ಪುರುಷರಕಟ್ಟೆ ಆತ್ರೇಯ ಮಲ್ಟಿ ಸ್ಪೆಷಾಲಿಟಿ ಕ್ಲಿನಿಕ್‌ನಲ್ಲಿ ಗುದಾಗತ ರೋಗಗಳ ಉಚಿತ ತಪಾಸಣಾ ಶಿಬಿರ

0

ಪುತ್ತೂರು: ಪುರುಷರಕಟ್ಟೆ ಆತ್ರೇಯ ಮಲ್ಟಿ ಸ್ಪೆಷಾಲಿಟಿ ಕ್ಲಿನಿಕ್‌ನಲ್ಲಿ ಗುದಾಗತ ರೋಗ(ಪೈಲ್ಸ್, ಫಿಷರ್, ಫಿಸ್ತುಲ) ಉಚಿತ ತಪಾಸಣಾ ಶಿಬಿರವು ಫೆ.18ರಂದು ಅಪರಾಹ್ನ ನಡೆಯಲಿದೆ.
ಪೈಲ್ಸ್, ಫಿಷರ್, ಫಿಸ್ತುಲ ಮುಂತಾದ ಗುದ ಸಂಬಂಧಿ ರೋಗಗಳು, ಮಲಬದ್ಧತೆ, ಗುದದ್ವಾರದಲ್ಲಿ ಊತ, ನೋವು, ಕೀವು, ತುರಿಕೆ, ರಕ್ತಸ್ರಾವ ಮುಂತಾದ ಲಕ್ಷಣಗಳು ಕಾಣಿಸಿದರೆ ನಿರ್ಲಕ್ಷಿಸದೆ ತಪಾಸಣೆ ಮಾಡಿಕೊಂಡು ಮುಂದೆ ಆಗುವ ಅನೇಕ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಳ್ಳಬಹುದು.

ಆತ್ರೇಯ ಮಲ್ಟಿಸ್ಪೆಷಾಲಿಟಿ ಕ್ಲಿನಿಕ್‌ನಲ್ಲಿ ಉಚಿತವಾಗಿ ಶಲ್ಯ ತಂತ್ರ ವಿಭಾಗದ ತಜ್ಞ ವೈದ್ಯರ ತಪಾಸಣೆ, ಸಲಹೆ ಮತ್ತು ಸಂದರ್ಶನವನ್ನು ಆಯೋಜಿಸಲಾಗಿದೆ. ಅಗತ್ಯವಿದ್ದಲ್ಲಿ ಶಸ್ತ್ರಕ್ರಿಯೆಗೆ ಒಳಪಡದೆ ಆಯುರ್ವೇದೀಯ ಕ್ಷಾರ ಕರ್ಮವನ್ನು ಅತ್ಯಂತ ರಿಯಾಯಿತಿ ದರದಲ್ಲಿ ಮಾಡಲಾಗುವುದು. ಇದರ ಪ್ರಯೋಜನೆಯನ್ನು ಸಾರ್ವಜನಿಕರು ಪಡೆದುಕೊಳ್ಳಬಹುದು. ಶಿಬಿರದಲ್ಲಿ ಭಾಗವಹಿಸುವವರು ಫೆ.17 ಮುಂಚಿತವಾಗಿ ತಮ್ಮ ಹೆಸರ ನೊಂದಾಯಿಸಿಕೊಳ್ಳಬೇಕು. ಉಚಿತ ತಪಾಸಣಾ ಶಿಬಿರವು ಮಧ್ಯಾಹ್ನ 2 ಗಂಟೆಯಿಂದ ಸಂಜೆ 5 ಗಂಟೆಯ ತನಕ ನಡೆಯಲಿದೆ. ಶಲ್ಯ ತಂತ್ರ ವಿಭಾಗದ ತಜ್ಞ ವೈದ್ಯರು ಪ್ರತೀ ಆದಿತ್ಯವಾರ ಸಂಜೆ 3.30ರಿಂದ 5.30ರ ವರೆಗೆ ಲಭ್ಯರಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ 9036156242/9844638242 ನಂಬರ್‌ನ್ನು ಸಂಪರ್ಕಿಸುವಂತೆ ಕ್ಲಿನಿಕ್‌ನ ಚೀಫ್ ಫಿಸಿಷಿಯನ್ ಮತ್ತು ಆಯುರ್ವೇದ ತಜ್ಞ ಡಾ ಸುಜಯ್ ತಂತ್ರಿ, ಕೆಮ್ಮಿಂಜೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here