ನಿಡ್ಯಾಣ: ರಿಕ್ಷಾ ಪಲ್ಟಿ-ಮೂವರಿಗೆ ಗಾಯ

0

ಪುತ್ತೂರು: ರಿಕ್ಷಾ ಪಲ್ಟಿಯಾಗಿ ಮೂವರು ಗಾಯಗೊಂಡಿರುವ ಘಟನೆ ತಿಂಗಳಾಡಿ ಸಮೀಪದ ನಿಡ್ಯಾನ ಎಂಬಲ್ಲಿ ಫೆ.16ರಂದು ನಡೆದಿದೆ.

ಮಾಡಾವು ಕಡೆಯಿಂದ ತಿಂಗಳಾಡಿ ಕಡೆಗೆ ನಾಸಿರ್ ಎಂಬವರು ಚಲಾಯಿಸುತ್ತಿದ್ದ ಆಟೋ ರಿಕ್ಷಾ ನಿಡ್ಯಾನ ಬಸ್ ತಂಗುದಾಣದ ಎದುರು ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಘಟನೆಯಿಂದ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಮೂವರು ಗಾಯಗೊಂಡಿದ್ದು, ಅವರನ್ನು ಸ್ಥಳೀಯರ ಸಹಕಾರದಿಂದ ಆಸ್ಪತ್ರೆಗೆ ಪುತ್ತೂರು ಖಾಸಗಿ ದಾಖಲಿಸಲಾಗಿದೆ. ಗಾಯಗೊಂಡವರು ಎಲ್ಲಿಯವರು ಎಂಬ ಮಾಹಿತಿ ತಿಳಿದು ಬಂದಿಲ್ಲ. ರಿಕ್ಷಾ ಚಾಲಕ ನಾಸಿರ್ ಯಾವುದೇ ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದ್ದಾರೆ.

LEAVE A REPLY

Please enter your comment!
Please enter your name here