ಪುತ್ತೂರು: ಶ್ರೀ ಕ್ಷೇತ್ರ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್‌ನಲ್ಲಿ ಫೆ.18 ಮತ್ತು 19ರಂದು ನಡೆಯುವ ತುಳುನಾಡ ಜಾತ್ರೆ – ಶ್ರೀ ಒಡಿಯೂರು ರಥೋತ್ಸವ ‘ಸಿರಿರಾಮೆ’ ತುಳು ಸಾಹಿತ್ಯ ಸಮ್ಮೇಳನದ ಅಂಗವಾಗಿ ಫೆ.16ರಂದು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಬಳಿಯಿಂದ ಬೃಹತ್ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣಾ ಮೆರವಣಿಗೆ ನಡೆಯಿತು. ನೂರಾರು ಆಟೋ ರಿಕ್ಷಾಗಳು ಮತ್ತು ಇತರ ವಾಹನಗಳೊಂದಿಗೆ ಒಡಿಯೂರಿಗೆ ಹೊರೆಕಾಣಿಕೆ ತೆರಳಿತು.
ಸವಣೂರು ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆಗಳ ಸಂಚಾಲಕ ಕೆ ಸೀತಾರಾಮ ರೈ ಸವಣೂರು ಮತ್ತು ಒಡಿಯೂರು ಹೊರೆಕಾಣಿಕೆ ಸಮಿತಿ ಗೌರವಾಧ್ಯಕ್ಷ ಡಾ.ಸುರೇಶ್ ಪುತ್ತೂರಾಯ ತೆಂಗಿನ ಕಾಯಿ ಒಡೆಯುವ ಮೂಲಕ ಹಸಿರು ಹೊರೆಕಾಣಿಕೆಗೆ ಚಾಲನೆ ನೀಡಿದರು.
ಹೊರೆಕಾಣಿಕೆ ಕೇಂದ್ರ ಸಮಿತಿ ಕಾರ್ಯಾಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಪುತ್ತೂರು ತಾಲೂಕು ಸಮಿತಿ ಅಧ್ಯಕ್ಷ ಸೀತಾರಾಮ ರೈ ಕೆದಂಬಾಡಿಗುತ್ತು, ಒಡಿಯೂರು ಗುರು ದೇವಾ ಸೇವಾ ಬಳಗದ ಅಧ್ಯಕ್ಷ ಸುಧೀರ್ ನೋಂಡಾ, ಹೊರೆ ಕಾಣಿಕೆ ಸಮಿತಿ ಕಾರ್ಯಾಧ್ಯಕ್ಷ ಕೃಷ್ಣ ಎಂ ಅಳಿಕೆ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಕೆ ವಿ ಶ್ರೀನಿವಾಸ್, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ಜಯಪ್ರಕಾಶ್ ರೈ, ಹೊರೆಕಾಣಿಕೆ ಸಮಿತಿ ಪ್ರಧಾನ ಕಾರ್ಯದರ್ಶಿ ನವೀನ್ ಕುಲಾಲ್, ಕೋಶಾಧಿಕಾರಿ ಅಶೋಕ್ ರೈ ಅರ್ಪಿಣಿಗುತ್ತು, ಸಂಚಾಲಕ ಗೋಪಿನಾಥ್ ಶೆಟ್ಟಿ, ಪಿ.ಕೆ.ಗಣೇಶ್, ಸಂಘಟನಾ ಕಾರ್ಯದರ್ಶಿಗಳಾದ ಹರಿಣಾಕ್ಷಿ ಜೆ ಶೆಟ್ಟಿ, ಕವನ್ ನಾಕ್, ಕಾರ್ಯಕಾರಿ ಸಮಿತಿ ಸದಸ್ಯರಾದ ಹೀರಾ ಉದಯ್, ನವೀನ್‌ಚಂದ್ರ ನಾಕ್, ಸುದರ್ಶನ್ ನಾಕ್, ಮೋಹನ್ ಶೆಟ್ಟಿ, ಹರೀಶ್ ಪಕ್ಕಳ, ಭವಾನಿಶಂಕರ ಶೆಟ್ಟಿ, ಅರವಿಂದ ಪೆರಿಗೇರಿ, ತಾರಾನಾಥ, ಒಡಿಯೂರು ವಜ್ರಮಾತಾ ಸಮಿತಿ ಅಧ್ಯಕ್ಷ ನಯನಾ ರೈ, ಶಾರದಾ ಅರಸ್, ಶಾರದಾ ಕೇಶವ್, ಉದಯ ಹೆಚ್, ಗ್ರಾಮ ವಿಕಾಸ ಯೋಜನೆ ಸದಸ್ಯರು ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.