದ್ ಶಾಂತಿನಗರ, ಎಸ್‌ಡಿಎಂಸಿ ಸದಸ್ಯರಾದ ಹರೀಶ್ ಡೆಂಬಲೆ ಮತ್ತಿತರರು ಉಪಸ್ಥಿತರಿದ್ದರು.


ಶಾಲಾ ಮುಖ್ಯಗುರು ಪ್ರದೀಪ್ ಬಾಕಿಲ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಮಂಜುನಾಥ ಮಣಕವಾಡ ವಂದಿಸಿದರು. ಶಿಕ್ಷಕಿಯರಾದ ಪ್ರಮೀಳಾ, ಸುನಂದಾ, ತಾರಾ ಹಾಗೂ ವೀಕ್ಷಿತಾ ಸಹಕರಿಸಿದರು.

LEAVE A REPLY

Please enter your comment!
Please enter your name here